ದಾವಣಗೆರೆ:ಸಹೋದರನ ಪುತ್ರ ಚಂದ್ರಶೇಖರ್ ಅಂತ್ಯಸಂಸ್ಕಾರ ನೆರವೇರಿದ್ದು, ಈ ಕುರಿತು ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅಂತ್ಯಸಂಸ್ಕಾರದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ಕೆಲವು ಬೆಳವಣಿಗೆ ಬಗ್ಗೆ ಹೇಳಿಕೊಂಡಿದ್ದಾರೆ.
ಕುಂದೂರು ಗ್ರಾಮ ಸೇರಿದಂತೆ ಎಲ್ಲರೂ ಪ್ರೀತಿ ತೋರಿಸಿದ್ದಾರೆ. ನನಗೆ ಎಷ್ಟು ಜನ ಪ್ರೀತಿ ತೋರಿಸಿದ್ದರೋ ಅವರು ಚಂದ್ರುಗೂ ಅಷ್ಟೇ ಪ್ರೀತಿ ತೋರಿಸಿದ್ದರು. ಆದರೆ ಚಂದ್ರು ಶವವಾಗಿ ಬಂದ. ಚಂದ್ರು ವಾಪಸ್ ಬರಲ್ಲ ನಿಜ, ಅದಾಗ್ಯೂ ಸತ್ಯಾಂಶ ಹೊರಗೆ ಬರುತ್ತದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಪ್ರಕರಣ ಕುರಿತಂತೆ ಎಲ್ಲರೂ ಪೋನ್ ಮಾಡಿ ವಿಚಾರಣೆ ಮಾಡಿದ್ದಾರೆ. ಗೃಹ ಸಚಿವರು ಸಂಪೂರ್ಣ ತನಿಖೆ ಮಾಡಿಸುವ ಭರವಸೆ ನೀಡಿದ್ದಾರೆ. ನಿನ್ನ ಜತೆ ಸರ್ಕಾರ ಇದೆ, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ನಿನ್ನ ಜನಪ್ರಿಯತೆ ನೋಡಿ ಆಗದವರು ಹೀಗೆ ಮಾಡಿದ್ದಾರೆ, ಮತ್ತೆ ಮನೆಗೆ ಬರುತ್ತೇನೆ ಅಂದಿದ್ದಾರೆ ಸಿಎಂ ಭರವಸೆ ನೀಡಿದ್ದಾಗಿ ರೇಣುಕಾಚಾರ್ಯ ಹೇಳಿದ್ದಾರೆ.
ಯಡಿಯೂರಪ್ಪ ಅವರು ನಾಲ್ಕೈದು ಬಾರಿ ಪೋನ್ ಮಾಡಿ ವಿಚಾರಿಸಿದ್ದಾರೆ. ಶೋಭಾ ಕರಂದ್ಲಾಜೆ, ಸಿ.ಟಿ ರವಿ ಸೇರಿದಂತೆ ರಾಜ್ಯಾಧ್ಯಕ್ಷರೂ ಪೋನ್ ಮಾಡಿ ನಿನ್ನ ಜೊತೆ ಇದ್ದೇನೆ ಅಂದಿದ್ದಾರೆ. ಮೊಮ್ಮಗ ಅಜ್ಜಿಯ ಮಡಿಲಿನಲ್ಲಿ ಮಲಗಿದ್ದಾನೆ. ಸಂಪೂರ್ಣ ಸಹಾಯ ನೀಡಿದ ಎಲ್ಲರಿಗೂ ಧನ್ಯವಾದ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ಹುಣಸೆಹಣ್ಣಿಗೆ ಆಸೆಪಟ್ಟು ಪ್ರಾಣ ಕಳೆದುಕೊಂಡ ಮಹಿಳೆ; ಹಣ್ಣು ಕೈಗೆ ಸಿಕ್ತು ಎನ್ನುವಷ್ಟರಲ್ಲೇ ಜೀವವೇ ಹೋಯ್ತು!
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four + fifteen =
Remember me
