ವಿಜಯಪುರ: ರೇಣುಕ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಿಯಮ ಉಲ್ಲಂಘಿಸಿ ಐಶಾರಾಮಿ ವ್ಯವಸ್ಥೆ ಪಡೆದ ಆರೋಪದ ಮೇರೆಗೆ ಎತ್ತಂಗಡಿಯಾಗಲ್ಪಟ್ಟಿರುವ ದರ್ಶನ್ ಗ್ಯಾಂಗ್‌ನಲ್ಲಿ ಒಬ್ಬನಾದ 10ನೇ ಆರೋಪಿ ವಿನಯ್‌ನನ್ನು ಶನಿವಾರ ದರ್ಗಾ ಜೈಲ್‌ಗೆ ಸೇರಿಸಲಾಯಿತು.
ಇಲ್ಲಿನ ಆದಿಲ್ ಶಾಹಿ ಸುಲ್ತಾನರ ಕಾಲದ ಪುರಾತನ ಸ್ಮಾರಕದಲ್ಲಿರುವ, ದರ್ಗಾ ಜೈಲ್ ಎಂದೇ ಖ್ಯಾತಿ ಪಡೆದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ವಿನಯ್‌ನನ್ನು ಬಂಧಿಸಿಡಲಾಯಿತು. ಕೆಎ-01, ಜಿ-6892 ನಂಬರ್‌ನ ಪೊಲೀಸ್ ವಾಹನದಲ್ಲಿ ಬಿಗಿ ಭದ್ರತೆಯೊಂದಿಗೆ ವಿನಯ್‌ನನ್ನು ಕರೆ ತರಲಾಯಿತು. ಎರಡು ಬ್ಯಾಗ್ ಗಳೊಂದಿಗೆ ಆಗಮಿಸಿದ ಆರೋಪಿ ವಿನಯ್‌ಗೆ 14433 ಕೈದಿ ನಂಬರ್ ನೀಡಿದ ಅಧಿಕಾರಿಗಳು 1 ನಂಬರ್ ಸೆಲ್‌ನಲ್ಲಿ ಆತನನ್ನು ಇರಿಸಿದರು.
ಬೆಂಗಳೂರಿನ ಸ್ಟೋನಿ ಬ್ರೂಕ್ ಹೊಟೇಲ್ ಮಾಲೀಕನಾಗಿರುವ ವಿನಯ್ ದರ್ಶನ ಆಪ್ತರಲ್ಲೊಬ್ಬ. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಈತ 10ನೇ ಆರೋಪಿ. ಕಳೆದ ನಾಲ್ಕೈದು ದಿನಗಳ ಹಿಂದೆ ಪರಪ್ಪನ ಅಗ್ರಹಾರದಲ್ಲಿ ಚೇರ್ ಹಾಕಿಕೊಂಡು, ಸಿಗರೇಟ್ ಸೇದುತ್ತ, ಫಂಟ್ ಹೊಡೆಯುತ್ತಿದ್ದ ಫೋಟೊ ವೈರಲ್ ಆಗಿತ್ತು. ಹೀಗಾಗಿ ಆರೋಪಿಗಳನ್ನು ರಾಜ್ಯದ ವಿವಿಧ ಜೈಲ್‌ಗಳಿಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ವಿನಯ್‌ನನ್ನು ವಿಜಯಪುರ ಜೈಲ್‌ಗೆ ಸೇರ್ಪಡೆಗೊಳಿಸಲಾಯಿತು.
ಸೆಲ್ ನಂಬರ್ ಒನ್‌ನಲ್ಲಿ ಅಟ್ಯಾಚ್ಡ್ ಬಾತ್ ರೂಮ್ ಹಾಗೂ ಫ್ಯಾನ್ ಸೌಲಭ್ಯ ನೀಡಲಾಗಿದ್ದು, ವಾರದಲ್ಲಿ ಒಂದು ಬಾರಿ ಕುಟುಂಬಸ್ಥರು ಮತ್ತು ಅವರ ಪರವಾದ ನ್ಯಾಯವಾದಿಗಳ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಾರಾಗೃಹದ ಅಧೀಕ್ಷಕ ಡಾ.ಐ.ಜೆ. ಮ್ಯಾಗೇರಿ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
