ಬೆಂಗಳೂರು:ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜಮೀನು ಮಾಲೀಕತ್ವದ ಸುರಕ್ಷತೆ, ವಂಚನೆ ಮುಕ್ತ ನೋಂದಣಿ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿ, ಆದೇಶ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದರು.
ವಿಕಾಸಸೌಧದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸ್ತಾವೇಜು ನೋಂದಣಿ ಕಾಲಕ್ಕೆ ವ್ಯಕ್ತಿತ್ವ ದೃಢೀಕರಿಸಲು ಆಧಾರ್ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಇಲ್ಲವೇ ಪಾಸ್‌ಪೋರ್ಟ್ ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂದರು.
ಕಾವೇರಿ ಎರಡನೇ ತಂತ್ರಾಂಶದಲ್ಲಿ ನ್ಯೂನತೆಗಳನ್ನು ಹೋಗಲಾಡಿಸಲಾಗಿದೆ. ನೋಂದಣಿಗೆ ಕಾಲಾವಕಾಶ ಪಡೆಯುವುದೂ ಕಡ್ಡಾಯ. ದಸ್ತಾವೇಜು ನೋಂದಣಿಗೆ ಆನ್‌ಲೈನ್‌ನಲ್ಲಿ ವ್ಯಕ್ತಿತ್ವ ಗುರುತು ದೃಢೀಕರಣಕ್ಕೆ ಮೂರು ದಾಖಲೆಗಳಲ್ಲಿ ಯಾವುದಾದರೊಂದನ್ನು ಲಗತ್ತಿಸಬೇಕಾಗುತ್ತದೆ ಎಂದರು.
ನಕಲಿ ಗುರುತಿನ ಚೀಟಿ, ದಾಖಲೆಗಳನ್ನು ಬಳಸಿಕೊಂಡು ಯಾರದೋ ಆಸ್ತಿ ಮತ್ಯಾರೋ ನೋಂದಣಿ ಮಾಡಿಕೊಂಡು, ಮತ್ಯಾರಿಗೋ ಮಾರಾಟ ಮಾಡುವ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದವು.
ಜಮೀನಿನ ವ್ಯವಸ್ಥಿತ ದರೋಡೆಯಿಂದ ಜಮೀನಿನ ನೈಜ ಮಾಲೀಕರು ಅಥವಾ ಖರೀದಿಸಿದವರು ವಂಚನೆಗೆ ಒಳಗಾಗುತ್ತಿದ್ದರು. ವ್ಯವಸ್ಥಿತ ವಂಚನೆ ದಂಧೆಗೆ ಕಡಿವಾಣ ಹಾಕಲು ತಂತ್ರಜ್ಞಾನ ಬಳಸಿ ಮೂರು ತಾಲೂಕುಗಳಲ್ಲಿ ವ್ಯಕ್ತಿತ್ವ ಗುರುತು ದೃಢೀಕರಣದ ಪ್ರಯೋಗವಾಗಿತ್ತು.
ಪ್ರಾಯೋಗಿಕ ಪ್ರಯತ್ನ ಸಲವಾಗಿರುವ ಕಾರಣ ರಾಜ್ಯಾದ್ಯಂತ ಜಾರಿಗೆ ತರಲಾಗುತ್ತಿದೆ. ಜಮೀನಿನ ಮಾಲೀಕರ ಸುರಕ್ಷತೆ, ವಿಶ್ವಾಸಪೂರ್ಣ ಆಸ್ತಿವಹಿವಾಟು ದೃಷ್ಟಿಯಿಂದ ಕ್ರಮವಹಿಸಿದ್ದು, ಅನನುಕೂಲ ಎಂದು ಸಾರ್ವಜನಿಕರು ಭಾವಿಸದೆ ಸಹಕರಿಸಬೇಕು ಎಂದು ಕೃಷ್ಣಬೈರೇಗೌಡ ಕೋರಿದರು.
‘ಎಲ್ಲಿ ಬೇಕಾದರೂ’ (ಎನಿ ವೇರ್) ಆಸ್ತಿ ನೋಂದಣಿ ವ್ಯವಸ್ಥೆಯ ಪ್ರಯೋಗ ತುಮಕೂರು ಮತ್ತು ಬೆಳಗಾವಿ ಜಿಲ್ಲೆಯಗಳಲ್ಲಿ ಯಶಸ್ವಿಯಾಗಿದೆ. ಸೆ.2ರಿಂದ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ ಎಂದು ಪ್ರಕಟಿಸಿದರು.
ಆನ್‌ಲೈನ್‌ನಲ್ಲಿ ಆಯಾ ಜಿಲ್ಲೆ ವ್ಯಾಪ್ತಿಯ ಯಾವುದಾದರೂ ಒಂದು ಉಪ ನೋಂದಣಾಧಿಕಾರಿ ಕಚೇರಿಯ ಕಾಲಾವಕಾಶ ಪಡೆದು, ಆಸ್ತಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ರಾಜ್ಯದ 257 ಉಪ ನೋಂದಣಾಧಿಕಾರಿ ಕಚೇರಿಗಳ ಪೈಕಿ ಸರಾಸರಿ 200 ಕಚೇರಿಗಳಲ್ಲಿ ಹೆಚ್ಚಿನ ಕೆಲಸದ ಒತ್ತಡವಿಲ್ಲ, ಜನದಟ್ಟಣೆಯಿರುವುದಿಲ್ಲ, ಯಾವುದೇ ತೊಂದರೆಯಿಲ್ಲ.
ಆದರೆ ಉಳಿದ 50ಕ್ಕೂ ಹೆಚ್ಚು ಕಚೇರಿಗಳಲ್ಲಿ ನೋಂದಣಿಗೆ ನೂಕುನುಗ್ಗಲು, ದಟ್ಟಣೆ, ಸಿಬ್ಬಂದಿ ಮೇಲೂ ಕೆಲಸದ ಭಾರ ಹೆಚ್ಚಿರುವುದನ್ನು ಮನಗಂಡು ಎಲ್ಲಿ ಬೇಕಾದರೂ ನೋಂದಣಿ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಆಯಾ ತಾಲೂಕು ವ್ಯಾಪ್ತಿಗೆ ಸೀಮಿತವಾಗಿದ್ದರಿಂದ ಕೆಲಸ ಒತ್ತಡದ ಏರುಪೇರು, ಕಚೇರಿ ಜಾಗವೂ ಕಿರಿದಾದ್ದರಿಂದ ಬಂದವರಿಗೆ ಕುಳಿತುಕೊಳ್ಳಲು ವ್ಯವಸ್ಥೆಯಿಲ್ಲದ ಪರದಾಟವಿದೆ ಎಂಬುದನ್ನು ಕೃಷ್ಣಬೈರೇಗೌಡ ಉಲ್ಲೇಖಿಸಿದರು.
ಆಧುನಿಕ ತಂತ್ರಜ್ಞಾನದ ಬಲದಿಂದ ಆಯಾ ಜಿಲ್ಲೆ ವ್ಯಾಪ್ತಿಯ ಯಾವುದಾದರೊಂದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಸ್ತಾವೇಜು ನೋಂದಣಿಗೆ ಅವಕಾಶ ಕಲ್ಪಿಸಿದ್ದು, ಪ್ರಕ್ರಿಯೆ ಸುಲಲಿತವಾಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಿಗೆ ಅನ್ವಯವಾಗಲಿದೆ. ಆಸ್ತಿ ನೋಂದಣಿ ದೃಷ್ಟಿಯಿಂದ ಬೆಂಗಳೂರು ನಗರ ಜಿಲ್ಲೆಯನ್ನು ಐದು ಜಿಲ್ಲೆಗಳನ್ನಾಗಿ ವಿಂಗಡಣೆ ಮಾಡಲಾಗಿದೆ.
ಐದು ಜಿಲ್ಲೆಗಳಲ್ಲಿ ಐದರಿಂದ ಆರು ಉಪ ನೋಂದಣಾಧಿಕಾರಿ ಕಚೇರಿಗಳಿವೆ. ಈ ಕಚೇರಿಗಳ ಪೈಕಿ ಯಾವುದಾದರೊಂದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಗೆ ಅವಕಾಶವಿದೆ ಎಂದು ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು.
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಟ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:five × 1 =
Remember me
