ಬೆಂಗಳೂರು:ಮನುಷ್ಯನಿಗೆ ಹೆತ್ತ ತಾಯಿ ಹೊತ್ತ ನೆಲ ಎಷ್ಟು ಮುಖ್ಯವೋ ಅಷ್ಟೇ ಧರ್ಮವೂ ಮುಖ್ಯ.ಶಿವಾಗಮಗಳ ಸಾಹಿತ್ಯ ಮತ್ತು ವಚನ ಸಾಹಿತ್ಯ ವೀರಶೈವ ಧರ್ಮದ ಅಮೂಲ್ಯ ಸಂಪತ್ತು ಎಂಬುದನ್ನು ಯಾರೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶುಕ್ರವಾರ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಘಟಕದ ಆಶ್ರಯದಲ್ಲಿ ಜರುಗಿದ ಧರ್ಮೋತ್ತೇಜಕ ಸಂಗಮ ಸಮಾವೇಶದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧರ್ಮದಲ್ಲಿ ಮಾರ್ಗವಿದೆ ವೇಗವಿಲ್ಲ.ವಿಜ್ಞಾನದಲ್ಲಿ ವೇಗವಿದೆ ಮಾರ್ಗವಿಲ್ಲ.ಇವೆರಡರ ಸಮನ್ವಯದಿಂದ ಜನಕಲ್ಯಾಣ ಸಾಧ್ಯವಾಗುತ್ತದೆ.ಧರ್ಮದ ದಿಕ್ಸೂಚಿ ಇಲ್ಲದೇ ಹೋದರೆ ಬದುಕಿಗೆ ಅರ್ಥವೇ ಇಲ್ಲ.ಧರ್ಮ ದರ್ಶನಗಳ ಅರಿವು ಮತ್ತು ಆಚರಣೆ ಮುಖ್ಯ.ಅಧಿಕಾರದ ಅಂತಸ್ತು ಮೇಲೇರಿದಂತೆ ನೀತಿಯ ಅಂತಸ್ತು ಮೇಲೇರಬೇಕು.ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೆ ಶಿವಾಗಮಗಳ ಪ್ರಾಚೀನ ಸಾಹಿತ್ಯ ಹಾಗೂ ಶರಣರ ವಚನ ಸಾಹಿತ್ಯ ಎರಡು ಕಣ್ಣು ಇದ್ದ ಹಾಗೆ.ಈ ಧರ್ಮದ ದಾರ್ಶಿನಿಕತೆ ಸರ್ವ ಜನಾಂಗಕ್ಕೂ ದಾರಿದೀಪ.ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ಜೀವಾತ್ಮ ಪರಮಾತ್ಮನಾಗಲು ಅಂಗ ಲಿಂಗವಾಗಲು ಮತ್ತು ಭವಿ ಭಕ್ತನಾಗುವ ಆದರ್ಶತೆಗಳನ್ನು ಕಾಣಬಹುದೆಂದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.ರಾಜಾಪುರ ಸಂಸ್ಥಾನಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿದರು.ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಸದಾಶಯ ನುಡಿ ಹಂಚಿಕೊಂಡರು.ಸಂಗೊಳ್ಳಿ,ಸಿದ್ದರಬೆಟ್ಟ,ದೊಡ್ಡಗುಣಿ ಶ್ರೀಗಳು ಉಪಸ್ಥಿತರಿದ್ದರು.
ಸಂಸ್ಕೃತ ವಿದ್ವಾಂಸರಾದ ಡಾ.ಸಿ.ಶಿವಕುಮಾರಸ್ವಾಮಿ ಅವರು ವೀರಶೈವ ಧರ್ಮದ ಮೌಲ್ಯಗಳನ್ನು ಕುರಿತು ಸವಿಸ್ತಾರವಾದ ಉಪನ್ಯಾಸ ನೀಡಿದರು.ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ವಿ.ಸೋಮಣ್ಣ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,ಅರಣ್ಯ ಸಚಿವ ಈಶ್ವರ ಖಂಡ್ರೆ,ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಬಸವರಾಜೇಂದ್ರ,ಮಾಜಿ ಜಿ.ಪಂ ಅಧ್ಯಕ್ಷ ಜಿ.ಮರಿಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.ಬೀರೂರು ಶಿವಸ್ವಾಮಿ,ಆರ್.ಆರ್.ಹಿರೇಮಠ,ಟಿ.ಎಸ್.ಉಮಾಶಂಕರ,ಬಿಜ್ಜಳ್ಳಿ ನಂದೀಶ,ನಿರಂಜನ ಕೋವಾ ರೇವಣ್ಣ,ಎಂ.ಮಾದಯ್ಯ ಮತ್ತು ಸೋಮಶೇಖರ ಪಾಟೀಲ ಇನ್ನಿತರರಿದ್ದರು.ಗಾನಸುಧೆ ಭಜನಾ ಮಂಡಳಿಯ ಶಿವಶಂಕರ ಶಾಸ್ತ್ರಿ ತಂಡದವರಿಂದ ಭಕ್ತಿಗೀತೆ ಜರುಗಿತು.ಕನ್ನಡ ಹೋರಾಟಗಾರ ಫಾಲನೇತ್ರ ಕಾರ್ಯಕ್ರಮವನ್ನು ನಿರೂಪಿಸಿದರು.
ಜಗತ್ತಿನ ಮಾನವ ಧರ್ಮದ ಸಂದೇಶವನ್ನು ನೀಡಿ ವಿಶ್ವಕ್ಕೆ ಶಾಂತಿ ಬಯಸಿದ್ದು ಶ್ರೀರಂಭಾಪುರಿ ಪೀಠ.ಪೀಠದ ಪ್ರಸ್ತುತ ಜಗದ್ಗುರುಗಳ ಮುಂದಾಳತ್ವದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವೀರಶೈವ ಸಂಘಟನಾ ಸಮಾವೇಶವನ್ನು ನಡೆಸುವುದಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ವೀರಶೈವ ಸಮಾಜ ಬಾಂಧವರಲ್ಲಿ ಒಗ್ಗಟ್ಟು ಕಡಿಮೆಯಾಗಿದೆ.ಒಳಪಂಗಡಗಳನ್ನು ಬಿಟ್ಟು ಒಂದಾಗಬೇಕು.ಅದಕ್ಕೆ ಜಗದ್ಗುರುಗಳ ಸಂದೇಶ ಮತ್ತು ಮಾರ್ಗದರ್ಶನ ಅಗತ್ಯವಿದ್ದು ರಾಷ್ಟ್ರದ ರಾಜಧಾನಿಯಿಂದ ಈ ಕಾರ್ಯ ಆರಂಭಿಸುವುದಾಗಿ ಅವರು ಹೇಳಿದರು.
ವೀರಶೈವ ಧರ್ಮದ ಪೀಠ ಮತ್ತು ಮಠಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಾ ಬಂದಿವೆ.ಮಾನವ ಧರ್ಮಕ್ಕೆ ಜಯವಾಗಲಿ–ಧರ್ಮದಿಂದಲೇ ವಿಶ್ವಕ್ಕೆ ಶಾಂತಿ,ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ–ಶಾಂತಿ ಸಮೃದ್ದಿ ಎಲ್ಲರಿಗಾಗಲಿ ಅನ್ನುವ ಸಾರ್ವತ್ರಿಕ ಸತ್ಯವನ್ನು ಅರಿತು ಬಾಳಿದರೆ ಜೀವನದಲ್ಲಿ ಉನ್ನತಿ ಕಾಣಬಹುದು ಎಂದು ಅವರು ವಿವರಿಸಿದರು.
ಶ್ರೀಜಗದ್ಗುರು ರೇಣುಕಾಚಾರ್ಯರ ಉದಾತ್ತ ತತ್ವ ಸಿದ್ದಾಂತಗಳನ್ನು ಇಂದಿಗೂ ಪರಿಪಾಲಿಸುತ್ತಾ,ನಾಡಿನ ಅಪಾರ ಭಕ್ತ ಸಮುದಾಯವನ್ನು ಮುನ್ನಡೆಸುತ್ತಿರುವ ಶ್ರೀ ರಂಭಾಪುರಿ ಡಾ,ವೀರಸೋಮೇಶ್ವರ ಜಗದ್ಗುರುಗಳ ಸೇವೆ ಅಪಾರವಾಗಿದೆ.ಧರ್ಮದ ಅಭಿವೃದ್ಧಿಗಾಗಿ ಅವರು ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು.ಧರ್ಮದ ಕಾರ್ಯ ಕೇವಲ ಗುರುಗಳ ಜವಾಬ್ದಾರಿ ಎಂದುಕೊಳ್ಳದೆ,ಗುರುಗಳ ಕಾರ್ಯಕ್ಕೆ ಕೈಜೋಡಿಸಿದರೆ ಸಮಾಜವನ್ನು ಮತ್ತಷ್ಟು ಬಲಿಷ್ಠಗೊಳಿಸಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
