|ಯೋಗಾನಂದ ಎ. ನಾರಾಯಣ್
1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷರಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದ ಮೇಲೂ ಮೈಸೂರು ಸಂಸ್ಥಾನದಲ್ಲಿ ಭಾರತದ ಸ್ವಾತಂತ್ರ್ಯ ಸಂಭ್ರಮಾಚರಣೆಯನ್ನು ನಿಶ್ಶಬ್ದಗೊಳಿಸಲಾಯಿತು. ಮೈಸೂರು ಸಂಸ್ಥಾನವು ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿತು.ಸಂಪೂರ್ಣ ಜವಾಬ್ದಾರಿಯುತ ಸರ್ಕಾರವನ್ನು ಸ್ಥಾಪಿಸಲೇಬೇಕೆಂಬ ಕಾಂಗ್ರೆಸ್ ಒತ್ತಾಯಕ್ಕೆ ಮೈಸೂರು ಸಂಸ್ಥಾನವು ಮಣಿಯಲಿಲ್ಲ. ಆಗ ಕಾಂಗ್ರೆಸ್​ನ ಕಾರ್ಯಕಾರಿ ಸಮಿತಿಯು 1947ರ ಆಗಸ್ಟ್ 20ರಂದು ಮಹಾರಾಜರ ಸರ್ಕಾರವನ್ನು ಅಲುಗಾಡಿಸಲು ನಿರ್ಧರಿಸಿ ‘ಚಲೋ ಮೈಸೂರು’ ಹೋರಾಟ ಘೊಷಿಸಿತು. ಪ್ರಜಾ ಪಕ್ಷ ಸ್ಥಾಪಕರಾದ ಕೆ.ಸಿ. ರೆಡ್ಡಿ ನೇತೃತ್ವದಲ್ಲಿ 1947ರ ಸೆ. 1ರಂದು ಚಲೋ ಮೈಸೂರು ಎಂಬ ಚಳವಳಿಯು ಪ್ರಾರಂಭವಾಯಿತು.
ಮೈಸೂರಿನ ಎಲ್ಲಾ ಒಂಬತ್ತು ಜಿಲ್ಲೆಗಳ (ಈಗ 14) ಜನರು ಮತ್ತು ರಾಜ್ಯದ ಹೊರಗಿನ ಬೆಂಬಲಿಗರು ಮೈಸೂರಿನ ಕಡೆಗೆ ಮೆರವಣಿಗೆ ಪ್ರಾರಂಭಿಸಿದರು. ಇದರ ಮುಂದುವರಿದ ಭಾಗವಾಗಿ ಬಾಣಾವರದ ರಾಮಸ್ವಾಮಿ ಅವರು ಐದು ದೀಪಗಳ ವೃತ್ತ ಅಂದರೆ ಇಂದಿನ ರಾಮಸ್ವಾಮಿ ವೃತ್ತ 1947ರ ಸೆ. 13ರಂದು ಪ್ರಾಣತ್ಯಾಗ ಮಾಡಬೇಕಾಯಿತು.
ಲಾಠಿ ಚಾರ್ಜ್ ಮಾಡಿದರೂ ವಿದ್ಯಾರ್ಥಿಗಳು ಚದುರದ ಕಾರಣ ಅಂದಿನ ಜಿಲ್ಲಾಧಿಕಾರಿ ನಾಗರಾಜ ರಾವ್ ಅವರು ನೀಡಿದ ಗೋಲಿಬಾರ್ ಆದೇಶವನ್ನು ಪೊಲೀಸರು ನಿರಾಕರಿಸಿದರು. ಹೀಗಾಗಿ ಸ್ವತಃ ರಾವ್ ಅವರು ರಿವಾಲ್ವರ್​ನಿಂದ ಗುಂಡನ್ನು ಹಾರಿಸಿಯೇಬಿಟ್ಟರು. ಹಾರ್ಡವಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದ ರಾಮಸ್ವಾಮಿ ಅವರು ಮಧ್ಯಾಹ್ನ ಸುಮಾರು 1.30ರ ಸಮಯದಲ್ಲಿ ಸ್ಥಳದಲ್ಲೇ ಅಸುನೀಗಿದರು. ಹೀಗಾಗಿ ಈಗ ಈ ವೃತ್ತವನ್ನು ರಾಮಸ್ವಾಮಿ ವೃತ್ತವೆಂದು ಕರೆಯುತ್ತಾರೆ. ದಿವಾನ್ ಅರ್ಕಾಟ್ ರಾಮಸ್ವಾಮಿಯವರು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಮೊದಲ ಅಧ್ಯಕ್ಷರಾಗಿಯೂ ಮತ್ತು ರಾಜನೀತಿಯಲ್ಲಿ ಚಾಣಾಕ್ಷರಾಗಿದ್ದರೂ ಮಹಾರಾಜರಿಗೆ ಸರಿಯಾಗಿ ಸಲಹೆ ನೀಡಲಿಲ್ಲ. ದಿವಾನ್ ಮುದಲಿಯಾರ್ ಅವರಿಂದ ಮೈಸೂರು ರಣರಂಗವಾಯಿತು.
ಜಯಚಾಮರಾಜ ಒಡೆಯರ್ ಅವರು ಇನ್ನಷ್ಟು ಸಾವುನೋವುಗಳು ತೀವ್ರವಾಗದಿರಲು ಮೈಸೂರು ಸಂಸ್ಥಾನದ ವಿಲೀನಕ್ಕೆ ಒಪ್ಪಿಗೆ ನೀಡಿದರು. ಕಾಂಗ್ರೆಸ್ ಅಧ್ಯಕ್ಷ ಕೆ.ಸಿ. ರೆಡ್ಡಿ ಅವರು ಸರ್ಕಾರದೊಂದಿಗೆ ದಿನಾಂಕ 13.10.1947 ರಂದು ಒಪ್ಪಂದಕ್ಕೆ ಸಹಿ ಹಾಕಿದರು. ಸಾಂವಿಧಾನಿಕ ಸಭೆಯ ನಿರ್ಣಯಗಳು ಅಂಗೀಕಾರವಾಗುವವರೆಗೆ ಮಧ್ಯಂತರ ಸರ್ಕಾರವನ್ನು ರಚಿಸಲು ಮಹಾರಾಜರು ಒಪ್ಪಿಕೊಂಡರು.
ವಿಜಯದ ಸಂಕೇತವೆಂದು ನಂಬಲಾದ ವಿಜಯದಶಮಿ ಹಬ್ಬವು 1947ರ ಅಕ್ಟೋಬರ್ 24ರಂದು ಇದ್ದ ಕಾರಣ ಈ ಹಿನ್ನೆಲೆಯಲ್ಲಿ 24-10-1947ರಂದು ಮೈಸೂರು ಸಂಸ್ಥಾನವನ್ನು ವಿಲೀನಗೊಳಿಸಲಾಯಿತು. ಅದೇ ದಿನದಂದು ಮೈಸೂರು ರಾಜ್ಯದ ಹೊಸ ಮಂತ್ರಿಮಂಡಲವನ್ನೂ ರಚಿಸಲಾಯಿತು. 25-10-1947 ರಂದು ಕೆ.ಸಿ. ರೆಡ್ಡಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಪ್ರತಿವರ್ಷವು ಮೈಸೂರಿನ ಸುಬ್ಬರಾಯನ ಕೆರೆ ಆವರಣದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಸಂಘವು ಚಲೋ ಮೈಸೂರು ದಿನಾಚರಣೆಯನ್ನು ವಿಜೃಭಣೆಯಿಂದ ಆಚರಿಸಿಕೊಂಡು ಬರುತ್ತಿದೆ.
(ಲೇಖಕರು ಮೈಸೂರು ಸ್ವಾತಂತ್ರ್ಯ ಹೋರಾಟಗಾರರ ಸಂಘದ ಕಾರ್ಯದರ್ಶಿ)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − 10 =
Remember me
