ಬೆಂಗಳೂರು:ಚಿತ್ರದುರ್ಗದ ರೇಣುಕಸ್ವಾಮಿ ಭೀಕರ ಹತ್ಯೆ ಪ್ರಕರಣದಲ್ಲಿ ಸದ್ಯ ಕಳೆದ ಎರಡು ತಿಂಗಳಿನಿಂದ ಪರಪ್ಪನ ಜೈಲು ಸೇರಿರುವ ಎ2 ಆರೋಪಿ ನಟ ದರ್ಶನ್​, ಇದೀಗ ಇತರೆ ರೌಡಿಗಳ ಜತೆ ಜೈಲಿನೊಳಗೆ ಒಂದು ಕೈನಲ್ಲಿ ಕಾಫಿ ಲೋಟ ಹಾಗೂ ಮತ್ತೊಂದು ಕೈಯಲ್ಲಿ ಸಿಗರೇಟ್​ ತುಂಡು ಹಿಡಿದಿರುವ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ಇನ್ನು ಈ ವಿಷಯ ತಿಳಿದ ಮೃತ ರೇಣುಕಸ್ವಾಮಿ ಅವರ ತಂದೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಒದಿ:ಕನ್ನಡ ಮಕ್ಕಳಿಗೆ ಮಲಯಾಳಂ ಶಿಕ್ಷಕಿ : ಕೋರಿಕಂಡ ಅಂಗನವಾಡಿಯಲ್ಲಿ ಅಕ್ಷರವರಿಯದ ಪುಟಾಣಿಗಳಿಗೆ ಪರಭಾಷೆ ಹೇರಿಕೆ ಯತ್ನ
“ಈ ವಿಡಿಯೋ ನೋಡಿ ಬಹಳ ಅಚ್ಚರಿಯಾಯಿತು. ಆರೋಪಿ ದರ್ಶನ್​ ಸಿಗರೇಟ್​ ಸೇದುತ್ತಿರುವುದು ನೋಡಿದ್ರೆ ಆತನಿಗೆ ತಾನು ತಪ್ಪು ಮಾಡಿದ್ದೀನಿ ಎಂಬ ಅರಿವೇ ಇಲ್ಲದಂತೆ ಭಾಸವಾಗುತ್ತಿದೆ. ಜೈಲು ಜೈಲಾಗಿದ್ದರೆ ಒಳ್ಳೆಯದು. ರೆಸಾರ್ಟ್​ ಆಗುವುದು ಬೇಡ. ಈ  ವ್ಯವಸ್ಥೆ ಸರಿಯಲ್ಲ. ಇದನ್ನೆಲ್ಲಾ ನೋಡಿದ್ರೆ ಕೇಸ್​ನ ಸಿಬಿಐಗೆ ವಹಿಸಿದ್ದರೆ ಚೆನ್ನಾಗಿರುತ್ತಿತ್ತು ಅನಿಸಿದೆ. ರಾಜ್ಯ ಪೊಲೀಸರು ಮತ್ತು ಸರ್ಕಾರದ ಮೇಲೆ ನಂಬಿಕೆ ಇದೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿ” ಎಂದು ರೇಣುಕಸ್ವಾಮಿ ತಂದೆ ಕಾಶೀನಾಥಯ್ಯ ಶಿವನಗೌಡ ಹೇಳಿದ್ದಾರೆ.
ಇವರೇ ನೋಡಿ ಆಲ್ಕೋಹಾಲ್​ ಮುಟ್ಟದ ಟೀಮ್ ಇಂಡಿಯಾದ ಮೂವರು ಸ್ಟಾರ್​ ಕ್ರಿಕೆಟಿಗರು!

ಹಣ್ಣು ಮಾರುತ್ತಿದ್ದವರ ಮಗ ಹುಟ್ಟುಹಾಕಿದ್ದು ಅತೀ ದೊಡ್ಡ ಸಂಸ್ಥೆ! ಹೆಸರು, ಹಣವಿದ್ದರೂ ಕಂಡಿದ್ದು ಮಾತ್ರ ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 10 =
Remember me
