ಬೆಂಗಳೂರು:ರಾಹುಲ್ ಗಾಂಧಿಯವರದ್ದು ಭಾರತ್ ಜೋಡೊ ಯಾತ್ರೆಯಲ್ಲ, ಭಾರತ್ ತೋಡೊ ಯಾತ್ರೆ. ರಾಹುಲ್ ಗಾಂಧಿಗೆ ಪ್ರಬುದ್ದತೆ ಇಲ್ಲ, ಅವರಿನ್ನು ಎಳಸು. ರಾಹುಲ್ ಗಾಂಧಿ ಕಾಮಿಡಿ ಪೀಸ್ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ.
ಭಾರತದಲ್ಲಿ ಐಕ್ಯತೆ ಇಲ್ವಾ? ದೇಶದ ಎಲ್ಲ ಭಾಗವನ್ನು ಬಿಟ್ಟು ಕೊಟ್ಡಿದ್ದು ಕಾಂಗ್ರೆಸ್. ಕಾಂಗ್ರೆಸ್ ಏನಾದ್ರೂ ಅಧಿಕಾರದಲ್ಲಿದ್ದರೆ ಕಾಶ್ಮೀರವನ್ನು ಬಿಟ್ಟು ಕೊಡುತ್ತಿತ್ತು. ರಾಹುಲ್ ಗಾಂಧಿ ಐರನ್ ಲೆಗ್​ನಿಂದ ಭಾರತ್ ಜೋಡೊ ಯಾತ್ರೆ ಸಂಪೂರ್ಣ ವಿಫಲವಾಗಲಿದೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರಲ್ಲಿ ಸಮನ್ವಯತೆ ಇಲ್ಲ. ಸಿದ್ದರಾಮಯ್ಯ ಅವರಿಗೆ ನಾನು ಸವಾಲು ಹಾಕ್ತೀನಿ. ಕರ್ನಾಟಕದಲ್ಲಿ ನೀವು ಎಲ್ಲೆಲ್ಲಿ ಕಾಲಿಡ್ತೀರೋ ಅಲ್ಲೆಲ್ಲ ಜನ ಉತ್ತರ ಕೊಡ್ತಾರೆ. ಕಾಂಗ್ರೆಸ್​ನ ಒಡೆದ ಮನೆಯನ್ನು ಸರಿ ಮಾಡೋಕೆ ರಾಹುಲ್ ಗಾಂಧಿಗೆ ಆಗುತ್ತಿಲ್ಲ. ನಿಮ್ಮ ಪಕ್ಷದ ಅಧ್ಯಕ್ಷ ಸ್ಥಾನ ಎಲ್ಲರೂ ಬೇಡ ಬೇಡ ಅಂತಿದ್ದಾರೆ. ಮೊದಲು ನಿಮ್ಮ ಕುರ್ಚಿಯನ್ನು ಗಟ್ಟಿ ಮಾಡಿಕೊಳ್ಳಿ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ 175 ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ತೆಗೆದುಕೊಂಡರು. ಯಾವ ಕಾರಣಕ್ಕೆ ಕೇಸ್ ವಾಪಸ್ ತಗೊಂಡ್ರಿ ಅಂತ ಹೇಳಿ. ಅದರ ಪರಿಣಾಮ ಹಿಂದೂ, ಬಿಜೆಪಿ ಕಾರ್ಯಕರ್ತರ ಕೊಲೆ ಆಯ್ತು. ಸಿದ್ದರಾಮಯ್ಯ ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಮಾಡ್ಕೊಳ್ತಿದ್ದಾರೆ ಎಂದು ಆರೋಪಿಸಿದರು.
ಹಿಂದುತ್ವಕ್ಕೆ ಮೊದಲು ತನ್ನನ್ನು ಸಮರ್ಪಿಸಿಕೊಂಡ ಸಂಸ್ಥೆ ಆರ್‌ಎಸ್ಎಸ್. ದೇಶ ವಿರೋಧಿ ಚಟುವಟಿಕೆ ಕಂಡುಬಂದಾಗ ಅದರ ವಿರುದ್ಧ ದನಿ ಎತ್ತೋದೇ ಆರ್‌ಎಸ್ಎಸ್. ಕೋವಿಡ್ ಬಂದಿದ್ದಾಗ ಜನರ ರಕ್ಷಣೆಗೆ ಬಂದಿದ್ದು ಆರ್‌ಎಸ್ಎಸ್ ಹೊರತು ಸಿದ್ದರಾಮಯ್ಯ ಅಲ್ಲ. ಆರ್‌ಎಸ್ಎಸ್ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.
ತಾಕತ್ ಇದ್ರೆ ಆರ್‌ಎಸ್ಎಸ್ ಬ್ಯಾನ್ ಮಾಡಿ ಅಂತೀರ. ತಾಕತ್ ಬಗ್ಗೆ ಮಾತಾಡುವ ನೈತಿಕತೆ ಸಿದ್ದರಾಮಯ್ಯಗಿಲ್ಲ. ಸಿದ್ದರಾಮಯ್ಯ ಅವರದ್ದು ಹರಕು ಬಾಯಿ ಎಂದು ಟೀಕಿಸಿದರು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:fourteen − eleven =
Remember me
