ಬೆಂಗಳೂರು:ಶಿಕ್ಷಕರು ಸೇವೆಯಿಂದ ವಯೋನಿವೃತ್ತರಾಗುವ ಪ್ರಮಾಣದಷ್ಟೇ ಹೊಸಬರ ನೇಮಕ ವ್ಯವಸ್ಥೆ ಮುಂದಿನ ವರ್ಷಗಳಲ್ಲಿ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ವಿಧಾನಸೌಧ ಬ್ಯಾಂಕ್ವೆಟ್ ಹಾಲ್​ನಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರತಿ ವರ್ಷ ಸೇವೆಯಿಂದ ವಯೋನಿವೃತ್ತರಾಗಲಿರುವ ಶಿಕ್ಷಕರ ಪ್ರಮಾಣವೆಷ್ಟು ಎಂಬ ಮಾಹಿತಿ ಇಲಾಖೆ ಬಳಿ ಲಭ್ಯವಿರುತ್ತದೆ. ಇದನ್ನು ಬಳಸಿಕೊಂಡು ಪೂರ್ವಭಾವಿಯಾಗಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿ, ಶಿಕ್ಷಕರ ನಿವೃತ್ತಿಯಿಂದ ತೆರವಾದ ದಿನವೇ ಹೊಸಬರು ಆ ಸ್ಥಾನಗಳನ್ನು ತುಂಬಲು ಮುಂಬರುವ ವರ್ಷಗಳಲ್ಲಿ ಕ್ರಮಕೈಗೊಳ್ಳಲಿದ್ದೇವೆ. ಆರ್ಥಿಕ ಇಲಾಖೆಗೂ ಸೂಚನೆ ನೀಡಲಾಗುವುದು. ಸದ್ಯಕ್ಕೆ 15,000 ಶಿಕ್ಷಕರ ನೇಮಕ ಅಂತಿಮ ಘಟ್ಟದಲ್ಲಿದೆ. ನಿಯಮಾನುಸಾರ ಉಳಿದ ಪ್ರಕ್ರಿಯೆ ಪೂರ್ಣಗೊಳಿಸಿ ಇಲಾಖೆ ನೇಮಕ ಆದೇಶ ನೀಡಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಶಾಲಾ ಜಾಗ ಸಂರಕ್ಷಣೆ:ಸರ್ಕಾರಿ ಶಾಲೆಗಳ ಜಾಗ ಸಂರಕ್ಷಿಸಲೆಂದು ದಾಖಲೀಕರಣ ನಡೆಸಲಾಗುತ್ತಿದೆ. ಈ ಜಮೀನು ಕಬಳಿಸಿದವರು ಎಷ್ಟೇ ದೊಡ್ಡದವರಾಗಿದ್ದರೂ ತೆರವುಗೊಳಿಸಿ ಕಾನೂನು ರೀತ್ಯ ಕ್ರಮವಹಿಸಲಾಗುವುದು. ಈಗಾಗಲೇ ಮೂರರಿಂದ ನಾಲ್ಕು ಸಾವಿರ ಶಾಲೆಗಳ ದಾಖಲೀಕರಣ ಮುಗಿದಿದೆ. ಏಳು ಸಾವಿರ ಶಾಲೆಗಳ ದಾಖಲೆಗಳ ಕ್ರೋಡೀಕರಣ, ವ್ಯವಸ್ಥಿತಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಮುಂದಿನ ವರ್ಷ ಪೂರ್ಣ:ಎಲ್ಲ ಶಾಲೆಗಳಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶೌಚಗೃಹ ನಿರ್ವಿುಸಲಾಗುವುದೆಂದು ಆ.15ರಂದು ಘೋಷಿಸಿರುವೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದು, ಮುಂದಿನ ಆ.15ರೊಳಗೆ ಪೂರ್ಣ ಪ್ರಮಾಣದಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ ಎಂಬ ಭರವಸೆ ನೀಡಿದರು.
ಶಿಕ್ಷಣ ಕ್ಷೇತ್ರಕ್ಕೆ ಬಜೆಟ್​ನಲ್ಲಿ 25,000 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಪೈಕಿ 19,000 ಕೋಟಿ ರೂ. ಶಿಕ್ಷಕರ ಸಂಬಳ, ಐದು ಸಾವಿರ ಕೋಟಿ ರೂ. ಶಾಲೆಗಳ ಅಭಿವೃದ್ಧಿಗೆ ಹಂಚಿಕೆಯಾಗಿದೆ. ರಾಜ್ಯದಲ್ಲಿ 23,000 ಹೊಸ ಶಾಲಾ ಕೊಠಡಿಗಳ ಅಗತ್ಯವಿದೆ. ಮೊದಲ ಹಂತದಲ್ಲಿ 8,101 ಶಾಲಾ ಕೊಠಡಿಗಳ ನಿರ್ವಣಕ್ಕೆ ತೀರ್ವನಿಸಿರುವುದು ಹೊಸ ದಾಖಲೆಯಾಗಿದೆ ಎಂದರು.
ನಿಯಮಗಳ ಪಾಲನೆ ಕಡ್ಡಾಯ:ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವುದು ಹಾಗೂ ವ್ಯವಸ್ಥಿತ ಶಾಲೆಗಳಿರಬೇಕು ಎಂಬ ಕಾರಣಕ್ಕೆ ಕೇಂದ್ರ, ರಾಜ್ಯ ಸರ್ಕಾರ ರೂಪಿಸಿರುವ ನಿಯಮಗಳನ್ನು ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಗಳು ಪಾಲಿಸುವುದು ಕಡ್ಡಾಯವಾಗಿದೆ. ಪೂರ್ವ ಪರಿಶೀಲನೆಯಿಲ್ಲದೆ ಹೊಸ ಶಾಲೆಗಳನ್ನು ತೆರೆಯಲು ಎನ್​ಒಸಿ ಕೊಟ್ಟಿರುವ ನಿದರ್ಶನಗಳ ಹಿನ್ನೆಲೆಯಲ್ಲಿ ಈ ನಿಯಮಗಳನ್ನು ವಿಧಿಸಲಾಗಿದ್ದರೂ, ಶಿಕ್ಷಕರಿಗೆ ಕಿರುಕುಳ ತಪ್ಪಿಸಲು ಸರಳೀಕರಿಸಲಾಗಿದೆ. ಶಿಕ್ಷಕರ ಸೇವೆಯಲ್ಲಿ ಸುಧಾರಣೆ ಹಾಗೂ ಇಲಾಖೆ ವ್ಯವಸ್ಥೆಯಲ್ಲಿ ಬದಲಾವಣೆಗೂ ಆದ್ಯತೆ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಬದುಕಿಗೆ ಬುನಾದಿ:ಮಕ್ಕಳ ಭವಿಷ್ಯ, ಬದುಕಿಗೆ ಭದ್ರ ಬುನಾದಿ ಹಾಕುವಲ್ಲಿ ಶಿಕ್ಷಕರು ಜೀವಾಳವಾಗಿದ್ದಾರೆ. ಮೇಧಾವಿ ಸರ್ವಪಲ್ಲಿ ರಾಧಾಕೃಷ್ಣನ್, ಶಿಕ್ಷಣ ಕ್ರಾಂತಿ ಮಾಡಿದ ಸಾವಿತ್ರಿಬಾಯಿ ಫುಲೆ ಶ್ರೇಷ್ಠ ಸಾಧಕರು ಮಾತ್ರವಲ್ಲ, ಶಿಕ್ಷಕ ಸಮೂಹದ ಪ್ರೇರಣಾ ಶಕ್ತಿಯಾಗಿದ್ದಾರೆ. ಶಿಕ್ಷಣ ನೀತಿ, ಗುರುಗಳು, ಬೋಧನೆ, ಕರ್ತವ್ಯನಿಷ್ಠೆ ಎಲ್ಲವೂ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಬೋಧನೆ ಜತೆಗೆ ಚಾರಿತ್ರ್ಯ ಕಟ್ಟುವ, ಆತ್ಮಸ್ಥೈರ್ಯ ತುಂಬುವ ಜವಾಬ್ದಾರಿಯನ್ನು ಶಿಕ್ಷಕರು ಸಮರ್ಥವಾಗಿ ನಿಭಾಯಿಸಿದರೆ ವ್ಯಕ್ತಿ ಯಶಸ್ವಿಯಾಗಿ ಸಮಾಜಕ್ಕೂ ಕೊಡುಗೆ ನೀಡುತ್ತಾನೆ ಎಂದು ಬೊಮ್ಮಾಯಿ ಸಲಹೆ ನೀಡಿದರು.
ಪ್ರಶಸ್ತಿ ಪ್ರದಾನ:ಪ್ರಾಥಮಿಕ ಶಾಲಾ ವಿಭಾಗದಲ್ಲಿ 20, ಪ್ರೌಢ ಶಾಲಾ ವಿಭಾಗದಲ್ಲಿ 11 ಶಿಕ್ಷಕರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ, ಇಬ್ಬರಿಗೆ ಉತ್ತಮ ಪ್ರಾಂಶುಪಾಲರು ಹಾಗೂ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಎಂಟು ಜನರಿಗೆ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸ್ವಾಭಿಮಾನಿ ಸಾರ್ವಜನಿಕ ಶಾಲೆ ಪ್ರಶಸ್ತಿ ಈ ವರ್ಷದಿಂದ ಪ್ರಾರಂಭಿಸಲಾಗಿದೆ. ಉತ್ತಮ ಆಡಳಿತ ವ್ಯವಸ್ಥೆ, ಶೈಕ್ಷಣಿಕ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ತಲಾ ನಾಲ್ಕು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗಿದ್ದು, ಈ ಶಾಲೆಗಳಿಗೆ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಡಿ ತಲಾ ಐದು ಲಕ್ಷ ರೂ. ಬಹುಮಾನ ನೀಡಲಾಗಿದೆ. ಬಹುಮಾನ ಮೊತ್ತವನ್ನು ಗ್ರಂಥಾಲಯ, ಕಂಪ್ಯೂಟರ್, ಮಕ್ಕಳ ಸೃಜನಶೀಲತೆ ಹೆಚ್ಚಳ ಇತ್ಯಾದಿ ಶೈಕ್ಷಣಕ ಚಟುವಟಿಕೆಗಳು ಮತ್ತು ಮೂಲ ಸವಲತ್ತು ಅಭಿವೃದ್ಧಿಗೆ ಬಳಸಲು ಸೂಚಿಸಲಾಗಿದೆ.
ದೂರು ಪರಿಹಾರಕ್ಕೆ ಆಯೋಗ:ಇಲಾಖೆ, ಶಿಕ್ಷಣ ವ್ಯವಸ್ಥೆ ಮುಂತಾದವುಗಳ ಬಗ್ಗೆ ದೂರುಗಳನ್ನು ಸ್ವೀಕರಿಸುವ ಜತೆಗೆ ಪರಿಶೀಲಿಸಿ ಇತ್ಯರ್ಥಪಡಿಸಲೆಂದು ಆಯೋಗ ನೇಮಿಸಲಾಗುವುದು. ಲೋಪ-ದೋಷಗಳು ಕಂಡುಬಂದರೆ ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರವನ್ನು ಆಯೋಗಕ್ಕೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಖಾಸಗಿಯವರಿಗೂ ಪುರಸ್ಕಾರಕ್ಕೆ ಚಿಂತನೆ:ಉತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಿರ್ವಹಿಸಲಾಗಿದೆ. ಈ ಪ್ರಶಸ್ತಿಗೆ ಖಾಸಗಿ ಶಾಲೆಗಳ ಶಿಕ್ಷಕರನ್ನು ಸೇರಿಸಬೇಕು ಎನ್ನುವುದು ಸೇರಿ ನೀಡಿರುವ ಹಲವು ಸಲಹೆಗಳನ್ನು ಪರಿಗಣಿಸಲಿದೆ ಎಂದು ನಾಗೇಶ್ ಭರವಸೆ ನೀಡಿದರು.
ನಿದ್ರೆ ಬರುತ್ತಿಲ್ಲ ಎಂದು ಬೇಸತ್ತು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!

62 ವರ್ಷಗಳ ಹಿಂದೆ ಕಳವಾಗಿದ್ದ ನಟರಾಜ ಮೂರ್ತಿ ನ್ಯೂಯಾರ್ಕ್​ನಲ್ಲಿ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
