ಬೆಂಗಳೂರು: ಕರೊನಾದಿಂದಾಗಿ ಇದ್ದ ಕೆಲಸ ಕಳೆದುಕೊಂಡ ಅಥವಾ ಸಂಬಳ ಬಾರದ ಸ್ಥಿತಿಯಲ್ಲಿರುವ ಬಾಡಿಗೆದಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ಜತೆಗೆ, ಬಾಡಿಗೆ ಪ್ರಮಾಣ ಹೆಚ್ಚಿರುವ ಬೆಂಗಳೂರಿನಲ್ಲಿ ಬಾಡಿಗೆಯನ್ನೇ ಆದಾಯದ ಮೂಲವಾಗಿಸಿಕೊಂಡಿರುವ ಮನೆ ಮಾಲೀಕರಿಗೂ ಕರೊನಾ ತೊಂದರೆ ಉಂಟುಮಾಡಿದೆ.
ಪ್ರದೇಶಕ್ಕನುಗುಣವಾಗಿ ಬಾಡಿಗೆ
ಹಳೆಯ ಬೆಂಗಳೂರಿನ ಪ್ರದೇಶವಾದ ಮಲ್ಲೇಶ್ವರದಲ್ಲಿ 1 ಕೋಣೆ, ವರಾಂಡ ಹಾಗೂ ಅಡುಗೆ ಮನೆಯ (1ಬಿಎಚ್​ಕೆ) ಬಾಡಿಗೆ ಅಂದಾಜು 6,500-12,000 ಸಾವಿರ ರೂ., 2 ಬಿಎಚ್​ಕೆ 17-20 ಸಾವಿರ ರೂ., 3 ಬಿಎಚ್​ಕೆ 35 ಸಾವಿರ ರೂ. ಇದೆ. ಆದರೆ ಐಟಿ ಬಿಟಿ ಬೆಳವಣಿಗೆ ಕಂಡ ಪ್ರದೇಶಗಳು ಹಾಗೂ ಕೆಲ ಪ್ರದೇಶಗಳಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಎಚ್​ಎಸ್​ಆರ್ ಲೇಔಟ್​ನಲ್ಲಿ 1 ಬಿಎಚ್​ಕೆ 5,750-40,000 ರೂ., 2 ಬಿಎಚ್​ಕೆ 17,000-50,000 ರೂ., 3 ಬಿಎಚ್​ಕೆ 32,000-1.2 ಲಕ್ಷ ರೂ. ಇದೆ. ವೈಟ್​ಫೀಲ್ಡ್​ನಲ್ಲಿ ಕ್ರಮವಾಗಿ 5,400-12,000 ರೂ., 6,500-49,000 ರೂ. ಹಾಗೂ 21,000-55,000 ರೂ.ವರೆಗಿದೆ.
ಮುಂಗಡ ಕಡಿತ ಭಯ:ಬಾಡಿಗೆದಾರರಿಗೆ ಮಾಲೀಕರು ಒತ್ತಾಯ ಮಾಡಬಾರದು, ಅಂತಹ ಪ್ರಕರಣಗಳು ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಆದೇಶಿಸಿದೆ. ಇದರ ನಡುವೆಯೂ ಅನೇಕ ಮನೆ ಮಾಲೀಕರು ಬಾಡಿಗೆ ನೀಡುವಂತೆ ಒತ್ತಾಯಿಸುವುದು, ಮನೆ ಖಾಲಿ ಮಾಡುವಂತೆ ಬೆದರಿಕೆ ಒಡ್ಡುವುದು ನಡೆದೇ ಇದೆ. ಮಾಗಡಿ ರಸ್ತೆಯಲ್ಲಿರುವ ಗಾರ್ವೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ತುಮಕೂರು ಮೂಲದ ಉದ್ಯೋಗಿ ಶಂಕರ್ ಎರಡು ತಿಂಗಳಿಂದ ಊರಿನಲ್ಲಿದ್ದಾರೆ. ವಿಜಯನಗರದಲ್ಲಿರುವ ಮನೆ ಮಾಲೀಕರು ಬಾಡಿಗೆಗೆ ಒತ್ತಾಯಿಸುತ್ತಿದ್ದಾರೆ. ಮಾಸಿಕ 8,500 ರೂ. ಬಾಡಿಗೆ ನೀಡಬೇಕು. ಒಂದೇ ಕಟ್ಟಡದಲ್ಲಿ 9 ಬಾಡಿಗೆ ಮನೆಗಳಿವೆ. ಬಾಡಿಗೆ ನೀಡದಿದ್ದರೆ ಈಗಾಗಲೆ ನೀಡಿರುವ 10 ತಿಂಗಳ ಮುಂಗಡ ಹಣದಲ್ಲಿ ಒಂದೊಂದೆ ತಿಂಗಳು ಕಡಿತ ಮಾಡಿಕೊಳ್ಳುತ್ತೇವೆ, ಊರಿಂದ ಬಂದ ನಂತರ ಮನೆ ಖಾಲಿ ಮಾಡಿ ಎಂದು ತಿಳಿಸಿದ್ದಾರೆ. ಅನೇಕ ವರ್ಷಗಳ ಶ್ರಮದಿಂದ ಮುಂಗಡಕ್ಕೆ ಹಣ ಹೊಂದಿಸಿ ಇಟ್ಟಿದ್ದೇನೆ. ಆ ಹಣ ಖರ್ಚಾದರೆ ಬೇರೆ ಮನೆ ಬಾಡಿಗೆ ಹುಡುಕುವುದು ಕಷ್ಟವಾಗುತ್ತದೆ ಎಂದು ತಿಳಿಸುತ್ತಾರೆ ಶಂಕರ್.
ಮಾಲೀಕರದ್ದು ವಿಚಿತ್ರ ಸಂಕಟ:ಬೆಂಗಳೂರಿನ ರಿಯಲ್​ಎಸ್ಟೇಟ್ ಕ್ಷೇತ್ರದಲ್ಲಿ ಮನೆ ಮಾರಾಟದಷ್ಟೇ ವಹಿವಾಟು ಮನೆ ಬಾಡಿಗೆ ನೀಡುವಲ್ಲೂ ನಡೆಯುತ್ತದೆ. ಐಟಿ-ಬಿಟಿ ಕ್ಷೇತ್ರ ಉತ್ತುಂಗಕ್ಕೇರಿದ ನಂತರವಂತೂ ಬೆಂಗಳೂರಿನ ವಾಸದ ಮನೆಗಳ ಬಾಡಿಗೆ ಶೇ.50ರಿಂದ 100ರವರೆಗೆ ಏರಿಕೆ ಕಂಡಿದೆ. ಈಗಾಗಲೆ ಆ ಪ್ರದೇಶಗಳಲ್ಲಿ ಮನೆ ಹೊಂದಿದ್ದವರಿಗೆ ಇದು ಬಹುದೊಡ್ಡ ಆಶಾಕಿರಣವಾಗಿ ಮಾರ್ಪಾಡಾಗಿದೆ. ದೊಡ್ಡ ಮನೆಗಳನ್ನು 2-3 ಮನೆಗಳಾಗಿ ವಿಂಗಡಿಸಿ ಅದನ್ನೆ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ಮಲ್ಲೇಶ್ವರ, ಚಾಮರಾಜಪೇಟೆ, ಬಸವನಗುಡಿ, ಜಯನಗರದಂತಹ ಹಳೆಯ ಪ್ರದೇಶಗಳಲ್ಲಿ ಅನೇಕ ಹಿರಿಯ ನಾಗರಿಕರಿಗೆ ಇದೊಂದೇ ಆದಾಯ.
ಇದನ್ನೂ ಓದಿ:ಕೇಂದ್ರ ಸಚಿವ ಜಾವಡೇಕರ್ ಜತೆಗೆ ಬುಧವಾರ ವೇದಿಕೆ ಹಂಚಿಕೊಂಡಿದ್ದ ಪಿಐಬಿ ಡಿಜಿಗೆ ಕೋವಿಡ್-19 ಸೋಂಕು ದೃಢ
ರಾಜಾಜಿನಗರದಲ್ಲಿ 6 ಮನೆಗಳನ್ನು ಖಾಸಗಿ ಕಾರ್ಖಾನೆಯ ಉದ್ಯೋಗಿ ಪುರುಷೋತ್ತಮ್ ಬಾಡಿಗೆಗೆ ನೀಡಿದ್ದಾರೆ. ಇದು ಅವರಿಗೆ ಪ್ರಮುಖ ಆದಾಯದ ಮೂಲ. ಈ ಹಿಂದೆ 4 ಮನೆಗಳಿದ್ದು, ಮೂರನ್ನು ಬಾಡಿಗೆಗೆ ನೀಡಿದ್ದೆವು. ಹೆಚ್ಚಿನ ಬಾಡಿಗೆ ಲಭಿಸುತ್ತದೆ ಎಂಬ ಕಾರಣಕ್ಕೆ ಎರಡು ವರ್ಷದ ಹಿಂದೆ ಬ್ಯಾಂಕ್​ನಲ್ಲಿ ಸಾಲ ಪಡೆದು ಮೇಲೆ ಎರಡು ಮನೆ ನಿರ್ವಿುಸಿ ತಲಾ 12 ಸಾವಿರ ರೂ.ಗೆ ಬಾಡಿಗೆಗೆ ನೀಡಿದ್ದೇವೆ. ಮಾಸಿಕ 24 ಸಾವಿರ ರೂ. ಬಾಡಿಗೆ ಬರುತ್ತದೆ. ಆದರೆ ಬ್ಯಾಂಕ್​ನಲ್ಲಿ ಪಡೆದಿರುವ ಸಾಲಕ್ಕೆ ಇನ್ನೂ 8 ವರ್ಷ ಮಾಸಿಕ 27 ಸಾವಿರ ರೂ. ಇಎಂಐ ಕಟ್ಟಬೇಕು. ಆ ಸಾಲ ತೀರಿದ ನಂತರವಷ್ಟೇ ನಮಗೆ ಆದಾಯ ಆರಂಭವಾಗುತ್ತದೆ. ಮನೆ ಬಾಡಿಗೆಗೆ ಒತ್ತಾಯಿಸಿದರೆ ಶಿಕ್ಷೆ ಎಂದು ಸರ್ಕಾರ ಎಚ್ಚರಿಸಿದೆ. ಬಾಡಿಗೆದಾರರ ಸಂಕಷ್ಟ ಅರ್ಥ ಮಾಡಿಕೊಂಡು, ನಾವೂ ಬಾಡಿಗೆಗೆ ಒತ್ತಾಯ ಮಾಡಿಲ್ಲ. ಬೇಕಿದ್ದರೆ ಮುಂಗಡ ಹಣದಲ್ಲಿ ಕಡಿತ ಮಾಡಿಕೊಳ್ಳಿ ಎಂದು ಬಾಡಿಗೆದಾರರು ತಿಳಿಸಿದ್ದಾರೆ. ಆದರೆ, ಮುಂದಿನ ಬಾಡಿಗೆದಾರರು ಬಂದಾಗ ಅವರಿಂದ ಪಡೆದ ಮುಂಗಡವನ್ನು ಇವರಿಗೆ ನೀಡುವ ಉದ್ದೇಶದಲ್ಲಿ ಆ ಹಣ ಆಗಾಗಲೆ ಖರ್ಚಾಗಿದೆ. ಇಂತಹ ಸಮಯದಲ್ಲಿ ಭಾರೀ ಸಂಕಷ್ಟ ಎದುರಾಗಿದೆ ಎಂದು ಪುರುಷೋತ್ತಮ್ ವಿವರಿಸುತ್ತಾರೆ.
ಫೇಸ್​ಬುಕ್ ಪಾಸ್​ವರ್ಡ್ ಕೊಟ್ಟು ಕೆಟ್ಟ ಪ್ರಿಯಕರ: ಬ್ಲ್ಯಾಕ್​ಮೇಲ್​ ಶುರುಮಾಡಿದ್ಳು ಪ್ರೇಯಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − two =
Remember me
