ಬೆಂಗಳೂರು:ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ವೈರಲ್​ ಆಗುತ್ತಿದ್ದಂತೆ ಸೋಶಿಯಲ್​​ ಮೀಡಿಯಾದಲ್ಲಿ  ಕಾಲ್​​ ಮಾಡಿರುವ ವಿಡಿಯೋ ಹಾಗೂ ಬೆಡ್​ ಮೇಲೆ ಕುಳಿತು ಮಾತನಾಡುತ್ತಿರುವ ಫೋಟೋಗಳು ವೈರಲ್​ ಆಗುತ್ತಿವೆ.  ಜೈಲಿನಲ್ಲಿರುವ ದರ್ಶನ್​​ಗೆ ರಾಜಾತಿಥ್ಯದ ವ್ಯವಸ್ಥೆ ಮಾಡುತ್ತಿರುವುದು ಯಾರು ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆದ ನಟ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಹೇಗಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ದರ್ಶನ್ ಅವರು ಜೈಲಿನಲ್ಲಿ ಆರಾಮಾಗಿ ಇದ್ದಾರೆ ಅನ್ನೋ ಒಂದು ಫೋಟೋ ಇದೀಗ ವೈರಲ್ ಆಗಿದೆ.
ಮೊದಲು ಲೀಕ್​ ಆಗಿರುವ ಫೋಟೋ:  ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಕುಳಿತು ಬೆಂಗಳೂರಿನ ರೌಡಿ ಶೀಟರ್‌ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಕುಳಿತುಕೊಂಡು ದರ್ಶನ್ ಸಿಗರೇಟ್‌ ಸೇದುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ.ಪ್ಲಾಸ್ಟಿಕ್‌ ಕುರ್ಚಿಯಲ್ಲಿ ಕುಳಿತುಕೊಂಡಿರುವ ದರ್ಶನ್‌, ಒಂದು ಕೈನಲ್ಲಿ ಟೀ ಕಪ್ ಮತ್ತು ಇನ್ನೊಂದು ಕೈನಲ್ಲಿ ಸಿಗರೇಟ್‌ ಹಿಡಿದುಕೊಂಡಿದ್ದಾನೆ. ಆತನ ಜೊತೆಗೆ ಮತ್ತೊಬ್ಬ ಕೈದಿಯಾಗಿರುವ ಮ್ಯಾನೇಜರ್‌ ನಾಗರಾಜ್‌ ಕೂಡ ಇದ್ದಾನೆ. ದರ್ಶನ್‌ ಕೂದಲು ತೆಗೆದಿರುವುದು ಫೋಟೋದಲ್ಲಿ ಕಂಡುಬಂದಿದೆ. ಮತ್ತೋರ್ವ ಕುಳ್ಳ ಸೀನ ಎಂದು ತಿಳಿದುಬಂದಿದೆ.
ಈ ಫೋಟೋ ಹೇಗೆ ಹೊರಗಡೆ ಬಂತು ಎಂಬ ಕಥೆ ಕೂಡ ಕುತೂಹಲವಾಗಿದೆ. ವೇಲು ಅನ್ನುವ ಖೈದಿ ಈ ಫೋಟೋವನ್ನು  ತೆಗೆದಿದ್ದು, ತನ್ನ ಹೆಂಡತಿಗೆ ಆತ ಜೈಲಿನಿಂದ ಫೊಟೋ ಕಳುಹಿಸಿದ್ದ. ಈಗ ಅದು ಹೊರಬಂದಿದೆ ಎನ್ನಲಾಗಿದೆ. ಆದರೆ ಈ ಕುರಿತಾಗಿ ಯಾವುದೇ ಸ್ಪಷ್ಟವಾದ ಮಾಹಿತಿ ಇಲ್ಲ.
ವಿಡಿಯೋ ಕಾಲ್​ ಲೀಕ್​​ :ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಅಲಿಯಾಸ್​ ಜನಾರ್ದನ್ ಮಗ ಸತ್ಯನ ಜೊತೆ ಮಾತಾನಾಡಿರುವುದಾಗಿ ತಿಳಿದುಬಂದಿದೆ. ದರ್ಶನ್​ಗೆ ರೌಡಿಗಳ ಜತೆ ಲಿಂಕ್​ ಇದೆ ಎಂಬ ಆರೋಪ ಆಗಾಗ ಕೇಳಿಬರುತ್ತಿತ್ತು. ಇದೀಗ ಫೋಟೋ ಮತ್ತು ವಿಡಿಯೋ ವೈರಲ್​ ಆಗಿರುವುದನ್ನು ನೋಡಿದರೆ ನಿಜ ಎನಿಸುತ್ತಿದೆ.
ಮೂರನೇ ಬಾರಿ ಫೋಟೋ ಲೀಕ್​​:ಇಂದು ಬೆಳಿಗ್ಗೆ ಲೀಕ್​ ಆಗಿರುವ ಫೋಟೋದಲ್ಲಿ ದರ್ಶನ್​​ ಬೇಡ್​ ಮೇಲೆ ಕುಳಿತು ವ್ಯಕ್ತಿಯೊಬ್ಬನ ಜತೆ ಮಾತನಾಡುತ್ತಾ ಕುಳಿತ್ತಿದ್ದಾರೆ. ಕೈಲಿ ಮೊಬೈಲ್​ ಇದೆ ಎನ್ನಲಾಗಿತ್ತು.
ಮಿಲ್ಟ್ರಿ ಹೋಟೆಲ್​ನಿಂದಲೇ ಬಿರಿಯಾನಿ ಪೂರೈಕೆ;ದರ್ಶನ್​ಗೆ ಮನೆ ಊಟ ಮಾತ್ರ ಅಲ್ಲ. ಫೇಮಸ್ ಮಿಲ್ಟ್ರಿ ಹೋಟೆಲ್​ನಿಂದಲೇ ಬಿರಿಯಾನಿ ಪೂರೈಕೆ ಆಗುತ್ತಿದೆ. ಹೌದು, ದರ್ಶನ್ ಮಾಂಸ ಪ್ರಿಯ. ಮಾಂಸಾಹಾರದ ಊಟದ ಮೇಲೆ ಅವರಿಗೆ ಸಖತ್ ಪ್ರೀತಿ. ಹೀಗಾಗಿ, ಬನಶಂಕರಿಯ ಶಿವಾಜಿ ಮಿಲ್ಟ್ರಿ ಹೋಟೆಲ್​ನಿಂದಲೇ ದರ್ಶನ್​ಗೆ ಬಿರಿಯಾನಿ ಪೂರೈಕೆ ಆಗುತ್ತಿದೆ ಎನ್ನಲಾಗಿದೆ.  ಊಟದ ಜೊತೆ ಬೇಕಾದಾಗ ಕಿಕ್ಕೇರಿಸಿಕೊಳ್ಳಲು ಎಣ್ಣೆಯೂ ಸಿಗುತ್ತಿದೆಯಂತೆ.ದರ್ಶನ್ ಅವರು ಒಬ್ಬನೆ ಕೂತು ಎಣ್ಣೆ ಕುಡಿಯುತ್ತಿಲ್ಲ. ಜೈಲಿನಲ್ಲಿರೋ ನಟೋರಿಯಸ್​ ಖೈದಿಗಳ ಜೊತೆಯೇ ದರ್ಶನ್ ಎಣ್ಣೆ ಪಾರ್ಟಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.
ಇದೀಗ ಕೊಲೆ ಆರೋಪಿ ದರ್ಶನ್​ಗೆ ಜೈಲಲ್ಲಿ ಸಿಗರೇಟ್ ಸಿಕ್ಕಿದ್ದು ಹೇಗೆ..? ದುಡ್ಡು ಕೊಟ್ರೆ ಜೈಲಲ್ಲಿ ಏನು ಬೇಕಾದ್ರೂ ಸಿಗುತ್ತಾ? ಜೈಲಲ್ಲೂ ಕೊಲೆ ಆರೋಪಿಯ ಐಷಾರಾಮಿ ಲೈಫ್ ಇರುತ್ತಾ ಎಂಬ ಪ್ರಶ್ನೆಗಳು ಎದ್ದಿದೆ.
ಪೂರೈಕೆ ಯಾರಿಂದ?:ದರ್ಶನ್​ಗೆ ಇಷ್ಟೆಲ್ಲ ವ್ಯವಸ್ಥೆ ಮಾಡ್ತಿರೋದು ರೌಡಿ ಶೀಟರ್ ಒಬ್ಬ ಎನ್ನಲಾಗಿದೆ. ರೌಡಿ ವಿಲ್ಸನ್ ಗಾರ್ಡನ್ ನಾಗನಿಂದ ದರ್ಶನ್​ಗೆ ಬೇಕಾದಂತಹ ವ್ಯವಸ್ಥೆ ಮಾಡಲಾಗುತ್ತಿದೆ. ದರ್ಶನ್​ಗೆ ಬಿರಿಯಾನಿ, ಎಣ್ಣೆ, ಸಿಗರೇಟ್, ಮಸಾಜ್ ವ್ಯವಸ್ಥೆಯನ್ನೂ ಮಾಡಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಸಿದ್ದಾಪುರ ಮಹೇಶ್ ಕೊಲೆ ಕೇಸ್​ನಲ್ಲಿ ವಿಲ್ಸನ್ ಗಾರ್ಡನ್ ನಾಗ ಜೈಲಿನಲ್ಲಿದ್ದಾನೆ.
ಆರೋಪಿ ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಎಲ್ಲಾ ಸೌಲಭ್ಯ ಸಿಗುತ್ತಿದೆ ಎನ್ನಲಾಗಿದೆ. ನಾಮಾಕವಸ್ಥೆಗಷ್ಟೇ ಅವರು ಜೈಲಿನಲ್ಲಿ ಇದ್ದಾರೆ. ಸಿಗರೇಟ್ ಮಾತ್ರವಲ್ಲ ಬೇಕಾದ ಎಲ್ಲಾ ವಸ್ತುಗಳು ದರ್ಶನ್​ಗೆ ಸಿಗುತ್ತಿದೆ ಎನ್ನಲಾಗಿದೆ.
ಜೈಲಲ್ಲಿರುವ ದರ್ಶನ್‌ ಮತ್ತೊಂದು ಫೋಟೋ ಲೀಕ್; ನಿನ್ನೆ ಕೈಲಿ ಸಿಗ್ರೇಟ್​ ಇಂದು ಮೊಬೈಲ್

ನಟೋರಿಯಸ್‌ ರೌಡಿಗಳ ಜತೆ ದರ್ಶನ್​! ಪರಪ್ಪನ ಅಗ್ರಹಾರ ಜೈಲಿನಿಂದ ದಾಸನ ಫೋಟೋ ಲೀಕ್ ಆಗಿದ್ದು ಹೇಗೆ?

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:twenty − 9 =
Remember me
