ಬೆಂಗಳೂರು:ಕಳೆದ ಒಂದು ವಾರದಿಂದ ಮಳೆ ಮತ್ತು ತೇವಾಂಶ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ದಿಢೀರ್ ಏರಿಕೆಯಾಗಿದೆ. ಬೆಂಗಳೂರು, ಮಂಡ್ಯ, ಮೈಸೂರು, ಮಂಗಳೂರು, ಕಲಬುರಗಿ, ಬೀದರ್, ಗದಗ, ರಾಯಚೂರು ಮತ್ತು ವಿಜಯಪುರದಲ್ಲಿ ಗರಿಷ್ಠ ತಾಪಮಾನ ಆಗಸ್ಟ್ 2ನೇ ವಾರದಲ್ಲಿದ್ದ 22-24 ಡಿಗ್ರಿ ಸೆಲ್ಸಿಯಸ್​ನಿಂದ 30-32 ಡಿಗ್ರಿ ಸೆಲ್ಸಿಯಸ್​ಗೆ ಏರಿಕೆಯಾಗಿದೆ. ತಿಳಿ ವಾತಾವರಣ ಇರುವುದರಿಂದ ಬೇಸಿಗೆಯಂತೆ ಭಾಸವಾಗುತ್ತಿದೆ. ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಯಥಾಸ್ಥಿತಿ ಮುಂದುವರಿದಿದೆ.
ಈ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಭಾರಿ ಮಳೆಯಾಗಿತ್ತು. ಇದರಿಂದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಇಳಿಕೆಯಾಗಿತ್ತು. ಈಗ ಮಳೆ ಬಿಡುವು ಕೊಟ್ಟಿದ್ದರಿಂದ ತಾಪಮಾನ ಏರಿಕೆಯಾಗಿದೆ. ಮಂಡ್ಯ, ಮೈಸೂರು, ರಾಯಚೂರು ಮತ್ತು ಕಲಬುರಗಿಯಲ್ಲಿ ಗುರುವಾರ ಗರಿಷ್ಠ ತಾಪಮಾನ 32 ಡಿಗ್ರಿ, ವಿಜಯಪುರ, ಬೀದರ್, ಬೆಂಗಳೂರು ಹಾಗೂ ಮಂಗಳೂರಿನಲ್ಲಿ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಬಿಸಿಲು ವಾತಾವರಣ ಇರಲಿದೆ. ಕರಾವಳಿ ಭಾಗದಲ್ಲಿ ಸ್ವಲ್ಪ ಮೋಡಗಳು ಇರುವುದರಿಂದ ಸಾಧಾರಣ ಮಳೆ ಬೀಳಬಹುದು. ಹಿಂದು ಮಹಾಸಾಗರದಿಂದ ಅರಬ್ಬಿ ಸಮುದ್ರ ಮೂಲಕ ಮೋಡಗಳು ರಾಜ್ಯದತ್ತ ಬಂದರೆ ಮಳೆ ಬರುವುದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಬಹುದು.
| ಎಂ.ಬಿ.ರಾಜೇಗೌಡಹವಾಮಾನ ವೈಪರೀತ್ಯ ವಿಜ್ಞಾನಿ
ಆಗಸ್ಟ್ 12ರಿಂದ 18ರವರೆಗೆ ರಾಜ್ಯದಲ್ಲಿ 55 ಮಿಮೀ ಮಳೆಯಾಗ ಬೇಕಿತ್ತು. ಆದರೆ 24 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.56 ಕಡಿಮೆಯಾಗಿದೆ. ಬೆಳಗಾವಿ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳೆ ಕುಂಠಿತ ವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಮುಂದಿನ ಒಂದು ವಾರ ಮಳೆ ಕೊರತೆ ಕಾಡಲಿದೆ. ಅರಬ್ಬಿ ಸಮುದ್ರ, ಬಂಗಾಳಕೊಲ್ಲಿಯಲ್ಲಿ ಮಳೆಗೆ ಸಂಬಂಧಿತ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ಸೇರಿ ಪೂರಕ ವಾತಾವರಣ ಉಂಟಾಗುತ್ತಿಲ್ಲ. ಇದರಿಂದ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಾಫಿನಾಡಿಗೆ ಸಿದ್ದರಾಮಯ್ಯ ಆಗಮನ: ಶೃಂಗೇರಿಗೆ ಕಾಲಿಡದಂತೆ ‘ಗೋ ಬ್ಯಾಕ್ ಅಭಿಯಾನ’

ಕನಿಷ್ಠ ವೇತನ ಪಡೆಯಲು ‘ಬಿಸಿಯೂಟ ಕಾರ್ಯಕರ್ತೆ’ಯರು ಅರ್ಹರಾಗಿಲ್ಲ; ಹೈಕೋರ್ಟ್​ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 7 =
Remember me
