ಬೆಂಗಳೂರು:ಭಾರತೀಯ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದೆ.ವಿದೇಶಿಯರು ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದು,ನಾವು ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಖ್ಯಾತ ಕಲಾವಿದ ಪದ್ಮಭೂಷಣ ಜತಿನ ದಾಸ್ ಕರೆ ನೀಡಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಹಮ್ಮಿಕೊಂಡಿದ್ದ ಪ್ರೊ.ಎಂ.ಎಸ್.ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯನ್ನು ಅನೇಕ ವಿದೇಶಿಯರು ಅಳವಡಿಸಿಕೊಂಡಿದ್ದಾರೆ.ಎರಡೂ ಕೈಜೋಡಿಸಿ ಮುಗಿಯುವ ಪದ್ದತಿಯನ್ನು ಜಗತ್ತಿನ ವಿವಿಧ ದೇಶಗಳು ಅನುಸರಿಸುತ್ತಿವೆ.ಆದರೆ ಭಾರತೀಯರು ವಿದೇಶಿ ಸಂಸ್ಕೃತಿಗೆ ಮರುಳಾಗುತ್ತಿದ್ದಾರೆ.ಬೊಕ್ಕೆ ನೀಡುವುದು ವಿದೇಶಿ ಸಂಸ್ಕೃತಿ.ಚಿತ್ರಕಲಾ ಪರಿಷತ್ತು ಮುಂದಿನ ದಿನಗಳಲ್ಲಿ ಕೈತೋಟದಲ್ಲಿ ಬೆಳೆದ ಒಂದು ಹೂವನ್ನು ಅತಿಥಿಗಳಿಗೆ ನೀಡಿದರೆ ಸಾಕು.ಹಾಗೂ ಪರಿಷತ್ತಿನ ಆವರಣದಲ್ಲಿ ಪ್ಲಾಸ್ಟಿಕ್,ಪೇಪರ್ ಕಪ್‌ಗಳನ್ನು ಬಳಸುವ ಬದಲಿಗೆ ಮಣ್ಣಿನ ಕಪ್‌ಗಳನ್ನು ಬಳಸುವಂತೆ ಸಲಹೆ ನೀಡಿದರು.ಇದೇ ವೇಳೆ ಕರ್ನಾಟಕ ಸಂಸ್ಕೃತಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
ಜತಿನ್ ದಾಸ್ ಅವರು ಪೋರ್ಟೇಟ್‌ಗಳ ಬಗ್ಗೆ ಅತ್ಯಮೂಲ್ಯ ಮಾಹಿತಿಯುಳ್ಳ ಬೃಹತ್ ಗ್ರಂಥವನ್ನು ಹೊರತಂದಿದ್ದು,ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಆ ಗ್ರಂಥಗಳನ್ನು ಉಡುಗೊರೆಯಾಗಿ ನೀಡಿದರು.ಸಂಜೆ ನಡೆದ ಸಮಾರಂಭದಲ್ಲಿ ಜತಿನ್ ದಾಸ್ ಅವರ ಪೇಂಟಿಂಗ್ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ನಡೆಯಿತು.
ಸಮಾರಂಭದಲ್ಲಿ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಬಿ.ಎಲ್.ಶಂಕರ್,ಪ್ರಧಾನ ಕಾರ್ಯದರ್ಶಿ ಎಸ್.ಎನ್.ಶಶಿಧರ,ಸದಸ್ಯರಾದ ಡಾ.ಪುಷ್ಪ ದ್ರಾವಿಡ್ ಮತ್ತಿತರರು ಪಾಲ್ಗೊಂಡಿದ್ದರು.
ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರೊ.ನಂಜುಂಡರಾವ್ ಅವರ ತ್ಯಾಗದ ಲ ಎಂದು ಪತಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಬಣ್ಣಿಸಿದರು.ನಂಜುಂಡರಾವ್ ಅವರು ಸ್ವತಃ ಕಲಾವಿದರಾಗಿ ತಾವಷ್ಟೆ ಬೆಳೆಯದೆ,ತಮ್ಮ ಹಿರಿ–ಕಿರಿಯ ಕಲಾವಿದರ ಭವಿಷ್ಯ ನಿರ್ಮಿಸಲು ಬಹಳ ಶ್ರಮಪಟ್ಟು ಮೈಸೂರು ಪ್ರದೇಶ ಚಿತ್ರಕಲಾ ಪರಿಷತ್ ಹುಟ್ಟು ಹಾಕಿದ್ದರು.ಮುಂದೆ ದೇವರಾಜ ಅರಸು ಅವರ ಕಾಲದಲ್ಲಿ ಕುಮಾರ ಕೃಪಾ ರಸ್ತೆಯಲ್ಲಿ ಜಾಗ ದೊರೆತ ನಂತರ ಕರ್ನಾಟಕ ಚಿತ್ರಕಲಾ ಪರಿಷತ್ತಾಗಿ ಬೃಹದಾಕಾರವಾಗಿ ಬೆಳೆಯಿತು.
ಕಳೆದ8ವರ್ಷಗಳಿಂದ ಅವರ ಜನ್ಮದಿನದಂದು(ಜು.5)ಪರಿಷತ್ತು ರಾಷ್ಟ್ರೀಯ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.ಕರ್ನಾಟಕ ಚಿತ್ರಕಲಾ ಪರಿಷತ್ತು ಈ ವರೆಗೆ ನಡೆಸಿದ21ಚಿತ್ರಸಂತೆಗಳು ಜಾಗತಿಕ ಮನ್ನಣೆಗೆ ಪಾತ್ರವಾಗಿವೆ.ಮುಂದಿನ ಜ.5ಕ್ಕೆ22ನೇ ಚಿತ್ರಸಂತೆಗೆ ಬೇಕಾದ ಸಿದ್ಧತೆಯಲ್ಲಿ ಪರಿಷತ್ತು ತೊಡಗಿದೆ ಎಂದು ಬಿ.ಎಲ್.ಶಂಕರ್ ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 2 =
Remember me
