ಮೈಸೂರು:ಪ್ರೀತಿಸುವವರು ತಮಗೆ ಮನೆಯವರು ಅಡ್ಡಿಯಾದರೆ ಮೊದಲು ಪೊಲೀಸ್ ಠಾಣೆಗೆ ಹೋಗಿ ನೆರವು ಪಡೆದು ಮೊದಲು ಮದುವೆಯಾಗಿ ಬಿಡುತ್ತಾರೆ. ಹೀಗೆ ಪೊಲೀಸ್ ಠಾಣೆಯಲ್ಲೇ ಅದೆಷ್ಟೋ ಪ್ರೇಮವಿವಾಹಗಳು ಆದ ಉದಾಹರಣೆಗಳಿವೆ. ಆದರೆ ಇಲ್ಲೊಂದು ಕಡೆ ಪೊಲೀಸರ ಸಮ್ಮುಖದಲ್ಲೇ ಪ್ರೇಮಿಗಳನ್ನು ಬೇರೆ ಮಾಡಲಾಗಿದೆ. ಮದುವೆಯಾಗಿದ್ದರೂ ಬಿಡದೆ ಹುಡುಗನಿಗೆ ಹೊಡೆದು ಹುಡುಗಿಯನ್ನು ಕರೆದೊಯ್ಯಲಾಗಿದೆ.
ಮೈಸೂರು ಜಿಲ್ಲೆಯ ಹುಣಸೂರಿನ ಕೆಫೆ ಕಾಫಿ ಡೇ ಬಳಿ ಈ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕದಬಹಳ್ಳಿ ಗ್ರಾಮದ ಅಭಿಷೇಕ್ ಮತ್ತು ಚೋಳೇನಹಳ್ಳಿ ಗ್ರಾಮದ ಅನನ್ಯಾ ಅವರನ್ನು ಒತ್ತಾಯಪೂರ್ವಕವಾಗಿ ಬೇರೆ ಮಾಡಲಾಗಿದೆ. ಪ್ರೀತಿಸುತ್ತಿದ್ದ ಈ ಜೋಡಿ ಮದುವೆಯಾಗಿದ್ದರು. ಆದರೆ ಇದಕ್ಕೆ ಹುಡುಗಿಯ ಕಡೆಯವರಿಂದ ವಿರೋಧವಿದ್ದು, ಅವರು ಹುಡುಗನ ಮೇಲೆ ಹಲ್ಲೆ ಮಾಡಿ ಹುಡುಗಿಯನ್ನು ಕರೆದೊಯ್ದಿದ್ದಾರೆ.
ಎರಡೂವರೆ ವರ್ಷದಿಂದ ನಾವು ಪ್ರೀತಿಸುತ್ತಿದ್ದು ಮೊನ್ನೆ ಗುಂಡ್ಲುಪೇಟೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದೆವು. ಅಲ್ಲಿಂದ ಬರುತ್ತಿದ್ದಾಗ ಹುಣಸೂರಿನ ಕೆಫೆ ಡೇ ಬಳಿ ಪತ್ನಿಯ ಸಂಬಂಧಿಕರು ಅಡ್ಡಗಟ್ಟಿ ಹಲ್ಲೆ ಮಾಡಿದ್ದರು. ಆಗ ಸಾರ್ವಜನಿಕರು ಮಧ್ಯಪ್ರವೇಶಿಸಿ ಎಲ್ಲರನ್ನೂ ಪೊಲೀಸರಿಗೆ ಒಪ್ಪಿಸಿದರು. ಪೊಲೀಸ್ ಠಾಣೆಯಲ್ಲಿ ಪತ್ನಿ ನಾನೇ ಬೇಕು ಎಂದರೂ ಬಿಡದೆ ಅವಳನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದಾರೆ. ನನ್ನ ಹೆಂಡತಿಯನ್ನು ಅವರು ಬಲವಂತವಾಗಿ ಕರೆದೊಯ್ಯುವಾಗ ಪೊಲೀಸರು ತಡೆಯಲಿಲ್ಲ. ನನಗೆ ನ್ಯಾಯ ಬೇಕು, ಮುಂದೇನೇ ಅನಾಹುವಾದರೂ ಹುಣಸೂರು ಸರ್ಕಲ್​ ಇನ್​ಸ್ಪೆಕ್ಟರ್ ಅವರೇ ಹೊಣೆ ಎಂದು ಅನನ್ಯಾಳನ್ನು ಪ್ರೀತಿಸಿ ಮದುವೆಯಾಗಿರುವ ಅಭಿಷೇಕ್ ಆರೋಪಿಸಿದ್ದಾರೆ.
ಯುವತಿ ಮೇಲೆ ಗ್ಯಾಂಗ್ ರೇಪ್​; ರಾಷ್ಟ್ರಮಟ್ಟದ ನಾಲ್ವರು ಈಜುಪಟುಗಳ ಬಂಧನ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 4 =
Remember me
