ಮಂಡ್ಯ:ತಮಿಳುನಾಡಿಗೆ ಕೆಆರ್​ಎಸ್​ ಡ್ಯಾಂನಿಂದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಇಂದು ರೈತಸಂಘದಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಂದ್ ಆಗಲಿದೆ. ಎಕ್ಸ್​ಪ್ರೆಸ್​ ವೇನಲ್ಲಿ ವಾಹನ ಸಂಚಾರವನ್ನು ತಡೆದು ರೈತರು ಪ್ರತಿಭಟನೆ ಮಾಡಲಿದ್ದಾರೆ.
ರೈತ ಸಂಘದ ಮೂಲ ಸಂಘಟನೆಯಿಂದ ದಶಪಥ ಹೆದ್ದಾರಿ ತಡೆಗೆ ಕರೆ ನೀಡಲಾಗಿದ್ದು, ಮಂಡ್ಯದ ಇಂಡುವಾಳು ಬಳಿ ಇಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಟ್ರ್ಯಾಕ್ಟರ್, ಎತ್ತಿನಗಾಡಿ ಹಾಗೂ ಜಾನುವಾರುಗಳ ಜತೆ ರೈತರು ಹೆದ್ದಾರಿಗೆ ಇಳಿಯಲಿದ್ದಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ಮಾಡಲಿದ್ದಾರೆ. ರೈತರ ಹಿತ ಕಾಪಾಡಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರಿಂದು ಆಕ್ರೋಶ ಹೊರಹಾಕಿದ್ದಾರೆ. ತಕ್ಷಣವೇ ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ಮೋದಿ-ಕ್ಸಿ ಜಿನ್​ಪಿಂಗ್​ ಭೇಟಿಯಾಗಲಿದ್ದಾರಾ? ಈ ಬಗ್ಗೆ ಸರ್ಕಾರ ಹೇಳಿದ್ದಿಷ್ಟು…
ಬೆಂಗಳೂರು ಮಹಾನಗರಕ್ಕೆ 24 ಟಿಎಂಸಿ ಅಡಿ, ಮೈಸೂರು, ರಾಮನಗರ ಜಿಲ್ಲೆಗಳಿಗೆ 20 ಟಿಎಂಸಿ ಅಡಿ ಸೇರಿ ರಾಜ್ಯಕ್ಕೆ 124 ಟಿಎಂಸಿ ಅಡಿ ನೀರು ಅಗತ್ಯವಿದೆ. ಕೆಆರ್​ಎಸ್ 22 ಟಿಎಂಸಿ ಅಡಿ, ಕಬಿನಿ- 6.5, ಹಾರಂಗಿ-7 ಹಾಗೂ ಹೇಮಾವತಿ-20 ಟಿಎಂಸಿ ಅಡಿ ಸೇರಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಒಟ್ಟು 55 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ತಮಿಳುನಾಡು ನೀರಾವರಿ ಉದ್ದೇಶಕ್ಕಾಗಿಯೇ ಮೆಟ್ಟೂರು ಅಣೆಕಟ್ಟೆಯಿಂದ 63.62 ಟಿಎಂಸಿ ನೀರನ್ನು ಹರಿಸಿರುವುದು ಅಂಕಿಅಂಶಗಳಿಂದ ತಿಳಿದು ಬಂದಿದೆ. ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ಸೋಮವಾರ ಸಂಜೆಯ ತನಕ ಇದ್ದ ನೀರಿನ ಪ್ರಮಾಣವೇ 69.805 ಟಿಎಂಸಿಗಳು ಮಾತ್ರ. ಕಳೆದ ವರ್ಷ ಇದೇ ದಿನಕ್ಕೆ 102.632 ಟಿಎಂಸಿ ನೀರಿನ ಸಂಗ್ರಹಣೆ ಇತ್ತು.
ಕಳೆದ ವರ್ಷ ಅಧಿಕ ಜಲವರ್ಷವಾಗಿದ್ದರಿಂದ ಹೆಚ್ಚಿನ ನೀರನ್ನು ಹರಿಸಲಾಗಿದೆ. ಈ ವರ್ಷ 33.347 ಟಿಎಂಸಿ ನೀರಿನ ಹೊರ ಹರಿವು ಇದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 226.448 ಟಿಎಂಸಿ ನೀರು ಹರಿದು ಹೋಗಿತ್ತು. ಈ ವರ್ಷ ಕಾಲುವೆಗಳಿಗೆ 13.373 ಟಿಎಂಸಿ ನೀರು ಹರಿಸಲಾಗಿದೆ. ಕಳೆದ ವರ್ಷ 16.758 ಟಿಎಂಸಿ ನೀರು ಬಿಡಲಾಗಿತ್ತು.
ಕಾವೇರಿ ನ್ಯಾಯಾಧೀಕರಣದ ತೀರ್ಪಿನಂತೆ ಸಾಮಾನ್ಯ ವರ್ಷದಲ್ಲಿ ಆ.20ರ ತನಕ ಹರಿಸಬೇಕಾದ ನೀರಿನ ಪ್ರಮಾಣ ಬಿಳಿಗೊಂಡ್ಲು ಬಳಿಯಲ್ಲಿ 70.07 ಟಿಎಂಸಿ ದಾಖಲಾಗಬೇಕು. ಕಳೆದ ವರ್ಷ 284.862 ಟಿಎಂಸಿ ನೀರು ಹರಿದು ಹೋಗಿತ್ತು. ಈ ವರ್ಷ 24.056 ಟಿಎಂಸಿ ನೀರು ಹೋಗಿರುವುದು ದಾಖಲಾಗಿದೆ.
28ಕ್ಕೆ ಬಿಜೆಪಿ ಹೋರಾಟ:ತಮಿಳುನಾಡಿಗೆ ನೀರು ಹರಿಸಿದ್ದನ್ನು ವಿರೋಧಿಸಿ ಬಿಜೆಪಿ ಮಂಡ್ಯದಲ್ಲಿ ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿದೆ. ಆ.28ರಂದು ದೊಡ್ಡಮಟ್ಟದಲ್ಲಿ ಹೋರಾಟಕ್ಕೆ ತೀರ್ವನಿಸಿದೆ.
ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ಮೋದಿ-ಕ್ಸಿ ಜಿನ್​ಪಿಂಗ್​ ಭೇಟಿಯಾಗಲಿದ್ದಾರಾ? ಈ ಬಗ್ಗೆ ಸರ್ಕಾರ ಹೇಳಿದ್ದಿಷ್ಟು…

ಬಾಲ್ಯ ವಿವಾಹಕ್ಕೆ ಲವ್ ಬ್ರೇಕ್!; ಸ್ನೇಹಿತರಿಂದಲೇ ಮಾಹಿತಿ, 4 ವರ್ಷದಲ್ಲಿ 8,929 ಲಗ್ನಕ್ಕೆ ತಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 5 =
Remember me
