| ಡಾ.ರಾಮಲಿಂಗಪ್ಪ ಟಿ. ಬೇಗೂರು
ಉನ್ನತ ಶಿಕ್ಷಣ ಸಚಿವರೆ,
ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸುವ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಪದವಿಗಳ ಪಠ್ಯಕ್ರಮ ಚೌಕಟ್ಟು ರೂಪಿಸಲು ರಾಜ್ಯ ಸರ್ಕಾರ ವಿಷಯವಾರು ಸಮಿತಿಗಳನ್ನು ನೇಮಿಸಿದೆಯಾದರೂ, ಹಲವು ಅಗತ್ಯ ವಿಷಯಗಳ ಕಡೆಗೆ ಗಮನ ಹರಿಸಬೇಕಿದೆ. ವಿಷಯವಾರು ಸಮಿತಿಗಳಲ್ಲಿ ಬರಿ ವಿಸಿಗಳು, ವಿಶ್ವವಿದ್ಯಾಲಯ ಅಧ್ಯಾಪಕರೇ ತುಂಬಿದ್ದಾರೆ! ಪದವಿ ಚೌಕಟ್ಟು ರೂಪಿಸುವಾಗ ಪದವಿ ಉಪನ್ಯಾಸಕರ ಅನಿಸಿಕೆ ಪಡೆಯಬೇಕು. ಹಾಗೆಯೇ ಭಾಷಾತಜ್ಞರಿಗೂ ಅವಕಾಶ ಮಾಡಿಕೊಡಬೇಕು. ತಿಮ್ಮೇಗೌಡರ ಅಧ್ಯಕ್ಷತೆಯ ಉಪಸಮಿತಿ ಸಲ್ಲಿಸಿರುವ ಪ್ರಸ್ತಾವಿತ ಪಠ್ಯಕ್ರಮ ಚೌಕಟ್ಟಿನಲ್ಲಿ ಆನರ್ಸ್ ಪದವಿ ಮತ್ತು ಬಿಎಡ್ ಪದವಿ ಎರಡೂ ಕಡೆ ಭಾಷಾ ಕಲಿಕೆಯನ್ನು ಒಂದು ವರ್ಷಕ್ಕೆ ಸೀಮಿತ ಮಾಡಿರುವುದನ್ನು ‘ಹೊಸ’ ವಿಷಯವಾರು ಸಮಿತಿಯವರು ಪಠ್ಯಕ್ರಮ ರೂಪಿಸುವಾಗ ಅನುಸರಿಸಬಾರದು. ಈಗ ನೇಮಿಸಿರುವ ತಜ್ಞರ ಸಮಿತಿಯಲ್ಲಿ ಭಾಷೆ ಮತ್ತು ಭಾಷಾಶಾಸ್ತ್ರವನ್ನು ಏತಕ್ಕೆ ಫ್ಯಾಕಲ್ಟಿ ಆಫ್ ಆರ್ಟ್್ಸ ಮಾನವಿಕಗಳ ಅಡಿಯಲ್ಲಿ ಇರಿಸಿದ್ದೀರಿ? ಫ್ಯಾಕಲ್ಟಿ ಆಫ್ ಲ್ಯಾಂಗ್ವೇಜ್ ಅಂಡ್ ಲಿಟರೇಚರ್ ಎಂದು ಪ್ರತ್ಯೇಕ ಫ್ಯಾಕಲ್ಟಿಯಾಗಿ ಅದನ್ನು ಗುರುತಿಸಬೇಕಲ್ಲವೆ? ಅಲ್ಲಿ ಭಾಷೆ, ಭಾಷಾಶಾಸ್ತ್ರ, ಸಾಹಿತ್ಯ ಅಧ್ಯಯನ, ಶಾಸನಶಾಸ್ತ್ರ, ಹಸ್ತಪ್ರತಿಶಾಸ್ತ್ರ, ಸಂಪಾದನಾಶಾಸ್ತ್ರ, ತೌಲನಿಕ ಅಧ್ಯಯನ, ಅನುವಾದ ಅಧ್ಯಯನ, ಕನ್ನಡ ಸಂಶೋಧನೆ, ಶಾಸ್ತ್ರೀಯ ಭಾಷಾಕಾಯ ಇತ್ಯಾದಿಗಳನ್ನೆಲ್ಲ ಗುರುತಿಸಬಹುದಲ್ಲವೆ?
ಕಾಲೇಜುಗಳಲ್ಲಿ ಕನ್ನಡ ಕಲಿಕೆ ಎನ್ನುವುದು ಕನ್ನಡ ಮೇಷ್ಟ್ರುಗಳ ಅನ್ನದ ದಾರಿ ಮಾತ್ರ ಅಲ್ಲ; ಮಿದುಳಿನಲ್ಲಿ ಯಾವುದೇ ಜ್ಞಾನದ ಗ್ರಹಿಕೆ ಮತ್ತು ಅಭಿವ್ಯಕ್ತಿ ರೂಪುಗೊಳ್ಳುವುದೇ ಭಾಷೆಯ ಮೂಲಕ. ಪಿಯರೆ ಬ್ರೋಕಾ, ವರ್ನಿಕೆ, ಸ್ಕಿನ್ನರ್, ಬಂಡುರ, ವೈಗಾಸ್ಟಿ್ಕ, ನೋಮ್ ಚಾಮ್ಸಿ್ಕ ಹೀಗೆ ಜಗತ್ತಿನ ಶರೀರಶಾಸ್ತ್ರ, ನರರೋಗಶಾಸ್ತ್ರ, ಭೌತವಿಜ್ಞಾನ, ಮನೋವಿಜ್ಞಾನ, ಮಾನವಶಾಸ್ತ್ರ, ಭಾಷಾಶಾಸ್ತ್ರ ಹೀಗೆ ಹಲವು ಜ್ಞಾನಶಾಖೆಗಳ ತಜ್ಞರು ಭಾಷೆಯ ಮೂಲಕ ಅರಿವು ರೂಪುಗೊಳ್ಳುವಲ್ಲಿ ಮಿದುಳಿನ ಪಾತ್ರದ ಕುರಿತು ಅಧ್ಯಯನ ನಡೆಸಿದ್ದಾರೆ. ಭಾಷೆಯೇ ಮಾನವನ ಅರಿವಿನ ಮೂಲಸಾಮಗ್ರಿ ಎಂದು ಖಚಿತವಾಗಿ ಹೇಳಿದ್ದಾರೆ. ಹಾಗಾಗಿ ಎಲ್ಲ ಕಡೆಯೂ ಭಾಷಾ ಪ್ರಯೋಗಾಲಯ ಅಗತ್ಯ ಮತ್ತು ಆಯಾಯ ಶಿಸ್ತುಗಳಲ್ಲಿ ಭಾಷೆಯ ಪಾತ್ರ ಕುರಿತು ಅಧ್ಯಯನ ನಡೆಯಬೇಕಿದೆ. ಹಾಗಾಗಿ ಭಾಷೆಗೂ ಪ್ರಾಯೋಗಿಕ ತರಗತಿಗಳನ್ನು ಕಡ್ಡಾಯವಾಗಿ ಅಳವಡಿಸಿ.
ಪ್ರತಿಯೊಂದು ಜ್ಞಾನಶಾಖೆಗೂ ಅದರದೇ ಆದ ಭಾಷೆ ಮತ್ತು ಪರಿಭಾಷೆ ಇದ್ದೇ ಇರುತ್ತದೆ. ಹಾಗಾಗಿ, ವಾಣಿಜ್ಯ ಕನ್ನಡ, ಗಣಕ ಕನ್ನಡ, ವೈದ್ಯಕೀಯ ಕನ್ನಡ, ನಿರ್ವಹಣಾ ಕನ್ನಡ, ಕಾನೂನು ಕನ್ನಡ, ವಿಜ್ಞಾನ ಕನ್ನಡ ಹೀಗೆ ಆಯಾಯ ಭಾಷೆಗಳನ್ನು ರೂಪಿಸಿಕೊಳ್ಳುವುದು, ಕಲಿಯುವುದು ಅತ್ಯಗತ್ಯ.
ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ನ್ಯಾಯಶಾಸ್ತ್ರ, ಗಣಕವಿಜ್ಞಾನ ಇತ್ಯಾದಿ ಜ್ಞಾನಶಾಖೆಗಳು ಕನ್ನಡ ಭಾಷೆಯಲ್ಲಿ ನಿರ್ವಣಗೊಂಡಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಎಲ್ಲ ಕಡೆಯೂ ಕನ್ನಡವನ್ನು ಬಳಸಬೇಕಾಗಿದೆ. ಇದು ಕನ್ನಡದ ಅಳಿವು-ಉಳಿವಿನ ಪ್ರಶ್ನೆ, ಕನ್ನಡದಲ್ಲಿ ಜ್ಞಾನವನ್ನು ಸೃಷ್ಟಿಸುವ ಪ್ರಶ್ನೆ. ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಇದನ್ನೆಲ್ಲ ಸಾಧಿಸುವುದು ಸಾಧ್ಯವಿಲ್ಲ. ಬಿಎಡ್ ಕಲಿಕೆಯಲ್ಲಿ ಭಾಷಾ ಕಲಿಕೆಯನ್ನು ‘ಲ್ಯಾಂಗ್ವೇಜ್ ಆಂಡ್ ಕಮ್ಯುನಿಕೇಶನ್’ ಎಂದು ಕರೆಯಲಾಗಿದೆ. ಅದರ ಜೊತೆಗೆ ‘ಲ್ಯಾಂಗ್ವೇಜ್ ಆಂಡ್ ಕಾಗ್ನಿಶನ್’ (ಗ್ರಹಿಕೆ) ಎಂದೂ ಸೇರಬೇಕಾದುದು ಅಗತ್ಯ. ಏಕೆಂದರೆ ಲೋಕದ ಎಲ್ಲ ಗ್ರಹಿಕೆಗಳು ಉಂಟಾಗುವುದು ಭಾಷೆ ಮೂಲಕವೇ. ಹಾಗೆ ಭಾಷೆಯ ಮೂಲಕ ಗ್ರಹಿಕೆಗಳು ಉಂಟಾಗುವ ಪ್ರಕ್ರಿಯೆಯನ್ನು ಶಿಕ್ಷಕರ ತರಬೇತಿಯಲ್ಲಿ ಕಲಿಸುವುದು ಅತ್ಯಗತ್ಯವಲ್ಲವೆ?
ಶಿಕ್ಷಣಕ್ಷೇತ್ರದಲ್ಲಿ ಯಾವುದೇ ಹೊಸ ನೀತಿಯನ್ನು ಅಳವಡಿಸಿದರೆ ಅದರ ಫಲಿತ, ಪರಿಣಾಮಗಳನ್ನು ನಿರಂತರ ಅಧ್ಯಯನ ಮಾಡಬೇಕಲ್ಲವೆ? ಹಾಗೆ ಅಧ್ಯಯನ ಮಾಡಿ ಅದರ ಸಾಧಕ-ಬಾಧಕಗಳನ್ನು ಅಭ್ಯಸಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ಬದಲಾವಣೆಗಳನ್ನು ಅಳವಡಿಸ ಬೇಕು. ಇಂತಹ ಒಂದು ಘಟಕ ಸ್ಥಾಪನೆಗೆ ಕ್ರಮಕೈಗೊಳ್ಳುವುದು ಅಗತ್ಯ.
(ಲೇಖಕರು ಶಿಕ್ಷಣ ತಜ್ಞರು)
ಕೋವಿಡ್​ನಿಂದಾದ ಸಾವುಗಳ ಪೈಕಿ 3ನೇ ಸ್ಥಾನದಲ್ಲಿ ಭಾರತ; ಇದುವರೆಗೆ ಸತ್ತವರ ಸಂಖ್ಯೆ 4 ಲಕ್ಷಕ್ಕೂ ಅಧಿಕ!

ಗರ್ಭಿಣಿಯರು ಕರೊನಾ ಲಸಿಕೆ ತೆಗೆದುಕೊಳ್ಳಬಹುದೇ?; ಕೇಂದ್ರ ಸರ್ಕಾರದ ಸ್ಪಷ್ಟನೆ ಹೀಗಿದೆ…

ವಾರದೊಳಗೇ ಅರ್ಧಕ್ಕರ್ಧ ಕಡಿಮೆ ಆಯ್ತು ರಾಜ್ಯದಲ್ಲಿನ ಕರೊನಾ ಸಕ್ರಿಯ ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
