ಬೆಂಗಳೂರು:ರಾಜ್ಯದಲ್ಲಿ ಆತಂಕ ಸೃಷ್ಟಿಸಿದ್ದ ಕೋವಿಡ್​ 2ನೇ ಅಲೆಯ ತೀವ್ರತೆ ನಿಧಾನವಾಗಿ ತಗ್ಗುತ್ತಿದೆ. ಮರಣಮೃದಂಗ ಬಾರಿಸಿದ್ದ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದ್ದರೂ 22 ಜಿಲ್ಲೆಗಳಲ್ಲಿ ಹೆಚ್ಚಿದೆ. ಹೀಗಾಗಿ ಹೊರಜಿಲ್ಲೆಗಳಿಂದ ಮರುವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ರಾಜಧಾನಿಯಲ್ಲಿ ಮತ್ತೆ ಸೋಂಕು ಉಲ್ಬಣಗೊಳ್ಳುವ ಆತಂಕ ಶುರುವಾಗಿದೆ. ರಾಜ್ಯ ಕೋವಿಡ್​ ವಾರ್​ ರೂಂ ಅಂಕಿ&ಅಂಶಗಳ ಪ್ರಕಾರ, ಬೆಂಗಳೂರು ನಗರಕ್ಕೆ ಹೋಲಿಸಿದರೆ ಹಾಸನ, ತುಮಕೂರು, ಮೈಸೂರು, ಮಂಡ್ಯ, ಶಿವಮೊಗ್ಗ, ದಣ ಕನ್ನಡ, ಚಿಕ್ಕಮಗಳೂರು, ಬೆಳಗಾವಿ, ಉಡುಪಿ, ಚಿತ್ರದುರ್ಗ ಸೇರಿ 22 ಜಿಲ್ಲೆಗಳಲ್ಲಿನ ನಗರ ಪ್ರದೇಶ (ಶೇ.50)ಕ್ಕಿಂತ ಗ್ರಾಮೀಣ ಭಾಗಗಳಲ್ಲಿ ಸೋಂಕು ಪ್ರಕರಣಗಳು (ಶೇ.85) ಹೆಚ್ಚು ವರದಿಯಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಲಾಕ್​ಡೌನ್​ ಅವಧಿಯಲ್ಲೇ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ ಆತುರದಲ್ಲಿ ಅನ್​ಲಾಕ್​ ನಿರ್ಧಾರ ಕೈಗೊಂಡರೆ, ನಗರ ಪ್ರದೇಶಗಳಿಗೆ ಅಪಾಯವಾಗಲಿದೆ ಎಂದು ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
| ಪಂಕಜ ಕೆ.ಎಂ.
ಗ್ರಾಮಗಳಲ್ಲೇ ಸೋಂಕು ಹೆಚ್ಚುಜಿಲ್ಲಾವಾರು ಸೋಂಕು ಪ್ರಕರಣ ಗಮನಿಸಿದರೆ ಹಾಸನ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚು (10,100) ವರದಿಯಾಗಿವೆ. ಅಲ್ಲಿನ ನಗರ ಪ್ರದೇಶದಲ್ಲಿ 3,368 ಕೇಸ್​ ದಾಖಲಾಗಿವೆ. ಅದೇ ರೀತಿ ತುಮಕೂರು ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 7,876 ಕೇಸ್​ ಇದ್ದರೆ, ನಗರ ಪ್ರದೇಶದಲ್ಲಿ 2,214 ದಾಖಲಾಗಿವೆ.
ಅಪಾಯ ಹೇಗೆ?* ಲಾಕ್​ಡೌನ್​ ಜಾರಿಗೊಳಿಸುತ್ತಲೇ ನಗರದಿಂದ ಹಳ್ಳಿಗಳಿಗೆ ಹೋದವರು ಮರುವಲಸೆ* ಈಗಾಗಲೆ 3&4 ದಿನಗಳಿಂದ ಮರುವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಳ* ಜಿಲ್ಲೆಗಳಲ್ಲಿ ಸೋಂಕು ಇಳಿಕೆ ಆಗಿಲ್ಲ, ಅಲ್ಲಿಂದ ಬರುವವರಿಂದ ಇಲ್ಲಿ ಹರಡುವ ಸಾಧ್ಯತೆ* ಜನ ಒಮ್ಮೆಲೆ ನಗರಕ್ಕೆ ಬರುವು ದರಿಂದ ಸೋಂಕು ಉಲ್ಬಣ* ಟೆಸ್ಟ್​ ಸಂಖ್ಯೆ ಹೆಚ್ಚಿಸಿದರೂ ಲಕ್ಷಣರಹಿತ ಸೋಂಕಿತರು ಹರಡುವ ಅಪಾಯ
ಹಳ್ಳಿಗಳಲ್ಲಿ ಸೋಂಕಿತರಿಗೆ ಮನೆ ಆರೈಕೆ ಸಲ್ಲದುಗ್ರಾಮೀಣ ಪ್ರದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು ಕಳವಳಕಾರಿಯಾಗಿದೆ. ಹಾಗಾಗಿಯೇ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಕೋವಿಡ್​ ಸೋಂಕಿತ ರೋಗಿಯನ್ನು ಮನೆಯಲ್ಲಿ ಪ್ರತ್ಯೇಕಿಸಲು ಅವಕಾಶ ನೀಡದೆ ಅವರ ಆರೋಗ್ಯ ಪರಿಸ್ಥಿತಿಗೆ ಅನುಗುಣವಾಗಿ ಆಸ್ಪತ್ರೆ ಅಥವಾ ಕೋವಿಡ್​ ಆರೈಕೆ ಕೇಂದ್ರಗಳಲ್ಲಿ ದಾಖಲಿಸಲು ಸೂಚಿಸಲಾಗಿದೆ. ಸೋಂಕು ಹರಡುವಿಕೆ ತಡೆಯಲು ಈ ಕ್ರಮ ಅತ್ಯವಶ್ಯಕವಾಗಿದೆ ಎಂದು ಕೋವಿಡ್​ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಗ್ರಾಮಗಳಲ್ಲಿ ನಿಯಂತ್ರಣ ಸವಾಲುಗ್ರಾಮೀಣ ಭಾಗಗಳಲ್ಲಿ ಮಾರ್ಗಸೂಚಿ ನಿಯಮ ಅನುಸರಿಸಿದರೂ ಅಲ್ಲಿನ ಸಾಕ್ಷರತೆ ಮಟ್ಟ. ಜೀವನಶೈಲಿಯಲ್ಲಿ ಸಮತೋಲನ ಕಾಯ್ದುಕೊಂಡು ಸೋಂಕು ನಿಯಂತ್ರಿಸುವುದು ಸವಾಲಿನ ಕೆಲಸವಾಗಿದೆ. ಅಲ್ಲದೇ ಹಳ್ಳಿಗಳಲ್ಲಿ ಸೋಂಕಿಗೆ ಒಳಗಾದವರಲ್ಲಿ ಶೇ.70 ಮಂದಿ ಕೋವಿಡ್​ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಯಲ್ಲಿ ದಾಖಲಾಗಲು ಬಯಸುವುದಿಲ್ಲ. ಅಂತಹವರು ಸೋಂಕು ಲಕ್ಷಣಗಳಿದ್ದರೂ ಟೆಸ್ಟ್​ಗೆ ಒಳಗಾಗುವುದನ್ನೇ ವಿರೋಧಿಸುತ್ತಾರೆ ಎಂದು ಆಶಾ ಕಾರ್ಯಕರ್ತೆಯರು ಮಾಹಿತಿ ನೀಡಿದ್ದಾರೆ.
ತಜ್ಞರ ಸಲಹೆ ಏನು?* ಶೇ.5ಕ್ಕಿಂತ ಹೆಚ್ಚು ಸೋಂಕು ಪ್ರಮಾಣ ಹೊಂದಿರುವ ಜಿಲ್ಲೆಗಳ ಗಡಿ ಬಂದ್​, ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಕಟ್ಟುನಿಟ್ಟಿನ ಕೋವಿಡ್​ ನಿಯಮ ಪಾಲನೆ* ಸೋಂಕು ಪ್ರಮಾಣ ದರ ಶೇ.5ಕ್ಕಿಂತ ಕಡಿಮೆ ಆಗುವವರೆಗೂ ಲಾಕ್​ಡೌನ್​ ತೆರವು ಬೇಡ, ಆಯಾ ಜಿಲ್ಲೆಗಳಲ್ಲಿನ ಆಕ್ಸಿಜನ್​ ಹಾಸಿಗೆಗಳು ಶೇ.60ಕ್ಕಿಂತ ಕಡಿಮೆ ಭರ್ತಿಯಾಗಿರಬೇಕು* ಸಾರಿಗೆ, ಕಚೇರಿ, ಕಾರ್ಖಾನೆಗಳು ಸೇರಿ ಇನ್ನಿತರ ಚಟುವಟಿಕೆ ಹಂತ ಹಂತವಾಗಿ ತೆರವು, ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಲಕ್ಷಣ ರಹಿತ ಸೋಂಕಿತರ ಪತ್ತೆಗೆ ಟಾರ್ಗೆಟ್​ ಟೆಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − six =
Remember me
