ಬೆಂಗಳೂರು :ಎಸ್ಸೆಸ್ಸೆಲ್ಸಿ ಸರಳೀಕೃತ ಪರೀಕ್ಷೆಗೆ ಸಂಬಂಧಿಸಿದಂತೆ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಸೀಟ್ ಮಾಹಿತಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದೆ.
ಮೂರು ಪುಟಗಳ ಒಂದು ಓಎಂಆರ್ ಶೀಟ್ ನಲ್ಲಿ ಮೊದಲ ಪುಟದಲ್ಲಿ ಗಣಿತ, ಎರಡನೇ ಪುಟದಲ್ಲಿ ವಿಜ್ಞಾನ ಹಾಗೂ ಮೂರನೇ ಪುಟದಲ್ಲಿ ಸಮಾಜ ವಿಜ್ಞಾನ ವಿಷಯದ ಉತ್ತರವನ್ನು ವಿದ್ಯಾರ್ಥಿಗಳು ಟಿಕ್ ಮಾಡಬೇಕು. ಪ್ರತಿ ಪುಟದಲ್ಲೂ ಆಯಾ ವಿಷಯಕ್ಕೆ ಸಂಬಂಧಿಸಿದ ಪ್ರತ್ಯೇಕ ಮಾಹಿತಿಯಿದೆ. ಮೂರು ಪುಟದಲ್ಲೂ ವಿದ್ಯಾರ್ಥಿಯ ಫೋಟೋ ಮತ್ತು ಸಹಿ ಹಾಕಬೇಕಾಗುತ್ತದೆ. ಮೂರು ಪುಟಕ್ಕೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಬಣ್ಣ ನೀಡಲಾಗಿದೆ.
ಇದರ ಜತೆಗೆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಿದೆ. ಮೂರು ವಿಷಯದ ಪ್ರಶ್ನೆಗಳು ಒಂದೇ ಪ್ರಶ್ನೆ ಪತ್ರಿಕೆಯಲ್ಲಿ ಇರಲಿದೆ. 40 ಪ್ರಶ್ನೆಗಳು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಇರಲಿದೆ. ಎಲ್ಲ 40 ಪ್ರಶ್ನೆಗಳಿಗೂ ವಿದ್ಯಾರ್ಥಿಗಳು ಉತ್ತರಿಸಬೇಕು.
ಓಎಂಆರ್ ಶೀಟ್ ಮಾದರಿಯಲ್ಲೇ ಮೊದಲು ಗಣಿತ, ಆನಂತರ ವಿಜ್ಞಾನ ಮತ್ತು ಕೊನೆಯಲ್ಲಿ ಸಮಾಜ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆ ಇರಲಿದೆ. ಮೂರು ವಿಷಯದ ಒಂದು ಪ್ರಶ್ನೆ ಪತ್ರಿಕೆ ಸುಮಾರು 42 ಪುಟ ಹೊಂದಿರಲಿದೆ.
ಎಲ್ಲ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್ ಶೀಟ್ ಗಳನ್ನು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳ ಪರೀಕ್ಷೆ ಸಿದ್ಧತೆಗೆ ಅನುಕೂಲವಾಗುವಂತೆ ಮಾಹಿತಿ ನೀಡಲು ಸೂಚಿಸಿದೆ.
ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್ ಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ಸೈಟ್ https://sslc.karnataka.gov.in/ ನಲ್ಲಿ ಲಭ್ಯವಿದೆ.
ಸಿಎಂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅರುಣ್ ಸಿಂಗ್; ಏನೇ ಹೇಳುವುದಿದ್ದರೂ ವೈಯಕ್ತಿಕವಾಗಿ ಮಾತಾಡಿ ಎಂದು ಶಾಸಕರಿಗೆ ತಾಕೀತು

ಮದುವೆ ಊಟದಲ್ಲಿ ಮೀನಿನ ತಲೆಗಾಗಿ ಹೊಡೆದಾಡಿದ ಸಂಬಂಧಿಗಳು! 11 ಮಂದಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 14 =
Remember me
