ಬೆಂಗಳೂರು:ಮೂರನೇ ವ್ಯಕ್ತಿ ವರದಿ ಇದ್ದರೆ ಬಿಲ್ ಬಿಡುಗಡೆ ಮಾಡುವುದಾಗಿ ಹೇಳಿದ್ದರಲ್ಲಿ ಸಮಸ್ಯೆ ಏನಿದೆ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿದ್ದ ಕೆಲವು ಅಧಿಕಾರಿಗಳ ವರ್ಗಾವಣೆ ಇನ್ನೂ ಆಗಿಲ್ಲ. ಹಾಗಾಗಿ ಹಳೆಯ ದಿನಾಂಕಗಳಿಗೆ ಬಿಲ್ ಮಾಡುವುದು ನಡೆಯುತ್ತಿದೆ. ಸಾಕಷ್ಟು ನಿದರ್ಶನ ನನ್ನ ಇಲಾಖೆಯಲ್ಲೇ ಬಂದಿವೆ. ನಾನು ಅದನ್ನು ನಿಲ್ಲಿಸಿದ್ದೇನೆ. ಗುತ್ತಿಗೆದಾರರು ನನ್ನ ಬಳಿ ಬಂದು ಬಿಲ್ ಬಿಡುಗಡೆ ಆಗಿಲ್ಲ ಎಂದು ಹೇಳಿದರು. ಕಾನೂನು ಪ್ರಕಾರ ಬಿಲ್ ಬಿಡುಗಡೆ ಮಾಡುವುದಾಗಿ ಹೇಳಿದ್ದೇನೆ ಎಂದರು.
ಬಿಜೆಪಿಯವರು ಹತಾಶರಾಗಿದ್ದಾರೆ. ಅವರು ಎಲ್ಲಿ ಹೋಗಿ ಧ್ವನಿ ಏರಿಸಬೇಕಿತ್ತು ಅಲ್ಲಿ ಏರಿಸುತ್ತಿಲ್ಲ. ಬಿಜೆಪಿ ಹೈಕಮಾಂಡ್ ಬಳಿಗೆ ಹೋಗಿ ವಿಪಕ್ಷ ನಾಯಕ ಸ್ಥಾನ ಕೊಡಿ ಎಂದು ಕೇಳಿ ಧ್ವನಿ ಎತ್ತಿದರೆ ಆಗ ಬಿಜೆಪಿಗೆ ಗೌರವ ಬರುತ್ತದೆ. ಸರ್ಕಾರ ಬಂದು ಎರಡು ತಿಂಗಳಾಗಿದೆ. ಐದು ಗ್ಯಾರಂಟಿಗಳಲ್ಲಿ ಈಗಾಗಲೆ 4 ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಅದು ಹೊಟ್ಟೆ ಉರಿ ಎಂದು ಟೀಕಿಸಿದರು.
ನಾವು ಭ್ರಷ್ಟಾಚಾರದ ಆರೋಪ ಮಾಡುತ್ತಿಲ್ಲ. ಬಿಲ್ ಬಿಡುಗಡೆ ವಿಳಂಬ ಆಗುತ್ತಿದೆ ಎಂದು ಗುತ್ತಿಗೆದದಾರರ ಸಂಘದವರು ಸ್ಪಷ್ಟವಾಗಿ ಹೇಳಿದ್ದಾರೆ. ಕಾಮಗಾರಿ ಪರಿಶೀಲನೆ ಮಾಡಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಡಿಸಿಎಂ ಹೇಳಿದ್ದಾರೆ. ಅದಕ್ಕೆ ಗುತ್ತಿಗೆದಾರರು ಒಪ್ಪಿಕೊಂಡಿದ್ದಾರೆ.ಬಿಜೆಪಿಗೆ ಯಾಕೆ ಇಂಟ್ರೆಸ್ಟ್? ನೀವು ಆಗಲೇ ಅದಕ್ಕೆ ಕಮಿಷನ್ ತಗೊಂಡಿದ್ದೀರಾ? ಬಿಜೆಪಿಯವರು ಏಕೆ ಗುತ್ತಿಗೆದಾರರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ? ಎಂದು ಕೆಣಕಿದರು.
ಯಾವ ಪೆನ್‌ಡ್ರೈವ್ ಕೊಡಿ ಎಂದು ಈಗಾಗಲೇ ಸಿಎಂ, ಡಿಸಿಎಂ ಹೇಳಿದ್ದಾರೆ. ನಾವೇನು ತನಿಖೆಯಿಂದ ಹಿಂದೆ ಹೋಗುತ್ತಿದ್ದೇವಾ? ಮಾತು ತಪ್ಪುತ್ತಿದ್ದೇವಾ? ಎಂದು ತಿರುಗೇಟು ನೀಡಿದರು. ಕಾಮಗಾರಿ ಆಗಿದೆಯೋ ಇಲ್ಲವೋ ಎಂಬುದನ್ನೂ ಪರಿಶೀಲನೆ ಮಾಡುವುದು ಬೇಡವೆ?ಚಿಂಚೋಳಿಯಲ್ಲಿ ಒಂದೇ ಕಾಮಗಾರಿಗೆ ಎಷ್ಟು ಸಾರಿ ಬಿಲ್ ಮಾಡಿದ್ದಾರೆ? ಅಂತಹವಕ್ಕೂ ಹಣ ಬಿಡುಗಡೆ ಮಾಡಬೇಕಾ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಕೋಟ್:ಬಿಬಿಎಂಪಿ ಗುತ್ತಿಗೆದಾರರ ಕಾಮಗಾರಿಯ ವಿಚಾರ 4 ತನಿಖಾ ತಂಡ ರಚನೆ ಮಾಡಿದ್ದಾರೆ.ಅವರು ವರದಿ ಕೊಟ್ಟಮೇಲೆ ಏನು ಕ್ರಮ ಕೈಗೊಳ್ಳಬೇಕು ನೋಡುತ್ತೇವೆ. ಗುತ್ತಿಗೆದಾರರು ಬಿಲ್ ಕೊಡಬೇಕು ಆಮೇಲೆ ಹಣ ಬಿಡುಗಡೆ ಮಾಡುವುದು. ಆದರೆ ಅವರೇ ಬಿಲ್ ಕೊಟ್ಟಿಲ್ಲ. ಮೊದಲು ತನಿಖೆ ವರದಿ ಕೊಡಲಿ. ಆಮೇಲೆ ಹಣ ಬಿಡುಗಡೆ ಮಾಡುತ್ತೇವೆ.-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five × 3 =
Remember me
