ಹೊನ್ನಾಳಿ/ ದಾವಣಗೆರೆ:ಕಳೆದ ಭಾನುವಾರ ನಾಪತ್ತೆಯಾಗಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಹೊನ್ನಾಳಿ ಹೊರವಲಯದ ಹವೇಲಿ ಕಡದಕಟ್ಟೆ ಬಳಿ ತುಂಗಾ ಮೇಲ್ದಂಡೆ ನಾಲೆಯಲ್ಲಿ ಗುರುವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾನೆ.
ನಾಲೆ ಸೇತುವೆ ಮೇಲೆ ಕಾರಿನ ಬಿಡಿ ಭಾಗಗಳು ಕಾಣಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡಾಗ ಚಂದ್ರಶೇಖರ್ ಪ್ರಯಾಣಿಸುತ್ತಿದ್ದ ಕಾರು ರಸ್ತೆಯಿಂದ ೩೦ ಅಡಿ ಆಳದ ನಾಲೆಗೆ ಬಿದ್ದಿರುವುದು ಪತ್ತೆಯಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ, ಮುಳುಗುತಜ್ಞರು ಧಾವಿಸಿ ಕ್ರೇನ್ ಮೂಲಕ ಕಾರನ್ನು ಮೇಲೆತ್ತಿದ್ದು ಕೊಳೆತ ಸ್ಥಿತಿಯಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ. ರೇಣುಕಾಚಾರ್ಯ ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು ಇಂದು ರಾತ್ರಿ ಅಥವಾ ಬೆಳಗ್ಗೆ ಪರೀಕ್ಷೆ ನಡೆಯಲಿದ್ದು ಶುಕ್ರವಾರ ಮಧ್ಯಾಹ್ನ ೩ಕ್ಕೆ ಹೊನ್ನಾಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕೊಲೆ ದೂರು ದಾಖಲುಚಂದ್ರಶೇಖರ್ ಅವರದು ಆಕಸ್ಮಿಕ ಸಾವಲ್ಲ. ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿ ರೇಣುಕಾಚಾರ್ಯ ಕುಟುಂಬಸ್ಥರು ಹೊನ್ನಾಳಿ ಪೊಲೀಸ್ ಠಾಣೆಗೆ ಗುರುವಾರ ರಾತ್ರಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆಯಿಂದ ಮೂರು ಕಿಲೋ ಮೀಟರ್ ದೂರರೇಣುಕಾಚಾರ್ಯ ಅವರ ಮನೆಯಿಂದ ಮೂರು ಕಿಲೋ ಮೀಟರ್ ದೂರದ ಎಚ್. ಕಡದಕಟ್ಟೆ ನಾಲೆ ಬಳಿ ಬಿಳಿ ಬಣ್ಣದ ಕ್ರೇಟಾ ಕಾರು ನಾಲೆಗೆ ಬಿದ್ದು ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಡ್ರೋನ್ ಬಳಸಿ ಪತ್ತೆಯಲ್ಲಿ ತೊಡಗಿದ್ದ ವೇಳೆ ನಾಲೆ ಮೇಲೆ ಕಾರಿನ ಬಿಡಿ ಭಾಗಗಳು ಹಾಗೂ ನಾಲೆಯ ನೀರಿನಲ್ಲಿ ಬಿಳಿ ಬಣ್ಣದ ಕಾರು ಮುಳುಗಿರುವುದು ಕಂಡು ಬಂದಿದೆ.
ಸಾವಿನ ಸುತ್ತ ಅನುಮಾನದ ಹುತ್ತಈ ಪ್ರಕರಣದ ಸುತ್ತ ಹತ್ತು ಹಲವು ಅನುಮಾನಗಳು ಮೂಡಿದ್ದು ಕಾರು ಅಪಘಾತ ಆಕಸ್ಮಿಕವೋ – ಆತ್ಮಹತ್ಯೆಯೋ- ಕೊಲೆಯೋ? ಎಂಬಿತ್ಯಾದಿ ಪ್ರಶ್ನೆಗಳು ಎದುರಾಗಿವೆ. ಚಂದ್ರಶೇಖರ್ ಕಾರು ಚಲಾಯಿಸುತ್ತಿದ್ದರು ಎನ್ನುವುದಾದರೆ, ಅವರ ಮೃತದೇಹ ಹಿಂಬದಿ ಸೀಟಿಗೆ ಹೇಗೆ ಬಂದಿತು ಎಂಬುದು ಅನುಮಾನಕ್ಕೆ ಕಾರಣವಾಗಿದೆ.
ಅಪಘಾತಕ್ಕೀಡಾದ ಕಾರಿನ ಏರ್ ಬ್ಯಾಗ್ ಓಪನ್ ಆಗಿತ್ತು. ಸೀಟು ಬೆಲ್ಟ್ ಹಾಕಿದ್ದರೆ ಮಾತ್ರ ಏರ್ ಬ್ಯಾಗ್ ಓಪನ್ ಆಗಲು ಸಾಧ್ಯ.. ಬೆಲ್ಟ್ ಹಾಕಿದ್ದರೆ ಶವ ಹಿಂದೆ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಮೂಡಿದೆ. ಪೊಲೀಸರು ಈ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಭಾನುವಾರ ರಾತ್ರಿ ಗೌರಿಗದ್ದೆಗೆ ಹೋಗಿ ಶಿವಮೊಗ್ಗಕ್ಕೆ ಬಂದು ಸ್ನೇಹಿತರನ್ನಿಳಿಸಿದ ಚಂದ್ರು ಅವರ ಕ್ರೆಟಾ ಕಾರನ್ನು ಸ್ವಿಪ್ಟ್ ಡಿಸೈರ್ ಕಾರೊಂದು ಹಿಂಭಾಲಿಸುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಶಾಸಕರು ಹೇಳಿದ್ದು ಆ ಕಾರಿಗೂ ಈ ಪ್ರಕರಣಕ್ಕೂ ಲಿಂಕ್ ಇದೆಯೇ ಎಂದೂ ಪರಿಶೀಲಿಸಲಾಗುತ್ತಿದೆ.
ಭಾನುವಾರ ರಾತ್ರಿ 11-36ರ ವೇಳೆ ನ್ಯಾಮತಿ-ಸುರಹೊನ್ನೆ ಸಮೀಪ ಚಂದ್ರು ಅವರ ಮೊಬೈಲ್ ಲೋಕೇಷನ್ ಪತ್ತೆಯಾಗಿತ್ತು. ಸೋಮವಾರ ಬೆಳಗ್ಗೆ ೬-೨೮ರ ವೇಳೆ ಸ್ವಿಚ್ ಆಫ್ ಆಗಿತ್ತು.ಗೌರಿ ಗದ್ದೆಗೆ ಹೋಗಿದ್ದು ಕಿರಣ್ ಕಾರಲ್ಲ,. ಗ್ರೇ ಕಲರ್ ಕಾರು
ಗೌರಿಗದ್ದೆಯ ಆಶ್ರಮಕ್ಕೆ ಹೊನ್ನಾಳಿಯಿಂದ ಬಿಳಿಯ ಕ್ರೆಟಾ ಕಾರಿನಲ್ಲಿ ತೆರಳಿದ್ದ ಚಂದ್ರಶೇಖರ್ ಮಾರ್ಗ ಮಧ್ಯೆ ಶಿವಮೊಗ್ಗದಲ್ಲಿ ಕೆಲವು ಸ್ನೇಹಿತರೊಂದಿಗೆ ಗುರೂಜಿ ಭೇಟಿಗೆ ತೆರಳಿದ್ದರು. ಆದರೆ., ಗೌರಿ ಗದ್ದೆ ತಲುಪಿದ್ದು ಮಾತ್ರ ಚಂದ್ರು ಅವರ ಕಾರಲ್ಲ., ಬದಲಾಗಿ ಗ್ರೇ ಕಲರ್ ಕಾರ್, ಇದನ್ನು ವಿನಯ್ ಗುರೂಜಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ರೇಣುಕಾಚಾರ್ಯ ಮಾಹಿತಿ ನೀಡಿದ್ದಾರೆ.ಅಪಹರಣದ ಶಂಕೆ ವ್ಯಕ್ತಗುರುವಾರ ಮಧ್ಯಾಹ್ನ ಮಾಧ್ಯಮಗಳ ಜತೆ ಮಾತನಾಡಿದ್ದ ಶಾಸಕ ರೇಣುಕಾಚಾರ್ಯ, ಚಂದ್ರು ಅವರನ್ನು ಯಾರೋ ಅಪಹರಣ ಮಾಡಿದ್ದಾರೆ. ಇದೊಂದು ಪೂರ್ವ ನಿಯೋಜಿತ ಸಂಚು ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಅಪಹರಣ ಮಾಡಿದವರು ಏನೇ ಡಿಮಾಂಡ್ ಮಾಡಿದರೆ ದೂರು ಕೂಡ ನೀಡದೆ ಬೇಷರತ್ತಾಗಿ ಅವರ ಬೇಡಿಕೆ ಈಡೇರಿಸಲು ಸಿದ್ಧ. ಯಾರಾದರೂ ಹುಡುಕಿ ಕೊಟ್ಟರೆ ಅವರಿಗೆ ಸೂಕ್ತ ಬಹುಮಾನ ಕೊಡುವೆ ಎಂದು ಘೋಷಿಸಿದ್ದರು.ನನ್ನನ್ನೂ ಕರೆದುಕೊಂಡು ಬಿಡು ಚಂದ್ರು!ತಮ್ಮನ ಮಗನ ಸಾವಿನ ಸುದ್ದಿ ಕೇಳಿ ಜರ್ಜರಿತರಾಗಿದ್ದ ರೇಣುಕಾಚಾರ್ಯ ಅಪಘಾತಕ್ಕೀಡಾದ ಕಾರನ್ನು ಗುದ್ದಿ ಒಂದೇ ಸಮನೆ ರೋಧಿಸುತ್ತಿದ್ದರು. ನೀನು ಮನೆಗೆ ಬಂದೇ ಬರುತ್ತೀ ಎಂದು ದೀಪ ಹಚ್ಚಿಟ್ಟು ಕಾದಿದ್ದೆ. ನನ್ನನ್ನೂ ಕರೆದುಕೊಂಡು ಬಿಡು ಎಂದು ಕಣ್ಣೀರಿಟ್ಟರು.ಆರು ಜನರು ವಶಕ್ಕೆಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಕಿರಣ್ ಸೇರಿ ಆರು ಜನರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮಣಿಪಾಲ್‌ನಿಂದ ಆಗಮಿಸಿರುವ ವಿಶೇಷ ತನಿಖಾಧಿಕಾರಿ ದೇವರಾಜ್ , ಸಿಪಿಐ ಸಿದ್ದೇಗೌಡ ಮತ್ತಿತತರರು ಇದ್ದರು ಮಾಜಿ ಶಾಸಕ ಡಿ.ಜಿ.ಶಾಂಂತನಗೌಡ ಸೇರಿದಂತೆ ಹೊನ್ನಾಳಿ- ನ್ಯಾಮತಿ ತಾಲೂಕಿನ ಮುಖಂಡರು, ರೇಣುಕಾಚಾರ್ಯ ಅವರ ಅಭಿಮಾನಿಗಳು, ಜನಸಾಮಾನ್ಯರು ಭೇಟಿ ನೀಡಿ ಶಾಸಕರಿಗೆ ಸಾಂತ್ವನ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + two =
Remember me
