ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ ಹಾಗೂ ಅವರ ಸಂಗಡಿಗರು ಜೈಲು ಪಾಲಾಗಿದ್ದು, ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಒಂದಿಲ್ಲೊಂದು ಮತ್ತೊಂದು ವಿಚಾರ ಹೊರಬರುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 13 ಮಂದಿ ಆರೋಪಿಗಳನ್ನು ಪೊಲೀಸ್​ ಕಸ್ಟಡಿಗೆ ನೀಡಿದ್ದು, ಪವಿತ್ರ ಗೌಡ ಅವರ ಪೋಸ್ಟ್​​ಗೆ ಅಶ್ಲೀಲವಾಗಿ ಕಮೆಂಟ್​ ಮಾಡಿ ಮೆಸ್ಸೇಜ್​ ಮಾಡಿದ್ದ ಎಂದು ವರದಿಯಾಗಿದೆ. ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಇವರ ಈ 13 ಮಂದಿಯ ಮೇಲಿದೆ.
ಇತ್ತ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನ ಕಳೆದಂತೆ ರೋಚಕತೆ ಸೃಷ್ಟಿಸುತ್ತಿದ್ದು, ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಮಹತ್ವದ ವಿಚಾರಗಳು ಹೊರಬರುತ್ತಿವೆ. ಇತ್ತ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ 17ಕ್ಕೆ ಏರಿಕೆಯಾಘಿದ್ದು, ಉಳಿದ ನಾಲ್ವರಿಗಾಗಿ ಪೊಲೀಸರ ತೀವ್ರ ಶೋಧ ನಡೆಸುತ್ತಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ರನ್ನು ಪೊಲೀಸರು ಬಂಧಿಸಿದ ಸಂಗತಿ ರೋಚಕವಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.
ಪಟ್ಟಣಗೆರೆಯಲ್ಲಿರುವ ಶೆಡ್​ನಲ್ಲಿ ರೇಣುಕಾಸ್ವಾಮಿಯ ಹತ್ಯೆಯ ನಂತರ ಆರೋಪಿಗಳು ಶವವನ್ನು ಸುಮ್ಮನಹಳ್ಳಿ ಬಳಿ ಇರುವ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು. ರಾಜಕಾಲುವೆಯಲ್ಲಿ ದೊರೆತ ಮೃತನ ಜೇಬಿನಲ್ಲಿದ್ದ ಆಧಾರ್​ ಕಾರ್ಡ್​ ಆಧರಿಸಿ ಪೊಲೀಸರು ತನಿಖೆ ಶುರು ಮಾಡಿದಾಗ ಒಂದೊಂದೇ ವಿಚಾರ ಹೊರಬರಲು ಶುರುವಾಗುತ್ತದೆ. ಅಷ್ಟರಲ್ಲಾಗಲೇ ಆರೋಪಿಗಳಾದ ನಂದೀಶ್​, ಪವನ್​ ಹಾಗೂ ನವೀನ್​ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಯಲ್ಲಿ ಶರಣಾಗುತ್ತಾರೆ. ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪೊಲೀಸರಿಗೆ ಬೇರೆಯದ್ದೆ ಸುಳಿವು ಸಿಕ್ಕಿದೆ.
ಇದನ್ನೂ ಓದಿ:ಅಕ್ರಮ ಗನ್​ ಖರೀದಿ ಕೇಸ್​; ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಪುತ್ರನಿಗೆ ಜೈಲು ಶಿಕ್ಷೆ
ಪೊಲೀಸರು ಶರಣಾದ ಆರೋಪಿಗಳ ಫೋನ್​ ಕಾಲ್​ ಹಿಸ್ಟರಿ ಹಾಗೂ ರೆಕಾರ್ಡಿಂಗ್​ ತೆಗೆದು ನೋಡಿದಾಗ ಈ ಮೂರು ದರ್ಶನ್ ಹಾಗೂ ಇತರೆ ಆರೋಪಿಗಳೊಂದಿಗೆ ಸಂಪರ್ಕದಲ್ಲಿರುವುದು ಬೆಳಕಿಗೆ ಬರುತ್ತದೆ. ಈ ಬಗ್ಗೆ ಪೊಲೀಸರು ಕೇಳಿದಾಗ ಆರೋಪಿಗಳು ಏನನ್ನೂ ಹೇಳದೆ ಇದ್ದಾಗ ತಮ್ಮ ಸ್ಟೈಲ್​ನಲ್ಲಿ ವರ್ಕ್​ ಮಾಡಿ ಬಾಯಿ ಬಿಡಿಸುತ್ತಾರೆ. ಆಗಲೇ ಪೊಲೀಸರ ಟ್ರೀಟ್ಮೆಂಟ್ ತಾಳಲಾರದೆ ಆರೋಪಿ ನಂದೀಶ್ ಬಾಯಿ ಬಿಡುತ್ತಾನೆ. ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಇದ್ದರು ಎಂಬ ಮಾಹಿತಿ ನೀಡುತ್ತಾನೆ. ರೇಣುಕಾಸ್ವಾಮಿಗೆ ಬಾಸ್ ಹೊಡೆದು ಮನೆಗೆ ಹೋಗಿದ್ದರು. ಆಮೇಲೆ ನಾವು ಹೊಡೆಯುವುದಕ್ಕೆ ಶುರು ಮಾಡಿದ್ವಿ. ಆ ವೇಳೆ ಸ್ಥಳದಲ್ಲೇ ರೇಣುಕಾಸ್ವಾಮಿ ಸತ್ತು ಹೋದ ಎಂದು ಆರೋಪಿ ನಂದೀಶ್​ ಪೊಲೀಸರ ಬಳಿ ಹೇಳುತ್ತಾನೆ.
ರೇಣುಕಾಸ್ವಾಮಿ ಸತ್ತು ಹೋದ ಬಳಿಕ ಆರೋಪಿಗಳು ದರ್ಶನ್​ಗೆ ಕರೆ ಮಾಡುತ್ತಾರೆ. ಈ ವೇಳೆ ದರ್ಶನ್​ ಏನಾದರೂ ಮಾಡಿ ಬಾಡಿಯನ್ನು ಮುಚ್ಚಿಗಹಾಕಿ ಎಂದು ಹೇಳಿ ಹಣ ನೀಡುತ್ತಾರಂತೆ. ರಾತ್ರಿಯಾಗಿದ್ದರಿಂದ ಭಯದಲ್ಲಿ ಏನು ಮಾಡಬೇಕು ಅನ್ನೋದು ಗೊತ್ತಾಗದೆ ಶವವನ್ನು ರಾಜಕಾಲುವೆಯಲ್ಲಿ ಎಸೆದು ಎಸ್ಕೇಪ್​ ಆಗಿದ್ದರಂತೆ. ಮೃತದೇಹ ಪತ್ತೆಯಾಗುತ್ತಿದ್ದಂತೆ ಆರೋಪಿಗಳು ಪೊಲೀಸರು ಬಂದು ಶರಣಾಗಿದ್ದಾರೆ. ಮೂವರನ್ನೂ ಇಟ್ಟುಕೊಂಡು ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಂತೆ ಮತ್ತಷ್ಟು ಮಾಹಿತಿ ಹೊರಬರಲು ಶುರುವಾಗಿದೆ.
ಈ ಮೂವರು ಪೊಲೀಸರ ಬಳಿ ಶರಣಾದ ವಿಚಾರ ತಿಳಿದ ದರ್ಶನ್​ ಅಲರ್ಟ್​ ಆಗಿದ್ದರು ಎಂದು ಹೇಳಲಾಗಿದೆ. ಮೊಬೈಲ್ ಸ್ವಿಚ್ ಆಫ್ ಆಗಿತ್ತು.ಮೈಸೂರಿಗೆ ಶಿಫ್ಟ್ ಆಗಿದ್ದರು. ಈ ಸಂದರ್ಭದಲ್ಲಿ ರಾಜಕಾರಣಿಗಳಿಂದ ಒತ್ತಡ ಹೇರಿಸಲು ಶುರು ಮಾಡಿದ್ದಾರೆ ಎಂಬ ಸುದ್ದಿ ಪೊಲೀಸ್​ ತನಿಖೆಯಲ್ಲಿ ಹೊರಬಂದಿದೆ. ಬಳಿಕ ದರ್ಶನ್​ ಜಾಡು ಹಿಡಿದು ಹೊರಟ ಪೊಲೀಸರು ನಟನನ್ನು ಮೈಸೂರಿನ ಜಿಮ್​ ಒಂದರಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಅಧಿಕಾರಿಗಳ ತಂಡ ಆರೋಪಿಗಳ ಸಮೇತ ಶೆಡ್​ಗೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
