ಬೆಂಗಳೂರು:ಪರಿಶಿಷ್ಟ ಜಾತಿ ವಿಶೇಷ ಘಟಕ (ಎಸ್​ಸಿಎಸ್​ಪಿ), ಪರಿಶಿಷ್ಟ ಪಂಗಡ ಉಪಹಂಚಿಕೆ (ಟಿಎಸ್​ಪಿ)ಯಡಿ ಮೀಸಲಿರಿಸಿದ ಅನುದಾನವನ್ನು ನಿಯಮದ ಪ್ರಕಾರ ಬಿಡುಗಡೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮಜಾಯಿಷಿ ನೀಡಿದರು. ‘ಪರಿಶಿಷ್ಟರ ಹಣಕ್ಕೆ ಕನ್ನ’ ಶೀರ್ಷಿಕೆಯಡಿ ‘ವಿಜಯವಾಣಿ’ಯಲ್ಲಿ ಸೋಮವಾರ ಪ್ರಕಟವಾದ ವಿಶೇಷ ವರದಿಯನ್ನು ವಿಧಾನ ಪರಿಷತ್​ನ ಶೂನ್ಯವೇಳೆಯಲ್ಲಿ ಕಾಂಗ್ರೆಸ್​ನ ಮಂಜುನಾಥ್ ಭಂಡಾರಿ ಪ್ರಸ್ತಾಪಿಸಿ, ಸರ್ಕಾರದ ಗಮನಸೆಳೆದರು.
ಶ್ರೀನಿವಾಸ ಪೂಜಾರಿ ಉತ್ತರಿಸಿ, ಪರಿಶಿಷ್ಟ ಜಾತಿ, ಬುಡಕಟ್ಟುಗಳ ಉಪಹಂಚಿಕೆಯಡಿ ಪ್ರಸಕ್ತ ಆರ್ಥಿಕ ವರ್ಷ (2022-23)ಕ್ಕೆ 28,354 ಕೋಟಿ ರೂ. ಅನುದಾನ ಮೀಸಲಿರಿಸಿದ್ದು, 35 ಆಡಳಿತ ಇಲಾಖೆಗಳಿಗೆ ಹಂಚಿಕೆಯಾಗಿದೆ.
ಪರಿಶಿಷ್ಟರಿಗೆ ಸೇರಿದ ಶಿಕ್ಷಣ ಸಂಸ್ಥೆಗಳು ನಿರ್ವಿುಸುವ ಕಟ್ಟಡಗಳಿಗೆ ಒಟ್ಟು ವೆಚ್ಚದಲ್ಲಿ ಶೇ.75 ಅಥವಾ ಗರಿಷ್ಠ 50 ಲಕ್ಷ ರೂ. ಅನುದಾನ ನೀಡುವ ಅಧಿಕಾರವಿದೆ. ಈ ಕಾರ್ಯಕ್ರಮಕ್ಕಾಗಿ ಪ.ಜಾತಿ ಉಪಹಂಚಿಕೆಗೆ 40 ಕೋಟಿ ರೂ., ಬುಡಕಟ್ಟುಗಳ ಉಪಹಂಚಿಕೆಗೆ 20 ಕೋಟಿ ರೂ. ಅನುದಾನ ಕಾದಿರಿಸಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹೊಸದಾಗಿ ಈ ಕಾರ್ಯಕ್ರಮ ರೂಪಿಸಿಲ್ಲ ಎಂದರು.
ವಿರೋಧ ಸಹಜ:ಎಸ್​ಎಸ್, ಎಸ್​ಟಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನಿಗದಿಯಾಗಿದೆ ಕಾಯ್ದೆ ಉದ್ದೇಶ ಈಡೇರಿಸಲು, ದಕ್ಷತೆ ಹಾಗೂ ಪಾರದರ್ಶಕತೆ ಕಾಯ್ದೆ ಕಾಯ್ದುಕೊಳ್ಳಲು ಕೆಲವು ಬದಲಾವಣೆಗಳನ್ನು ತರಲಾಗುತ್ತಿದೆ. ಈ ರೀತಿ ಪ್ರಯತ್ನ ಮಾಡುವಾಗ ವಿರೋಧಗಳು ಸಹಜ. ಅನುದಾನ ಬಿಡುಗಡೆಗೆ ಕಮಿಷನ್ ಪ್ರಶ್ನೆ ಉದ್ಭವಿಸುವುದಿಲ್ಲ. ಯಾರಾದರೂ ಅರ್ಧ ರೂಪಾಯಿ ಕೊಟ್ಟಿದ್ದರೆ ಸಾಬೀತುಪಡಿಸಲಿ ಎಂದು ಪೂಜಾರಿ ಸವಾಲೆಸೆದರು.
ಮಂಜುನಾಥ್ ಭಂಡಾರಿ ಕಳವಳ:ಶೋಷಿತ ಸಮುದಾಯಗಳಿಗೆ ಮೀಸಲಿರುವ ಅನುದಾನವನ್ನು ಅದೇ ಸಮುದಾಯದ ಪ್ರಭಾವಿ ಸಚಿವರೊಬ್ಬರ ಶಿಕ್ಷಣ ಸಂಸ್ಥೆಗೆ ಬಿಡುಗಡೆ ಮಾಡಿದ್ದರ ಔಚಿತ್ಯವೇನು? ಅಲ್ಲದೆ, ಇದೇ ಮಾರ್ಗ ಹಿಡಿದ ಆಡಳಿತ ಪಕ್ಷದ ಹಲವು ಶಾಸಕರು ಅನುದಾನ ಪಡೆಯಲು ಬೆನ್ನತ್ತಿ, ಕಮಿಷನ್ ಕೊಟ್ಟಾದರೂ ಎತ್ತುವಳಿಗೆ ಮುಂದಾಗಿರುವ ಬಗ್ಗೆ ಮಂಜುನಾಥ್ ಭಂಡಾರಿ ಕಳವಳ ವ್ಯಕ್ತಪಡಿಸಿದರು.
ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 19 =
Remember me
