| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಮಳೆ, ಮಂಜು ಕವಿದ ವಾತಾವರಣ ಹಾಗೂ ಆಲಿಕಲ್ಲು ಮಳೆಯಲ್ಲಿ ವಾಹನ ಸಂಚಾರ ಹೆಚ್ಚು ಅಪಾಯಕಾರಿ. ಬೆಳಕಿನ ಸಮಯ ವಾಹನ ಚಾಲನೆಗೆ ಹೆಚ್ಚು ಅನುಕೂಲ ಎನ್ನುತ್ತಾರೆ. ಆದರೆ, ರಸ್ತೆ ಅಪಘಾತಗಳು ಬೆಳಕಿನ ವೇಳೆಯೇ ಹೆಚ್ಚು ಸಂಭವಿಸಿರುವ ಆತಂಕಕಾರಿ ವಿಚಾರ ರಾಜ್ಯ ಅಪರಾಧ ದಾಖಲಾತಿ ವಿಭಾಗ ಬಿಡುಗಡೆ ಮಾಡಿರುವ ವರದಿಯಲ್ಲಿ ಬಹಿರಂಗವಾಗಿದೆ.
ಒಟ್ಟಾರೆ ರಸ್ತೆ ಅಪಘಾತಗಳನ್ನು ವಿಂಗಡಿಸಿ ನೋಡಿದಾಗ ಬೆಳಗಿನ ಹೊತ್ತಲ್ಲೇ ಶೇ.87.94 ಆಕ್ಸಿಡೆಂಟ್ ಸಂಭವಿಸುತ್ತಿದ್ದು, ಶೇ.88.71 ಮಂದಿ ಅಸುನೀಗುತ್ತಿದ್ದಾರೆ. 2019ರ ಸಾಲಿನಲಿ ್ಲ0,658 ರಸ್ತೆ ಅಪಘಾತ ಸಂಭವಿಸಿವೆ. ಇದರಲ್ಲಿ 10,958 ಮಂದಿ ಸಾವನ್ನಪ್ಪಿದ್ದಾರೆ. ಇದರ ಪೈಕಿ ಬೆಳಕಿನ ವೇಳೆ 35,753 ಅಪಘಾತ ಜರುಗಿ 9,721 ಮಂದಿ ಮೃತಪಟ್ಟಿದ್ದಾರೆ. ಅಂದರೇ ಶುದ್ಧ ವಾತಾವರಣ, ಬೆಳಕಿನ ಸಮಯದಲ್ಲಿ ವಾಹನ ಚಾಲಕರು ಅತೀ ವೇಗ, ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದರಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಮಳೆಯ ಸಮಯದಲ್ಲಿ ಕೇವಲ ಶೇ.7.82 ಅಪಘಾತಗಳು ಮಾತ್ರ ಸಂಭವಿಸುತ್ತಿವೆ. ಕಳೆದ ವರ್ಷ 3,181 ಅಪಘಾತಗಳು ಸಂಭವಿಸಿದ್ದು, 852 ಮಂದಿ ಮೃತಪಟ್ಟಿದ್ದಾರೆ. ಅದೇ ರೀತಿ ಮಂಜು ಮತ್ತು ಇಬ್ಬನಿ ಆವರಿಸಿದಾಗಲೂ ಅಪಘಾತಗಳು ಕಡಿಮೆ.
1654 ಆಕ್ಸಿಡೆಂಟ್ ಸಂಭವಿಸಿದ್ದು, 383 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರಲ್ಲಿಯೂ ಆಲಿಕಲ್ಲು ಸುರಿದಾಗ ಕೇವಲ 70 ಅಪಘಾತಗಳು ವರದಿ ಆಗಿದ್ದು, ಇಬ್ಬರು ಮೃತಪಟ್ಟಿರುವುದಾಗಿ ಎಸ್​ಸಿಆರ್​ಬಿಯಲ್ಲಿ ವಿಶ್ಲೇಷಣೆ ಮಾಡಲಾಗಿದೆ.
ಮಳೆ ಬಂದಾಗ ಮಂಜು ಕವಿದಾಗ, ಇಬ್ಬನಿ ಮತ್ತು ಆಲಿಕಲ್ಲು ಬೀಳುತ್ತಿದ್ದಾಗ ಚಾಲಕ/ಸವಾರರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುತ್ತಾರೆ. ಜತೆಗೆ ಈ ವಾತಾವರಣದಲ್ಲಿ ವಾಹನ ಸಂಚಾರವೂ ಗಣನೀಯವಾಗಿ ಇಳಿಮುಖವಾಗಿರುತ್ತದೆ. ಹಾಗಾಗಿ ರಸ್ತೆ ಅಪಘಾತಗಳು ಕಡಿಮೆ. ಬೆಳಕಿನ ವೇಳೆ ಹೆಚ್ಚಿನ ವಾಹನಗಳು ರಸ್ತೆಗೆ ಇಳಿಯುತ್ತವೆ. ವಾಹನ ಚಾಲಕ/ಸವಾರರು ಸಹ ಬೆಳಕಿನ ಸಮಯದಲ್ಲಿ ಅತಿ ವೇಗವಾಗಿ ವಾಹನ ಚಾಲನೆಗೆ ಮುಂದಾಗಿ ಅಪಾಯಕ್ಕೆ ತುತ್ತಾಗುತ್ತಿದ್ದಾರೆ ಎಂಬುದು ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯ.
ಚಾಲಕರೇ ಮುಖ್ಯ ಕಾರಣ:ರಸ್ತೆ ಅಪಘಾತಕ್ಕೆ ವಾಹನ ಚಾಲಕ/ಸವಾರರೇ ಮುಖ್ಯ ಕಾರಣವೆಂದು ಮತ್ತೊಂದು ಅಂಶವನ್ನು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ನೇರ ರಸ್ತೆಯಲ್ಲೇ ಹೆಚ್ಚು(33,070) ಅಪಘಾತಗಳು ಸಂಭವಿಸಿದ್ದು, 6,023 ಮಂದಿ ಪ್ರಾಣಬಿಟ್ಟಿದ್ದಾರೆ. ರಸ್ತೆ ತಿರುವು ಇರುವ ಕಡೆಗಳಲ್ಲಿ 5,573 ಅಪಘಾತಗಳು ಜರುಗಿವೆ. ಮೇಲ್ಸೆತುವೆಯಲ್ಲಿ 1,259 ಅಪಘಾತ ಮತ್ತು ರಸ್ತೆ ಗುಂಡಿಯಲ್ಲಿ ಕೇವಲ ಶೇ.0.28(113) ರಸ್ತೆ ಅಪಘಾತ ಸಂಭವಿಸಿ 38 ಮಂದಿ ಅಸುನೀಗಿದ್ದಾರೆ.
ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಶೇ.1.05 (426) ಆಕ್ಸಿಡೆಂಟ್ ಸಂಭವಿಸಿದ್ದು, 144 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯೂ ಚಾಲಕ/ಸವಾರರೇ ರಸ್ತೆ ಚೆನ್ನಾಗಿದೆ ಎಂಬ ಕಾರಣಕ್ಕೆ ನೇರ ರಸ್ತೆಯಲ್ಲಿ ಅತೀ ವೇಗವಾಗಿ ವಾಹನ ಚಾಲನೆ ಮಾಡಿದಾಗ ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾಗುತ್ತಾರೆ.
ಮೊಬೈಲ್ ಬಳಕೆ ಇಳಿಕೆ, ವೇಗ ಹೆಚ್ಚು
ಮೊಬೈಲ್ ಬಳಕೆಯಿಂದಾಗಿ ರಸ್ತೆ ಅಪಘಾತಗಳ ಪ್ರಮಾಣ ಇಳಿಕೆವಾಗಿದೆ. 2018ರಲ್ಲಿ 173 ಕೇಸುಗಳು ದಾಖಲಾಗಿ 44 ಮೃತಪಟ್ಟಿದ್ದರು. 2019ಕ್ಕೆ 31 ಅಪಘಾತ ಜರುಗಿ ಇಬ್ಬರು ಅಸುನೀಗಿದ್ದಾರೆ. ಇನ್ನೂ ಅತೀ ವೇಗದ ಚಾಲನೆಯಿಂದ ಹೆಚ್ಚು ಆಕ್ಸಿಡೆಂಟ್ ಸಂಭವಿಸುತ್ತಿವೆ. 2019ರಲ್ಲಿ 33,012 ಆಕ್ಸಿಡೆಂಟ್​ನಲ್ಲಿ 9140 ಮಂದಿ ಪ್ರಾಣ ಬಿಟ್ಟಿದ್ದಾರೆ. ಕುಡಿದು ವಾಹನ ಚಾಲನೆಯಿಂದ 132 ಅಪಘಾತದಲ್ಲಿ 37 ಮಂದಿ ಹಾಗೂ ವಿರುದ್ಧ ದಿಕ್ಕಿನ ಚಾಲನೆಯಿಂದ 1131 ಅಪಘಾತ ಜರುಗಿದ್ದು, 248 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯೂ ಸಂಚಾರ ನಿಯಮ ಉಲ್ಲಂಘನೆ ಮತ್ತು ನಿಗದಿಗಿಂತ ಹೆಚ್ಚು ವೇಗದಲ್ಲಿ ವಾಹನ ಚಾಲನೆಯಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nine =
Remember me
