ಬೆಂಗಳೂರು:ಲಾಲ್​ಬಾಗ್​ನಲ್ಲಿ ಶುಕ್ರವಾರ (ಜ.17) ದಿಂದ 26ರವರೆಗೆ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಸ್ಮರಣಾರ್ಥ ‘ವಿವೇಕ ಪುಷ್ಪ ಪ್ರದರ್ಶನ-2020’ ಆಯೋಜಿಸುವ ಮೂಲಕ ವಿವೇಕಾನಂದರಿಗೆ ಪುಷ್ಪನಮನ ಸಲ್ಲಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಾ. ಬಿ. ವೆಂಕಟೇಶ್ ಮಂಗಳವಾರ ಮಾಹಿತಿ ನೀಡಿದರು.
ಮೈಸೂರು ಉದ್ಯಾನಕಲಾ ಸಂಘ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ 210 ಫಲಪುಷ್ಪ ಪ್ರದರ್ಶನಗಳನ್ನು ನಡೆಸಿದೆ. ಈ ಬಾರಿ ಆರು ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದೆ. ಈ ಸಾಲಿನಲ್ಲಿ ಸ್ವಾಮಿ ವಿವೇಕಾನಂದರ ವಿಷಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹೂವಿನ ಕಲಾಕೃತಿಗಳ ಮೂಲಕ ವಿವೇಕಾನಂದರ ಸಾಧನೆ ಹಾಗೂ ಕೊಡುಗೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಹೂವುಗಳಿಂದಲೇ ವಿವೇಕಾನಂದರ 16 ಅಡಿ ಎತ್ತರದ ಪ್ರತಿಮೆ,
ಷಿಕಾಗೋ ವಿವೇಕಾನಂದ ಸ್ಮಾರಕ, ಕನ್ಯಾಕುಮಾರಿ ವಿವೇಕಾನಂದ ಸ್ಮಾರಕ ಸೇರಿ ವಿವಿಧ ಪ್ರತಿಕೃತಿ ನಿರ್ವಿುಸಲಾಗುತ್ತಿದ್ದು, ವಿವೇಕಾನಂದ ಕುರಿತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ವಿದೇಶಗಳಿಂದ ಹೂ ಆಮದು:ಜ.17ರ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರದರ್ಶನದ ಉದ್ಘಾಟನೆ ಮಾಡಲಿದ್ದಾರೆ. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ, ಸಚಿವ ವಿ. ಸೋಮಣ್ಣ ಸೇರಿ ಹಲವರು ಗಣ್ಯರು ಭಾಗವಹಿಸಲಿದ್ದಾರೆ. 98ಕ್ಕೂ ಹೆಚ್ಚು ಬಗೆಯ ಹೂವುಗಳನ್ನು ಬಳಸಲಾಗುತ್ತಿದ್ದು, 10 ದೇಶಗಳಿಂದ ಹೂವುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆ ವಿವೇಕಾನಂದ ಪ್ರತಿಮೆ ಕಣ್ತುಂಬಿಕೊಳ್ಳಬಹುದು ಎಂದು ವೆಂಕಟೇಶ್ ವಿವರಿಸಿದರು.
ಕನ್ಯಾಕುಮಾರಿ ಸ್ವಾಮಿ ವಿವೇಕಾನಂದ ಸ್ಮಾರಕದ ಪುಷ್ಪ ಮಾದರಿ ಗಾಜಿನ ಮನೆಯ ಒಳಭಾಗದಲ್ಲಿ ಸ್ವಾಮಿ ವಿವೇಕಾನಂದರು ದೇಶಾದ್ಯಂತ ಪ್ರವಾಸ ಮಾಡುವ ವೇಳೆ ಕನ್ಯಾಕುಮಾರಿಗೆ ಬಂದಾಗ ಭೇಟಿ ಕೊಟ್ಟ ದೇವಾಲಯ, ಕಡಲ ತುದಿಯಲ್ಲಿ ನಿಂತಿರುವುದು, ಅಲ್ಲಿರುವ ವಿವೇಕಾನಂದ ಶಿಲೆಯ ಮಾದರಿಯನ್ನು 1.6 ಲಕ್ಷ ಹೂವು ಬಳಸಿ ನಿರ್ವಿುಸಲಾಗುತ್ತಿದೆ. 16 ಅಡಿಯ ಪ್ರತಿಮೆ ಹಾಗೂ 21 ಅಡಿ ಉದ್ದ, 17 ಅಡಿ ಎತ್ತರ, 8 ಅಡಿ ಅಗಲದ ದೇವಾಲಯದ ಮಾದರಿ ಇರಲಿದೆ.75 ಸಾವಿರ ಕೆಂಪು, ಬಿಳಿ, ಹಳದಿ ಗುಲಾಬಿ ಹೂವುಗಳು, 75 ಸಾವಿರ ಸೇವಂತಿಗೆ, 3 ಸಾವಿರ ವಿವಿಧ ಜಾತಿಯ ಎಲೆಗಳು, 2 ಸಾವಿರ ವಿಶೇಷ ಹೂ ಗಳನ್ನು ಬಳಸಿ ಕಾಲಕೃತಿ ನಿರ್ವಿುಸಲಾಗುತ್ತಿದೆ ಎಂದು ವೆಂಕಟೇಶ್ ತಿಳಿಸಿದರು.
ಟಿಕೆಟ್ ದರ
ವಯಸ್ಕರಿಗೆ 70 ರೂ. ಹಾಗೂ ಮಕ್ಕಳಿಗೆ 20 ರೂ. ನಿಗದಿಪಡಿಸಲಾಗಿದೆ. ಉದ್ಯಾನದ ಎಲ್ಲ ಪ್ರವೇಶ ದ್ವಾರಗಳಲ್ಲಿ ಟಿಕೆಟ್ ಲಭ್ಯವಿರಲಿವೆ. ಬೆಳಗ್ಗೆ 9 ರಿಂದ 6.30ರ ವರೆಗೆ ಮಾತ್ರ ಟಿಕೆಟ್ ನೀಡಲಾಗುವುದು. ಸಾರ್ವಜನಿಕರ ಹಿತದೃಷ್ಟಿಯಿಂದ ಒಂದು ಅಗ್ನಿ ಶಾಮಕ ದಳ, ಕ್ಲೋಕ್ ರೂಂ, ಪ್ಯಾರಾ ಮೆಡಿಕಲ್​ಫೋರ್ಸ್ ಒಳಗೊಂಡ 5 ಆಂಬುಲೆನ್ಸ್, 108 ಸಿಸಿಕ್ಯಾಮರಾ 37 ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಷಿಕಾಗೊ ಸ್ಮಾರಕ, ದೇವಾಲಯ
ಬೇಲೂರು ಮಠದಲ್ಲಿರುವ ವಿವೇಕಾನಂದ ದೇವಾಲಯದ ಮಾದರಿಯನ್ನು 6 ಅಡಿ ಉದ್ದ 3 ಅಡಿ ಅಗಲದಲ್ಲಿ ನಿರ್ವಿುಸಲಾಗುತ್ತಿದೆ. ಅಮೆರಿಕದ ಷಿಕಾಗೊ ನಗರದಲ್ಲಿರುವ ಉದ್ಯಾನದ ಸ್ಮಾರಕ ಮಾದರಿಯಲ್ಲಿಯೇ ಹೂವಿನ ಮಂಟಪವನ್ನು ನಿರ್ವಿುಸಲಾಗುತ್ತಿದೆ.
ಆರು ಲಕ್ಷ ಹೂಗಳ ಬಳಕೆ
10 ದಿನ ಪ್ರದರ್ಶನ ನಡೆಯಲಿದ್ದು, ಆಕರ್ಷಣೆ ಕಾಯ್ದುಕೊಳ್ಳಲು ಎರಡು ಬಾರಿ ಹೂಗಳನ್ನು ಬದಲಾವಣೆ ಮಾಡಬೇಕಾಗುತ್ತದೆ. ಒಟ್ಟಾರೆ 1.6 ಕೋಟಿ ರೂ. ವೆಚ್ಚದಲ್ಲಿ ಪ್ರದರ್ಶನಕ್ಕೆ 6ಲಕ್ಷ ಹೂವು ಬಳಕೆ ಮಾಡಲಾಗುತ್ತದೆ. ಗಾಜಿನ ಮನೆ ಬಲಭಾಗದಲ್ಲಿ 1313 ಅಡಿ ವಿಸ್ತೀರ್ಣ, 11 ಅಡಿ ಎತ್ತರದ ಉದ್ಯಾನವನ್ನು 43 ಸಾವಿರ ವಿವಿಧ ಸಸಿ ಹಾಗೂ ವಿವಿಧ ಬಗೆಯ ಹೂವುಗಳಿಂದ ನಿರ್ವಿುಸಲಾಗುತ್ತಿದೆ. ಗಾಜಿನ ಮನೆ ಹಿಂಭಾಗ ಆಕರ್ಷಕ ಹೂ ಜೋಡಣೆಯಲ್ಲಿ ರಾಮಕೃಷ್ಣ ಪರಮಹಂಸರು, ಶಾರದ ದೇವಿ, ಸ್ವಾಮಿ ವಿವೇಕಾನಂದರ ಪ್ರತಿಮೆ ಇರಲಿದೆ. ಗಾಜಿನ ಮನೆ ಸುತ್ತ ಹೂವಿನ ಪಿರಮಿಡ್, ಸ್ವಾಮಿ ವಿವೇಕಾನಂದರ ಉಬ್ಬು ಶಿಲ್ಪ ಕಣ್ತುಂಬಿಕೊಳ್ಳಬಹುದು. ಗಾಜಿನ ಮನೆ ಹೊರಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಪುಷ್ಪ ಪ್ರದರ್ಶನ, ತೂಗು ಹೂವುಗಳು ಹಾಗೂ ಕಾರಂಜಿಗಳು, ಉದ್ಯಾನ ಪರಿಕಲ್ಪನೆ, ಹೂವಿನ ಜಲಪಾತ, ನವಿಲು, ಹೃದಯಾಕಾರದ ಕಮಾನುಗಳ ಪ್ರದರ್ಶನ ನೋಡಬಹುದು ಎಂದು ಲಾಲ್​ಬಾಗ್ ಸಸ್ಯತೋಟ ಉಪ ನಿರ್ದೇಶಕ ಎಂ.ಆರ್. ಚಂದ್ರಶೇಖರ್ ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
