|ಸತೀಶ್ ಕಂದಗಲ್​ಪುರಬೆಂಗಳೂರು
ರಾಜ್ಯದಲ್ಲಿ ಸುರಿದ ನಿರಂತರ ಮಳೆಗೆ 3.25 ಲಕ್ಷ ಹೆಕ್ಟೇರ್​ಗೂ ಅಧಿಕ ಪ್ರಮಾಣದ ವಿವಿಧ ಬೆಳೆಗಳು ನಷ್ಟವಾಗಿರುವುದಾಗಿ ಕೃಷಿ ಇಲಾಖೆ ಅಂದಾಜಿಸಿದೆ. ಆದರೆ, ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ಬಳಿಕ ನಷ್ಟದ ನೈಜ ಪ್ರಮಾಣ ತಿಳಿಯಲಿದೆ.
ಪ್ರಸಕ್ತ ವರ್ಷ ಮುಂಗಾರು ಅವಧಿಯಲ್ಲಿ 82.67 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಆ.6ರ ಅಂತ್ಯಕ್ಕೆ ಒಟ್ಟು 63.41 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಭತ್ತ, ರಾಗಿ ಸೇರಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯಕ್ಕೂ ಹಿನ್ನಡೆ ಉಂಟಾಗಿದೆ. ಆದರೆ, ಜು.1ರಿಂದ ಆ.10ರವರೆಗೆ ವಾಡಿಕೆಯಂತೆ 553 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕವಾಗಿ 702 ಮಿ.ಮೀ ಮಳೆಯಾಗಿದೆ. ಅಂದರೆ, ವಾಡಿಕೆಗಿಂತ ಶೇ.27 ಮಳೆ ಅತ್ಯಧಿಕವಾಗಿ ಸುರಿದಿದೆ. ಹೀಗಾಗಿ, ಬಿತ್ತನೆ ಮಾಡಲಾಗಿದ್ದ 3.25 ಲಕ್ಷ ಹೆಕ್ಟೇರ್​ಗಿಂತಲೂ ಅಧಿಕ ಪ್ರದೇಶದಲ್ಲಿನ ಬೆಳೆಗಳು ನೀರಿನಲ್ಲಿ ಮುಳುಗಿ ಹಾನಿಗೀಡಾಗಿದೆ. ಕೆಲವು ಪ್ರದೇಶದಲ್ಲಿ ಭಾರಿ ಮಳೆಯಿಂದ ಹಳ್ಳ, ನದಿಗಳು ಉಕ್ಕಿ ಹರಿದು ಜಮೀನಿಗೆ ನೀರು ನುಗ್ಗಿದೆ. ಮತ್ತೊಂದೆಡೆ, ನದಿ ಮತ್ತು ಜಲಾಶಯಗಳ ಪಾತ್ರದಲ್ಲಿರುವ ಕೃಷಿ ಭೂಮಿಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಬೆಳೆಗಳು ನಷ್ಟವಾಗಿರುವುದು ಕಂಡುಬಂದಿದೆ.
ಹೆಸರು, ಉದ್ದು ಅಧಿಕ ನಷ್ಟ:ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಕಡಿಮೆ ದಿನಗಳಲ್ಲಿ ಕೊಯ್ಲಿಗೆ ಬರುವಂತಹ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ. ಹೀಗೆ, ಹೆಸರು, ಉದ್ದು, ಸೋಯಾ ಮತ್ತು ಅವರೆ ಬೆಳೆಗಳು ಹೆಚ್ಚಾಗಿ ಮಳೆಯಿಂದ ನಷ್ಟವಾಗಿವೆ. ಮತ್ತೊಂದೆಡೆ ಅರೆ ನೀರಾವರಿ ಪ್ರದೇಶಗಳಲ್ಲಿ ಮುಸುಕಿನ ಜೋಳ ಕೂಡ ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದೆ. ಇದರಲ್ಲಿ ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆಯಿಂದ ಮಾಹಿತಿ ತಿಳಿದುಬಂದಿದೆ. ಉಳಿದಂತೆ ಕಾಲುವೆ ನೀರಾವರಿ ಪ್ರದೇಶಗಳಲ್ಲಿ ಗದ್ದೆಗಳಿಗೆ ನದಿಯ ನೀರು ನುಗ್ಗಿ (ಪ್ರವಾಹ)ರುವ ಹಿನ್ನೆಲೆಯಲ್ಲಿಯೂ ಭತ್ತ ಮತ್ತಿತರ ಬೆಳೆಗಳು ನಷ್ಟವಾಗಿವೆ.
ಏಳು ಜಿಲ್ಲೆಗಳಲ್ಲಿ ಜಂಟಿ ಸಮೀಕ್ಷೆ ಪೂರ್ಣ:ಕಳೆದೊಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಲೂ ಸಾಧ್ಯವಾಗುತ್ತಿಲ್ಲ. ನದಿ ಪಾತ್ರದ ಗ್ರಾಮಗಳ ಬಹುತೇಕ ಜಮೀನುಗಳಲ್ಲಿ ನೀರು ತುಂಬಿಕೊಂಡಿದ್ದು ಬೆಳೆ ನಷ್ಟದ ಬಗ್ಗೆ ದಾಖಲು ಮಾಡಿಕೊಳ್ಳಲು ಸಮಸ್ಯೆ ಎದುರಾಗಿದೆ. ಇದರ ನಡುವೆ ಮಳೆಯ ಪ್ರಮಾಣದ ತಗ್ಗಿರುವ 7 ಜಿಲ್ಲೆಗಳಲ್ಲಿ (ಬಾಗಲಕೋಟೆ, ಚಿತ್ರದುರ್ಗ, ಧಾರವಾಡ, ಮೈಸೂರು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ) ಕೃಷಿ ಮತ್ತು ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆ ಪೂರ್ಣಗೊಂಡಿದ್ದು, ಇಲ್ಲಿ 1.42 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಷ್ಟದ ಖಚಿತ ಮಾಹಿತಿ ಸಂಗ್ರಹವಾಗಿದೆ.
ಕೃಷಿ ಇಲಾಖೆಯಿಂದ ಜಿಲ್ಲಾವಾರು ಜಂಟಿ ಕೃಷಿ ನಿರ್ದೇಶಕರು ನೀಡಿದ ಮಾಹಿತಿ ಮೇರೆಗೆ ಬೆಳೆಹಾನಿ ಅಂದಾಜಿಸಲಾಗಿದೆ. ಇನ್ನೊಂದು ವಾರದಲ್ಲಿ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಗಳು ನಡೆಸುತ್ತಿರುವ ಬೆಳೆಹಾನಿಯ ಜಂಟಿ ಸಮೀಕ್ಷೆ ಪೂರ್ಣಗೊಳ್ಳಲಿದೆ.
|ಬಿ. ಶರತ್ಕೃಷಿ ಇಲಾಖೆ ಆಯುಕ್ತ
ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಕೃಷಿ ಭೂಮಿಯಿದ್ದು, ಈಗಾಗಲೆ 2 ಬಾರಿ ನಾಟಿ ಮಾಡಿದ ಭತ್ತದ ಬೆಳೆ ನಷ್ಟವಾಗಿದೆ. ಈಗ ಪುನಃ 3ನೇ ಬಾರಿಗೆ ಭತ್ತ ನಾಟಿ ಮಾಡಬೇಕಿದ್ದು, ಹಣವಿಲ್ಲದೆ ಪರದಾಡುವ ಸ್ಥಿತಿ ನಿರ್ವಣವಾಗಿದೆ.
|ಕಕ್ಕೂರ ಬಸವರಾಜಹಡಗಲಿ, ರೈತ
ಹಾಸನ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಸಕಲೇಶಪುರ, ಬೇಲೂರು ಮತ್ತು ಆಲೂರು ತಾಲೂಕುಗಳಲ್ಲಿ ಕೆರೆಕಟ್ಟೆಗಳು ತುಂಬಿ ಹರಿದು ಬೆಳೆ ನಾಶ ಹೆಚ್ಚುತ್ತಿದೆ. ಸಕಲೇಶಪುರ ತಾಲೂಕು ದೋಣಿಗಾಲ್ ಗ್ರಾಮದ ಸಮೀಪ ಅವೈಜ್ಞಾನಿಕವಾಗಿ ಸುರಿದಿದ್ದ 50 ಸಾವಿರಕ್ಕೂ ಅಧಿಕ ಲೋಡ್ ಮಣ್ಣಿನಿಂದಾಗಿ ಮಳೆ ನೀರು ಸಂಗ್ರಹವಾಗಿ ಸೃಷ್ಟಿಯಾಗಿದ್ದ ಕೃತಕ ಕೆರೆ ಬುಧವಾರ ರಾತ್ರಿ ಬಿದ್ದ ಬಾರಿ ಮಳೆ, ಗಾಳಿಯಿಂದಾಗಿ ಒಡೆದು ಅಪಾರ ಹಾನಿಯುಂಟು ಮಾಡಿದೆ. ಮಣ್ಣಿನ ಸಹಿತ ನೀರು ಸುಮಾರು 50 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿದ್ದ ತೋಟ, ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಘಟನಾ ಸ್ಥಳದಿಂದ ಸುಮಾರು ಎರಡು ಕಿ.ಮೀ. ದೂರದ ರೈಲ್ವೆ ಕಂಬಿಯ ಮೇಲೂ ಮಣ್ಣು ಶೇಖರಣೆಗೊಂಡಿತ್ತು. ತಕ್ಷಣವೆ ಎಚ್ಚೆತ್ತ ರೈಲ್ವೆ ಅಧಿಕಾರಿಗಳು ರಾತ್ರೋರಾತ್ರಿ ಮಣ್ಣನ್ನು ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದರಿಂದಾಗಿ ಬುಧವಾರ ರಾತ್ರಿ 10 ಗಂಟೆಗೆ ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ರೈಲು ಸುಮಾರು ಎರಡು ಗಂಟೆ ವಿಳಂಬವಾಗಿ ಹೊರಟಿತು. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ವಣಕ್ಕಾಗಿ ತೆಗೆದಿದ್ದ ಮಣ್ಣನ್ನು ದೋಣಿಗಾಲ್ ಬಳಿ ಸುರಿಯಲಾಗಿತ್ತು. ಬೇಲೂರು ತಾಲೂಕು ಲಕ್ಷ್ಮೀಪುರ ಹಾಗೂ ಎನ್.ನಿಡಗೋಡು ಗ್ರಾಮಗಳ ಭಾಗದಲ್ಲಿರುವ 8ಕ್ಕೂ ಹೆಚ್ಚಿನ ಕೆರೆಕಟ್ಟೆಗಳು ಸಂಪೂರ್ಣ ಭರ್ತಿಯಾಗಿ ನೀರಿನ ಹರಿವು ಹೆಚ್ಚಿ ಲಕ್ಷ್ಮೀಪುರ ಕೆರೆಯ ತಡೆಗೋಡೆ ನೀರಿನಲ್ಲಿ ಕೊಚ್ಚಿ ಹೋದ ಪರಿಣಾಮ ತಗ್ಗು ಪ್ರದೇಶದಲ್ಲಿದ್ದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಭತ್ತದ ಪೈರು ನಾಶವಾಗಿದೆ.
ಮೈಸೂರು: ರಾಜ್ಯದಲ್ಲಿ ಉಂಟಾಗಿರುವ ಮಳೆ ಹಾನಿಗೆ ಸಂಬಂಧಿಸಿದಂತೆ ಈಗಾಗಲೆ ವರದಿ ಪಡೆಯಲಾಗಿದ್ದು, ಅನುದಾನ ಬಿಡುಗಡೆ ಕೋರಿ ಕೇಂದ್ರ ಸರ್ಕಾರಕ್ಕೆ ಎರಡು-ಮೂರು ದಿನಗಳಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮನೆಗಳ ಹಾನಿಗೆ ಸಂಬಂಧಿಸಿದಂತೆ ಈಗಾಗಲೆ ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ರಸ್ತೆ ಮತ್ತು ಸೇತುವೆ ಹಾನಿ ಕುರಿತು ವರದಿ ತರಿಸಿಕೊಂಡು ಅದರನ್ವಯ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆಗೆ 300 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 200 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದರು. ಬೆಳೆ ಹಾನಿಗೆ ಸಂಬಂಧಿಸಿದಂತೆ ಜಂಟಿ ಸರ್ವೆ ಆಗಬೇಕಾಗಿದೆ. ಕಳೆದ ಬಾರಿ 14.50 ಲಕ್ಷ ರೈತರಿಗೆ ಒಂದೂವರೆ ತಿಂಗಳಲ್ಲೇ ಪರಿಹಾರ ನೀಡಲಾಯಿತು. ಅದೇ ರೀತಿ ಈ ವರ್ಷವೂ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಕೊಡಗಿನಲ್ಲಿ ಕ್ಷೀಣಿಸಿದ ಮಳೆ:ಕೊಡಗು ಜಿಲ್ಲೆಯ ವಿವಿಧೆಡೆ ಮಳೆ ಕ್ಷೀಣಿಸಿದ್ದು, ಭಾಗಮಂಡಲ ತ್ರಿವೇಣಿ ಸಂಗಮ ಸೇರಿದಂತೆ ಎಲ್ಲೆಡೆ ಪ್ರವಾಹ ಇಳಿಕೆಯಾಗಿದೆ. ಅಲ್ಲಲ್ಲಿ ಅನಾಹುತ ಸಂಭವಿಸಿರುವ ಪ್ರಕರಣಗಳು ಕಂಡು ಬಂದಿವೆ. ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಬಳಿ ಬಿರುಕು ಬಿಟ್ಟಿದ್ದ ಬೆಟ್ಟದ ಕೆಳಭಾಗದ ಮಣ್ಣು ಕುಸಿತಗೊಂಡಿದ್ದು, ಯಂತ್ರಗಳ ಮೂಲಕ ಮಣ್ಣು ತೆರವು ಕಾರ್ಯ ನಡೆಯಿತು. ಗುಡ್ಡದಲ್ಲಿ ಕಳೆದ 2 ದಿನಗಳ ಹಿಂದೆ ಬಿರುಕು ಕಾಣಿಸಿಕೊಂಡಿದ್ದರಿಂದ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಲಾಗಿತ್ತು.
ಬೆಳಗಾವಿ:ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಜಿಲ್ಲೆಯ ಕೆಲ ಭಾಗಗಳಲ್ಲಿ ನಿರಂತರ ಮಳೆ ಮುಂದುವರಿದ ಪರಿಣಾಮ ನದಿಗಳ ನೀರಿನ ಮಟ್ಟ ಹೆಚ್ಚುತ್ತ ಸಾಗಿದೆ. ಧಾರಾಕಾರ ಮಳೆಗೆ ಬೆಳಗಾವಿ-ಚೋರ್ಲಾ ಹೆದ್ದಾರಿ ಮೇಲೆ ಗುರುವಾರ ಬೃಹತ್ ಮರಗಳು ಉರುಳಿ ಬಿದ್ದು 6 ಗಂಟೆಗಳ ಕಾಲ ಕರ್ನಾಟಕ-ಗೋವಾ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಜಿಲ್ಲೆಯ 22 ಸೇತುವೆಗಳು ಮುಳುಗಿದ ಸ್ಥಿತಿಯಲ್ಲಿವೆ. ಈವರೆಗೆ 245 ಮನೆ ಕುಸಿದಿವೆ. ಖಾನಾಪುರ ತಾಲೂಕಿನ ಹೆಮ್ಮಡಗಾ ರಸ್ತೆಯ ಮೇಲೆ ಹಾಲಾದ್ರಿ ಹಳ್ಳದ ನೀರು ಹರಿದು ಸಂಚಾರ ಬಂದ್ ಆಗಿದೆ. ಗುಂಡೇನಟ್ಟಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ, ಬೀಡಿ ಗ್ರಾಮದಲ್ಲಿ ಮನೆಯೊಂದು ಕುಸಿದಿದೆ. ವೇದಗಂಗಾ, ದೂಧಗಂಗಾ ನದಿಯಿಂದ 29,568 ಕ್ಯೂಸೆಕ್, ರಾಜಾಪುರ ಬ್ಯಾರೇಜ್​ನಿಂದ 1,20,375 ಕ್ಯೂಸೆಕ್ ಸೇರಿ ಕೃಷ್ಣಾ ನದಿಗೆ ಒಟ್ಟು 1,49, 943 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಪರೇಶ ಮೇಸ್ತ ಕೊಲೆ ಆರೋಪಿಗೇ ವಕ್ಫ್​ ಬೋರ್ಡ್​ ಉಪಾಧ್ಯಕ್ಷ ಸ್ಥಾನ!; ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ..

ತಂದೆಯ ಕಣ್ಣೆದುರೇ ವಾಹನದಡಿಗೆ ಸಿಲುಕಿ ಸಾವಿಗೀಡಾದ ಹತ್ತು ವರ್ಷದ ಪುತ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + six =
Remember me
