ಬೆಂಗಳೂರು:ನಟ ದರ್ಶನ್ ಮತ್ತು ಅವರ ಸಹಚರರಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಸ್ವಾಮಿ ಪೋಷಕರು ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಖುದ್ದಾಗಿ ಭೇಟಿಯಾಗಿದ್ದು, ಮಗನನ್ನು ಕಳೆದುಕೊಂಡ ದುಃಖವನ್ನು ತೋಡಿಕೊಂಡರು. ನಮ್ಮ ಪುತ್ರ ಏನೇ ತಪ್ಪು ಮಾಡಿರಬಹುದು, ಅದಕ್ಕೆ ಇಂತಹ ಶಿಕ್ಷೆ ಕೊಟ್ಟಿದ್ದು ಸರಿಯಲ್ಲ ಎಂದು ರೇಣುಕಸ್ವಾಮಿ ಹೆತ್ತವರು ತಮ್ಮ ಸಿಎಂ ಮುಂದೆ ಕಣ್ಣೀರಿಟ್ಟರು.
ಇದನ್ನೂ ಓದಿ:ಸನಾತನ ಧರ್ಮ ನಿರ್ಮೂಲನೆ ಹೇಳಿಕೆ; ಉದಯನಿಧಿ ಸ್ಟಾಲಿನ್​ಗೆ ಷರತ್ತುಬದ್ಧ ಜಾಮೀನು​
ರೇಣುಕಸ್ವಾಮಿ ಕೆಟ್ಟದಾಗಿ ಸಂದೇಶ ಕಳಿಸಿದ್ದಾನೆ ಎಂದು ಹೇಳಿ, ಬರ್ಬರವಾಗಿ, ಕ್ರೂರವಾಗಿ ಕೊಲೆ ಮಾಡಿದ್ದಾರೆ. ನಮ್ಮ ಮಗ ಏನೇ ತಪ್ಪು ಮಾಡಿರಲಿ, ಅದಕ್ಕೆ ಕರೆದು ಬುದ್ದಿ ಹೇಳಬಹುದಿತ್ತು. ಇಲ್ಲದಿದ್ದರೆ, ಪೊಲೀಸರಿಗೆ ದೂರು ಕೊಟ್ಟು, ಅವರಿಂದಲೇ ಬುದ್ಧಿ ಕಲಿಸಬಹುದಿತ್ತು. ಅದನ್ನು ಬಿಟ್ಟು ಈ ರೀತಿ ಹತ್ಯೆ ಮಾಡಿದ್ದು, ನಮಗೆ ಬಹಳ ನೋವು ತಂದಿದೆ. ಈ ಕೇಸ್​ನಲ್ಲಿ ಪೊಲೀಸರು ತೆಗೆದುಕೊಂಡಿರುವ ಕ್ರಮ, ನಿರ್ಧಾರಗಳು ನಮಗೆ ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.
ಇನ್ನು ಮಗನ ಹೆಂಡತಿ ಮತ್ತು ಆಕೆಯ ಮಗು ನಮ್ಮ ಜವಾಬ್ದಾರಿಯಾಗಿದೆ. ಇದ್ದ ಒಬ್ಬ ಮಗನನ್ನು ನಾವು ಕಳೆದುಕೊಂಡಿದ್ದೇವೆ. ಆಕೆಗೆ ಒಂದು ಸರ್ಕಾರಿ ಕೆಲಸ ಕೊಟ್ಟರೆ, ಬಹಳ ಸಹಾಯವಾಗುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನು ಆಲಿಸಿದ ಸಿಎಂ, ಕೆಲಸ ಕೊಡಿಸುವ ವಿಚಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಭಾರತದ ಹೆಡ್​ ಕೋಚ್​ ಆಗುವುದಾದರೆ… ಗೌತಮ್ ಗಂಭೀರ್​ ಮುಂದಿಟ್ಟ 5 ಬೇಡಿಕೆಗಳಿಗೆ ದಂಗಾದ ಬಿಸಿಸಿಐ

ಟೀಮ್​ ಇಂಡಿಯಾದ 11 ಆಟಗಾರರೂ ಸಹ ಈ ‘ಕಳ್ಳತನ’ದಲ್ಲಿ ಭಾಗಿ! ದೆಹಲಿ ಪೊಲೀಸ್​ ಟ್ವೀಟ್ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
