ದಾವಣಗೆರೆ:ಸಹೋದರನ ಮಗ ಚಂದ್ರಶೇಖರ್​ ಸಾವಿನ ದುಃಖದಲ್ಲಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ, ಇಂದು ಚಂದ್ರು ಅಪಘಾತಕ್ಕೀಡಾಗಿರುವ ಸ್ಥಳಕ್ಕೆ ಭೇಟಿ ನೀಡಿದ್ದು, ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಗಂಭೀರವಾದ ಆರೋಪ ಮಾಡಿದ್ದಾರೆ.
ನ್ಯಾಮತಿ-ಹೊನ್ನಾಳಿ ಮಾರ್ಗ ಮಧ್ಯ ಇರುವ ತುಂಗಾ ಮೇಲ್ದಂಡೆ ನಾಲೆಗೆ ಚಂದ್ರು ಕಾರು ಬಿದ್ದಿತ್ತು. ಇಂದು ಆ ಸ್ಥಳಕ್ಕೆ ಪರಿಶೀಲನೆ ಸಲುವಾಗಿ ರೇಣುಕಾಚಾರ್ಯ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಸುದ್ದಿಗಾರರ ಜತೆ ಪ್ರತಿಕ್ರಿಯಿಸಿದರು.
ಕಾರು ಹೋಗಿರುವ ಮಾರ್ಗದ ಬಗ್ಗೆ ಪರಿಶೀಲನೆ ಮಾಡಿದ ರೇಣುಕಾಚಾರ್ಯ, ಪೊಲೀಸ್ ತನಿಖೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾರು ಸಿಕ್ಕಿದ್ದ ಸ್ಥಳವೇ ಬೇರೆ, ಪೊಲೀಸರು ಹೇಳಿದ್ದ ಫೋನ್​ ಲೊಕೇಷನ್ನೇ ಬೇರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಂಗಾ ನಾಲೆ ಬಳಿ ಇರುವ ಪೈಪ್​ಗೆ ಯಾವುದೇ ಹಾನಿ ಆಗಿಲ್ಲ ಎಂದು ಹೇಳಿರುವ ರೇಣುಕಾಚಾರ್ಯ, ಚಂದ್ರುವಿನದ್ದು ಸಹಜ ಸಾವಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ. ರೇಣುಕಾಚಾರ್ಯ ಜತೆ ವಿಧಾನಪರಿಷತ್ ಸದಸ್ಯ ಅರುಣ್​ ಹಾಗೂ ಪಕ್ಷದ ಬೆಂಬಲಿಗರು ಜತೆಗಿದ್ದರು.
ಶಿಕ್ಷಕರ ಏಟಿಗೆ ಬಲಿಯಾದಳು ನಾಲ್ಕನೇ ತರಗತಿಯ ವಿದ್ಯಾರ್ಥಿನಿ!

ಹೆಚ್ಚಾಗದ ವೇತನ, ‘108’ ಸಮಸ್ಯೆ: ಮನನೊಂದು ವಿಷ ಕುಡಿದ ಸರ್ಕಾರಿ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
