ಚಿತ್ರದುರ್ಗ:ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಗುರುವಾರ ಚಿತ್ರದುರ್ಗದ ಅನು ಅಲಿಯಾಸ್ ಅನುಕುಮಾರ್ ಗುರುವಾರ ಪೊಲೀಸರಿಗೆ ಶರಣವಾಗಿದ್ದ. ಅನುಕುಮಾರ್ ಬಂಧನದ ವಿಚಾರ ತಿಳಿಯುತ್ತಿದ್ದಂತೆ ಅವರ ತಂದೆ ಚಂದ್ರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಬಿಎಸ್​ವೈ, ಪ್ರಜ್ವಲ್​, ದರ್ಶನ್​ ಪ್ರಕರಣಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ!
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಿಹಿನೀರ ಹೊಂಡ ಏರಿಯಾದ ಅನುಕುಮಾರ್​ 7ನೇ ಆರೋಪಿಯಾಗಿದ್ದ. ಪ್ರಕರಣದಲ್ಲಿ ಪುತ್ರ ಅನಿಲ್‌ಕುಮಾರ್ ಆಲಿಯಾಸ್ ಅನು ಹೆಸರು ನೆರೆಹೊರೆಯವರ ಮೂಲಕ ತಿಳಿದ ನಂತರ ದಿಗ್ಭ್ರಾಂತರಾಗಿದ್ದ ಚಂದ್ರಪ್ಪ ಅವರು ದಿಕ್ಕೇ ತೋಚದಂತಾಗಿ, ಕಂಗಾಲಾಗಿದ್ದರು. ತಾಯಿ ಜಯಮ್ಮ ಕೂಡ ಬಿಕ್ಕಿ-ಬಿಕ್ಕಿ ಅತ್ತು ಮಗನಿಗಾಗಿ ಮನೆಯ ಮುಂದೆ ಗೋಳಾಡಿದರು.
ದುಃಖದಲ್ಲಿ ಮುಳುಗಿದ್ದ ಚಂದ್ರಪ್ಪ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ಲೊ-ಬಿಪಿ ಉಂಟಾಗಿದ್ದು, ಸಾರ್ವಜನಿಕರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ, ಮೃತಪಟ್ಟಿದ್ದಾರೆ.
ಒಂದೆಡೆ ಪುತ್ರ ಪೊಲೀಸರ ಅತಿಥಿ, ಇದೇ ವಿಚಾರವಾಗಿ ನೊಂದು ಮೃತಪಟ್ಟ ಪತಿ. ಇದು ಜಯಮ್ಮ ಅವರಿಗೆ, ಅನು ಸಹೋದರ, ಸಹೋದರಿಗೆ ಬರಸಿಡಿಲು ಬಡಿದಂತಾಗಿದೆ. ಈ ಕುಟುಂಬವೀಗ ಶೋಕದಲ್ಲಿ ಮುಳುಗಿದೆ. ಚಂದ್ರಪ್ಪ ತಾಯಿ ರತ್ನಮ್ಮ ಅವರ ಆಕ್ರಂದನ ಕೂಡ ಮುಗಿಲುಮುಟ್ಟಿತ್ತು.
ಪ್ರಯಾಣಿಕರೇ ಗಮನಿಸಿ! ಜೂ.17ರಂದು ಈ ಮಾರ್ಗದಲ್ಲಿ ನಮ್ಮ‌ ಮೆಟ್ರೋ ಸೇವೆ ಇರಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
