ಬೆಂಗಳೂರು:ವಿದ್ಯುಚ್ಛಕ್ತಿ ಬೇಡಿಕೆ ಹೆಚ್ಚಳ, ಕೊರತೆಯ ಕಳವಳದ ನಡುವೆಯೇ ರಾಜ್ಯದಲ್ಲಿ ನವೀಕೃತ ಇಂಧನ ಕ್ರಾಂತಿಗೆ ಕಾಲ ಕೂಡಿಬಂದಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2022-27ಕ್ಕೆ ಬುಧವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಮೂಲಕ 2030ರ ವೇಳೆಗೆ ಕರ್ನಾಟಕವನ್ನು ವಿದ್ಯುತ್ ಕ್ಷೇತ್ರದಲ್ಲಿ ಅತ್ಯುಚ್ಚ ಮಟ್ಟಕ್ಕೆ ಕೊಂಡೊಯ್ಯುವ ಪ್ರಸ್ತಾವನೆ ಮಾಡಲಾಗಿದೆ. ನೀತಿಯ ಪ್ರಮುಖ ಅಂಶ ಎಂದರೆ, ಹೈಬ್ರಿಡ್ ಪವರ್ ಪಾರ್ಕ್ ನಿರ್ವಿುಸಲು ಉತ್ತೇಜನ ನೀಡುವುದು. ಅಂದರೆ, ಪವನ ವಿದ್ಯುತ್ ಹಾಗೂ ಸೌರ ವಿದ್ಯುತ್ ಘಟಕ ಒಂದೇ ಕಡೆ ಬರುವಂತಹ ಪಾರ್ಕ್​ಗಳ ನಿರ್ವಣಕ್ಕೆ ಪೋ›ತ್ಸಾಹ ನೀಡಲು ಬಯಸಲಾಗಿದೆ. ಇದರಿಂದ ಹೂಡಿಕೆದಾರರಿಗೆ ಅನುಕೂಲವಾಗಲಿದೆ, ಉತ್ಪಾದನೆ ಹೆಚ್ಚಳದ ನಿರೀಕ್ಷೆಯನ್ನೂ ಹೊಂದಲಾಗಿದೆ. ಇನ್ನೊಂದು ಪ್ರಮುಖ ಅಂಶವೆಂದರೆ, 2030ರೊಳಗೆ ಕರ್ನಾಟಕದಲ್ಲಿ 10 ಗಿಗಾ ವಾಟ್ ವಿದ್ಯುತ್ ಉತ್ಪಾದನೆಯಾಗಬೇಕೆಂಬ ಗುರಿ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕವನ್ನು ದೇಶದಲ್ಲೇ ಮುಂಚೂಣಿಯಲ್ಲಿ ನಿಲ್ಲಿಸುವ ಗುರಿ ಹಾಕಿಕೊಳ್ಳಲಾಗಿದೆ.
ಎಸ್​ಐಟಿ ಮುಂದುವರಿಕೆ:ಅಕ್ರಮ ಗಣಿಗಾರಿಕೆಗಳ ಕುರಿತು ಅಸ್ತಿತ್ವದಲ್ಲಿರುವ, ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಸೃಜನೆಗೊಂಡ ಎಸ್​ಐಟಿ ಕಾರ್ಯಾವಧಿಯನ್ನು ಇನ್ನು ಒಂದು ವರ್ಷದ ಅವಧಿಗೆ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಸುಪ್ರೀಂಕೋರ್ಟ್​ನಲ್ಲಿ ರಾಜ್ಯದ ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿ ಬಾಕಿ ಇರುವ ಕಾರಣ ಈ ನಿರ್ಧಾರಕ್ಕೆ ಬಂದಿರುವುದಾಗಿ ಮೂಲಗಳು ತಿಳಿಸಿವೆ.
ಅಮಿತ್ ಷಾ ಪ್ರವಾಸ ಚರ್ಚೆ:ಗೃಹ ಸಚಿವ ಅಮಿತ್ ಷಾ ರಾಜ್ಯ ಪ್ರವಾಸದ ಕುರಿತು ಸಿಎಂ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ರ್ಚಚಿಸಿದರು. ಸಹಕಾರ ಇಲಾಖೆ ಕಾರ್ಯಕ್ರಮದಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳುವುದು ಬೇಡ, ಅವರು ನಡೆಸಬಹುದಾದ ಸಭೆಯಲ್ಲೂ ಕೂಡ ಅನಪೇಕ್ಷಿತ ವಿಚಾರ ಪ್ರಸ್ತಾಪ ಬೇಡ ಎಂದು ಸಿಎಂ ಸಂಪುಟ ಸಹೋದ್ಯೋಗಿಗಳಿಗೆ ಸಲಹೆ ನೀಡಿದರೆನ್ನಲಾಗಿದೆ.
ಸಮವಸ್ತ್ರ ಖರೀದಿ:ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಗೆ ಬರುವ ವಸತಿ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ 2021-22ನೇ ಸಾಲಿಗೆ ಸಿದ್ಧಪಡಿಸಿದ ಸಮವಸ್ತ್ರಗಳ ಸರಬರಾಜು ಮಾಡಲು ಕೆಎಚ್​ಡಿಸಿಯು ಸ್ಥಳೀಯ ನೇಕಾರರುಗಳಿಂದ ಸಮವಸ್ತ್ರ ಖರೀದಿಸುವ ಬದಲಾಗಿ ಸರ್ಕಾರದ ಸಂಸ್ಥೆಗಳಿಂದ ಖರೀದಿಸಲು ಎಂದು ಹೊರಡಿಸಿದ ತಿದ್ದುಪಡಿ ಆದೇಶದ ಬಗ್ಗೆ ಚರ್ಚೆ ನಡೆಯಿತು. ಅಂತಿಮವಾಗಿ ಒಪ್ಪಿಗೆ ಸೂಚಿಸಲಾಗಿದೆ. ಕೆಎಚ್​ಡಿಸಿಯು ಬಳಿ ಸರಬರಾಜು ಸಾಧ್ಯವಾಗದೇ ಇದ್ದಾಗ ಇತರೆ ಸರ್ಕಾರಿ ಸಂಸ್ಥೆಗಳಿಂದ ಎಂಬ ಅವಕಾಶ ಕಲ್ಪಿಸಿಕೊಳ್ಳಲಾಗಿದೆ ಎಂದು ಸಚಿವರೊಬ್ಬರು ಸ್ಪಷ್ಟಪಡಿಸಿದರು.
ಸ್ಮಾರ್ಟ್ ಅಗ್ರಿಕಲ್ಚರ್:ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸ್ಮಾರ್ಟ್ ಅಗ್ರಿಕಲ್ಚರ್ ನಿರ್ವಿುಸಲು ಉದ್ದೇಶಿಸಿದೆ. ಇದಕ್ಕಾಗಿ 51.20 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಶೇ. 60 ಅನುದಾನ ನೀಡಿದರೆ, ರಾಜ್ಯ ಸರ್ಕಾರ ಉಳಿದ ಶೇ.40 ಹಣ ಒದಗಿಸಲಿದೆ. ಸುಮಾರು ಐದು ಸಾವಿರ ವಿದ್ಯಾರ್ಥಿಗಳಿಗೆ ಈ ಕೇಂದ್ರದಲ್ಲಿ ಕಲಿಕೆಗೆ ಅವಕಾಶ ಸಿಗಬಹುದು. ಮುಂದುವರಿದ ದೇಶಗಳಲ್ಲಿ ಅಳವಡಿಸಿಕೊಂಡ ತಂತ್ರಜ್ಞಾನ ನಮ್ಮ ಪರಿಸರದಲ್ಲೂ ಬಳಸಿಕೊಳ್ಳುವ ಬಗ್ಗೆಯೂ ಈ ಕೇಂದ್ರದಲ್ಲಿ ಅಧ್ಯಯನ ನಡೆಯಲಿದೆ.
ವಿಮಾನ ನಿಲ್ದಾಣಕ್ಕೆ ಅಸ್ತು:ರಾಯಚೂರಿನ ಗ್ರೀನ್ ಫೀಲ್ಡ್ ದೇಶಿಯ ಪ್ರಯಾಣಿಕ ವಿಮಾನ ನಿಲ್ದಾಣದ ಅಭಿವೃದ್ಧಿ ಸಂಬಂಧ ಮೆ.ರೈಟ್ಸ್ ಇಂಡಿಯಾ ಲಿಮಿಟೆಡ್​ನ -ಠಿ;185.57 ಕೋಟಿಗಳ ವಿಸõತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
1. ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 114 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ
2. ತುಮಕೂರು ಜಿಲ್ಲೆ ಶಿರಾ ತಾಲೂಕು ಮದ್ದಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್ 12ರಲ್ಲಿ ಮದ್ದಕ್ಕನಹಳ್ಳಿ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಕಲ್ಲು ಗಣಿ ಗುತ್ತಿಗೆಗಳನ್ನು ಮಂಜೂರು ಮಾಡಿದ್ದು ಗಣಿಗಾರಿಕೆಯ ಅರ್ಜಿತ ಪ್ರದೇಶವನ್ನು 12-20 ಎಕರೆಯಿಂದ 10 ಎಕರೆಗೆ ಸೀಮಿತಗೊಳಿಸಲು ತೀರ್ವನ.
3. ಅರೆಕಾಲಿಕ ವೃತ್ತಿ ಆಧಾರಿತ ಕೋರ್ಸ್​ಗಳ ನೌಕರರನ್ನು ವಿಲೀನಗೊಳಿಸುವ ಅಧಿನಿಯಮ 2011ರಂತೆ ವಿಲೀನಗೊಳ್ಳಲು ಬಾಕಿ ಉಳಿದಿರುವ 10 ಅರೆಕಾಲಿಕ ವೃತ್ತಿ ಆಧಾರಿತ ಕೋರ್ಸ್​ಗಳ (ಜೆಒಸಿ) ಉಪನ್ಯಾಸಕರನ್ನು ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಯಲ್ಲಿ ವಿಲೀನ.
4. ಬೆಂಗಳೂರು ನೃಪತುಂಗ ವಿಶ್ವವಿದ್ಯಾಲಯಕ್ಕೆ ಉಪಕರಣ ಖರೀದಿ, ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ಹಳೇ ಕಟ್ಟಡ ನವೀಕರಣ ಕಾಮಗಾರಿಯ 55 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.
5. ಉಡುಪಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ 200 ಹಾಸಿಗೆಗಳ ಕೂಸಮ್ಮ ಶಂಭುಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸರ್ಕಾರದ ಸುಪರ್ದಿಗೆ.
6. ರಾಮನಗರ ಜಿಲ್ಲಾ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ 99.93 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ.
7. ಕರ್ನಾಟಕ ವಿಧಾನ ಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ಅಧಿನಿಯಮ 2022ಕ್ಕೆ ಘಟನೋತ್ತರ ಅನುಮೋದನೆ.
8. ಕಲಬುರಗಿ ತಾಲೂಕಿನ ಹಾಗರಗುಂಡಗಿ ಕೆರೆಗೆ ಭೀಮಾ ನದಿಯಿಂದ ಏತನಿರಾವರಿ ಯೋಜನೆ ಮೂಲಕ ನೀರು ತುಂಬಿಸುವ ಕಾಮಗಾರಿಯ 11 ಕೋಟಿ ರೂ. ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
9. ಎನ್​ಡಿಆರ್​ಎ-27ರಡಿ ಅನುಮೋದನೆಯಾಗಿರುವ 4 ಸೇತುವೆ ನಿರ್ಮಾಣ ಕಾಮಗಾರಿಯನ್ನು ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 66.88 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
10. ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿ ಚಿಕ್ಕಮುದ್ದೇನಹಳ್ಳಿ ಗ್ರಾಮ ಸ.ನಂ.27ರಲ್ಲಿ 4 ಎಕರೆ ಸರ್ಕಾರಿ ಖರಾಬು ಗೋಮಾಳ ಜಮೀನನ್ನು ಉಚಿತ ಆಸ್ಪತ್ರೆ ನಿರ್ವಣಕ್ಕಾಗಿ ಪ್ರಶಾಂತಿ ಬಾಲ ಮಂದಿರ ಟ್ರಸ್ಟ್​ಗೆ ಮಂಜೂರು.
11. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸ ತಾಲೂಕು ಆಡಳಿತಸೌಧ ಕಾಮಗಾರಿಗೆ 15 ಕೋಟಿ ರೂ.ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.
12. ಹೊಳಲ್ಕೆರೆ ತಾಲೂಕು ಬೊಮ್ಮನಕಟ್ಟೆ (ಪ್ರ.ವರ್ಗ) ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಪದವಿಪೂರ್ವ ಕಾಲೇಜಿಗೆ ಮೇಲ್ದರ್ಜೆಗೇರಿಸಿದ 13.59 ಕೋಟಿ ರೂ. ಕೋಟಿಗಳ ಅಂದಾಜಿಗೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.
13. ರಾಣೆಬೆನ್ನೂರು ನಗರಸಭಾ ಮಾಲಿಕತ್ವದ ಸಿಟಿಎಸ್ ನಂ.1002ರಲ್ಲಿ ಹೊಸದಾಗಿ 332 ಮಳಿಗೆಗಳನ್ನು ಈ ಹಿಂದೆ ಹಳೆಯ ಕಟ್ಟಡದಲ್ಲಿ ಇದ್ದಂತಹ ಬಾಡಿಗೆದಾರರಿಗೇ ಗುತ್ತಿಗೆ ಆಧಾರದ ಮೇಲೆ ನೀಡಲು ನಿರ್ಧಾರ.
14. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ 1275.15 ಚ.ಮೀ ಉಳ್ಳ ನಾಗರಿಕ ಸೌಲಭ್ಯ ನಿವೇಶವನ್ನು ಬ್ರಾಹ್ಮಣದ ಸಂಘರ್ಷ ಸಮಿತಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ತೀರ್ವನ.
15. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು 125 ಕೋಟಿ ರೂ. ಐಇಬಿಆರ್ ಸಾಲ ಪಡೆಯಲು ಸರ್ಕಾರಿ ಖಾತರಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 13 =
Remember me
