ಬೆಂಗಳೂರು:ಹೆಚ್ಚುತ್ತಿರುವ ಸೈಬರ್ ಅಪರಾಧವನ್ನು ನಿಯಂತ್ರಿಸಲು ಕರ್ನಾಟಕ ಸೈಬರ್ ಸೆಕ್ಯುರಿಟಿ ನೀತಿ-2024 ರೂಪಿಸಿದ್ದು, ಈ ನೀತಿಯನ್ನು ಬಿಡುಗಡೆ ಮಾಡಲಾಯಿತು.
ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ರಕ್ಷಿಸುವುದು, ಜಾಗೃತಿ ಮೂಡಿಸುವುದು, ಕೌಶಲ್ಯ ನಿರ್ಮಾಣ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮತ್ತು ತಂತ್ರಜ್ಞಾನ ಏಕೀಕರಣವನ್ನು ತರಲು ಈ ನೀತಿ ಜಾರಿಗೆ ತರಲಾಗಿದೆ.
ಈ ನೀತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕ ಸರ್ಕಾರವು ಸೈಬರ್ ಭದ್ರತೆಯ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಗುರುತಿಸಿ, ನಾಗರಿಕರು ಮತ್ತು ಉದ್ಯಮಗಳಿಗೆ ಚೇತರಿಸಿಕೊಳ್ಳುವ ಮತ್ತು ಸುರಕ್ಷಿತ ಸೈಬರ್‌ಸ್ಪೇಸ್ ಅನ್ನು ಸ್ಥಾಪಿಸಲು ಈ ನೀತಿಯನ್ನು ರೂಪಿಸಿದೆ ಎಂದು ಹೇಳಿದರು.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯವಾಗಿ ಚಾಲ್ತಿಗೆ ಬರಲಿರುವ ಈ ನೀತಿಯು ಸೈಬರ್ ಬೆದರಿಕೆಗಳನ್ನು ಎದುರಿಸುವಲ್ಲಿ ಕರ್ನಾಟಕದ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದರ ಅನುಷ್ಠಾನವು ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ಸುರಕ್ಷಿತಗೊಳಿಸಲಿದೆ ಎಂಬ ವಿಶ್ವಾಸವಿದೆ ಎಂದರು.
ಇದು ಸೈಬರ್ ಸೆಕ್ಯುರಿಟಿ ವಲಯದಲ್ಲಿ ನಾವೀನ್ಯತೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲಿದೆ. ಕರ್ನಾಟಕವು ತಾಂತ್ರಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಪ್ರಮುಖ ಸೈಬರ್ ಭದ್ರತಾ ಕೇಂದ್ರವಾಗಲಿದೆ ಎಂದು ಹೇಳಿದರು.
ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡುವ ಮೂಲಕ 40,000 ಜನರಿಗೆ ತರಬೇತಿ ನೀಡುವ ಮೂಲಕ ಟೆಕ್ ವಲಯದಲ್ಲಿ ಉದ್ಯೋಗವಕಾಶವನ್ನು ಹೆಚ್ಚಿಸಲಿದ್ದೇವೆ ಎಂದರು.
5 ವರ್ಷಗಳವರೆಗೆ ಸೈಬರ್ ಭದ್ರತಾ ನೀತಿಯ ಅನುಷ್ಠಾನಕ್ಕಾಗಿ ಒಟ್ಟು ಸುಮಾರು 103.87 ಕೋಟಿ ರೂ. ಅನುದಾನದ ಅವಶ್ಯಕತೆ ಇದ್ದು, ಇದನ್ನು ಐಟಿ, ಬಿಟಿ ಮತ್ತು ಎಸ್‌ಟಿ ಇಲಾಖೆಯ ಬಜೆಟ್ ಹಂಚಿಕೆಯಿಂದ ಭರಿಸಲಾಗುತ್ತದೆ. 23.74 ಕೋಟಿ ರೂ.ಗಳು ಪ್ರೋತ್ಸಾಹ ಮತ್ತು ರಿಯಾಯಿತಿಒದಗಿಸಲಾಗುತ್ತದೆ ಎಂದು ತಿಳಿಸಿದರು.
ಬಿಟ್ ಕಾಯಿನ್ ಮೊದಲ ಕೇಸ್ ರಾಜ್ಯದಲ್ಲಿ ಪತ್ತೆಯಾಗಿದೆ.ಫ್ಯಾಕ್ಟ್ ಚೆಕ್ ಘಟಕ ತೆರೆದಿದ್ದೇವೆ. ಎಐ ಬಳಸಿ ಸೈಬರ್ ಆನ್ ಲೈನ್ ವಂಚನೆಗೆ ಕಡಿವಾಣ ಹಾಕುತ್ತಿದ್ದೇವೆ. ಉದ್ಯೋಗ ಕೊಡಿಸುವ ಪ್ರಕರಣಗಳಲ್ಲಿ ಅತಿ ಹೆಚ್ಚು ಆನ್‌ಲೈನ್ ಅಪರಾಧ ಪ್ರಕರರಣ ವರದಿಯಾಗುತ್ತಿವೆ. ಬೆಂಗಳೂರು ಬಿಟ್ಟರೆ ಮಂಡ್ಯದಲ್ಲಿ ಅತಿ ಹೆಚ್ಚು ಆನ್‌ಲೈನ್ ಅಪರಾಧಗಳು ವರದಿಯಾಗುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಂ.ಎಸ್. ಏಕ್‌ರೂಪ್ ಕೌರ್, ಸೈಬರ್‌ಸ್ಪೇಸ್ ಭವಿಷ್ಯದಲ್ಲಿ ಹೆಚ್ಚು ಸಂಕೀರ್ಣವಾಗುವ ನಿರೀಕ್ಷೆಯಿದೆ. ನೆಟ್‌ವರ್ಕ್ ಮತ್ತು ಅದಕ್ಕೆ ಸಂಪರ್ಕಗೊಂಡಿರುವ ಸಾಧನಗಳಲ್ಲಿ ಹಲವು ಪಟ್ಟು ಹೆಚ್ಚಳವಾಗಲಿದೆ. ಆದ್ದರಿಂದ ಈ ಕ್ರಮಗಳನ್ನು ಸೈಬರ್ ಭದ್ರತಾ ನೀತಿಯ ಅಡಿಯಲ್ಲಿ ಏಕೀಕರಿಸುವ ಅವಶ್ಯಕತೆಯಿದೆ. ಅದು ರಾಷ್ಟ್ರೀಯ ಸೈಬರ್ ಭದ್ರತಾ ನೀತಿಗೆ ಅನುಗುಣವಾಗಿರುತ್ತದೆ ಎಂದು ತಿಳಿಸಿದರು. .
ಕರ್ನಾಟಕ ಸರ್ಕಾರವು 40,000 ವ್ಯಕ್ತಿಗಳಿಗೆ ಸೈಬರ್ ಸುರಕ್ಷತೆ ಕೌಶಲ್ಯ ಮತ್ತು ಜಾಗೃತಿಗೆ ತರಬೇತಿ ನೀಡಲು ಸಿಸ್ಕೊದೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಹೆಚ್ಚುತ್ತಿರುವ ಸೈಬರ್ ಬೆದರಿಕೆಗಳನ್ನು ಎದುರಿಸಲು ಸಜ್ಜಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಶೇ.50ರಷ್ಟು ಮಹಿಳೆಯರು ಇರಲಿದ್ದಾರೆ. ಈ ವಿಧಾನವು ಸೈಬರ್ ಸೆಕ್ಯುರಿಟಿ ಕಾರ್ಯಪಡೆಯನ್ನು ವೈವಿಧ್ಯಗೊಳಿಸಲು ಮತ್ತು ತಂತ್ರಜ್ಞಾನ ವಲಯದಲ್ಲಿ ಸಮಾನ ಅವಕಾಶಗಳನ್ನು ಉತ್ತೇಜಿಸಲು ಉದ್ದೇಶಿಸಿದೆ.
ನೀತಿಯ ಮುಖ್ಯಾಂಶಗಳು:-ಇಂಟರ್ನ್‌ಶಿಪ್ ಕಾರ್ಯಕ್ರಮದ ಅಡಿಯಲ್ಲಿ ಕರ್ನಾಟಕ ಮೂಲದ ಪದವಿಪೂರ್ವ ಮತ್ತು ಸ್ನಾತಕೋತ್ತರ ಇಂಟರ್ನ್‌ಗಳಿಗೆ ಗರಿಷ್ಠ 3 ತಿಂಗಳವರೆಗೆ ತಿಂಗಳಿಗೆ 10,000- 15,000 ರೂ. ಸ್ಟೈಫಂಡ್ ಅನ್ನು ಒದಗಿಸಲಾಗುತ್ತದೆ. ಪಾಲಿಸಿ ಅವಧಿಯಲ್ಲಿ 600 ಸ್ನಾತಕಪೂರ್ವ ಇಂಟರ್ನಿಗಳು ಮತ್ತು 120 ಸ್ನಾತಕೋತ್ತರ ಇಂಟರ್ನ್‌ಗಳಿಗೆ ಅನುಕೂಲ ಕಲ್ಪಿಸುವ ಗುರಿ ಹೊಂದಿದೆ.
-ಕರ್ನಾಟಕ ಮೂಲದ ಸ್ಟಾರ್ಟ್-ಅಪ್‌ಗಳು ಮತ್ತು ಕರ್ನಾಟಕ ಮೂಲದ ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಸೈಬರ್ ಸೆಕ್ಯುರಿಟಿಯ ಕ್ಷೇತ್ರದ ಆರ್ ಅಂಡ್ ಡಿ ಈ ಯೋಜನೆಗಳಿಗೆ, ಒಟ್ಟು ಪ್ರಾಜೆಕ್ಟ್ ಆರ್ ಅಂಡ್ ಡಿ ಈ ವೆಚ್ಚದ ಗರಿಷ್ಠ ಶೇ.50ರಷ್ಟು ಹೊಂದಾಣಿಕೆ ಅನುದಾನ ಅಥವಾ ರೂ. 50 ಲಕ್ಷ ರೂ. ಒದಗಿಸಲಾಗುತ್ತದೆ.
-ಸೈಬರ್ ಭದ್ರತಾ ಲೆಕ್ಕಪರಿಶೋಧನೆಗಾಗಿ ಕರ್ನಾಟಕ ಸ್ಟಾರ್ಟ್-ಅಪ್ ಸೆಲ್‌ನಲ್ಲಿ ನೋಂದಾಯಿಸಲಾದ ಸ್ಟಾರ್ಟ್-ಅಪ್‌ಗಳಿಂದ ಕರ್ನಾಟಕ ಮೂಲದ ಸಿಇಆರ್‌ಟಿ-ಇನ್ ಎಂಪನೆಲ್ಡ್ ಸೇವಾ ಪೂರೈಕೆದಾರರ ತೊಡಗಿಸಿಕೊಳ್ಳುವಿಕೆಗೆ ಗರಿಷ್ಠ 1 ಲಕ್ಷ ರೂ. ವರೆಗಿನ ವೆಚ್ಚವನ್ನು ಮರುಪಾವತಿ ಮಾಡಲಾಗುತ್ತದೆ.
-ಐಟಿ,ಬಿಟಿ ಮತ್ತು ಎಸ್‌ಟಿ ಇಲಾಖೆಯು ಐಐಎಸ್‌ಸಿ ಸಹಯೋಗದೊಂದಿಗೆ ಸಿಒಇ ಸೈಬರ್ ಸೆಕ್ಯುರಿಟಿ ಮೂಲಕ ಕರ್ನಾಟಕ ಸೈಬರ್ ಸೆಕ್ಯುರಿಟಿ ಪಾಲಿಸಿ, 2024 ನಲ್ಲಿ ವಿವರಿಸಿರುವ ಪ್ರಮುಖ ಉಪಕ್ರಮಗಳನ್ನು ಕಾರ್ಯಗತಗೊಳಿಸಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − five =
Remember me
