ಬೆಂಗಳೂರು:ಕರ್ನಾಟಕಕ್ಕೆ ತುರ್ತಾಗಿ ಡ್ರಗ್ ಸೆನ್ಸಿಟಿವ್ ಟಿಬಿ (ಡಿಎಸ್‌ಟಿಬಿ) ಔಷಧಗಳ ಸರಬರಾಜು ಮಾಡುವಂತೆ ಕೋರಿ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಲೋಕಸಭಾ ಚುನಾವಣೆ ಸಂಬಂಧ ಮಾದರಿ ನೀತಿಸಂಹಿತೆ ಜಾರಿಗೆ ಬಂದ ನಂತರ ಕೇಂದ್ರವು ಮುಂದಿನ ಮೂರು ತಿಂಗಳಿಗೆ ಅಗತ್ಯವಾದ ಔಷಧಗಳನ್ನು ಸ್ಥಳೀಯವಾಗಿ ಖರೀದಿಸುವಂತೆ ಸೂಚಿಸಿದೆ. ಆದರೆ, ಸದ್ಯ ಅಗತ್ಯವಿರುವ ಪ್ರಮಾಣದಲ್ಲಿ ಔಷಧಗಳನ್ನು ಖರೀದಿಸಲು ರಾಜ್ಯಕ್ಕೆ ಕಷ್ಟಕರ ಎಂದು ಸಚಿವರು ತಿಳಿಸಿದ್ದಾರೆ.
ಈ ಕುರಿತು ಕೇಂದ್ರ ಅರೋಗ್ಯ ಸಚಿವ ಮನ್ಸುಖ್ ಮಾಂಡವಿಯಾಗೆ ಪತ್ರ ಬರೆದಿರುವ ಸಚಿವ ದಿನೇಶ್ ಗುಂಡೂರಾವ್, 2021ರಿಂದಲೂ ಕರ್ನಾಟಕಕ್ಕೆ ಟಿ.ಬಿ. ವಿರೋಧಿ ಔಷಧಗಳ ಪೂರೈಕೆಯಲ್ಲಿ ಆಗಾಗ್ಗೆ ಇಂತಹ ಅಡಚಣೆ ಆಗುತ್ತಲೇ ಇದೆ. ಇದು ಸಾವಿರಾರು ಕ್ಷಯರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೆ ಇತ್ತೀಚೆಗೆ ಮುಂದಿನ 3 ತಿಂಗಳಿಗೆ ಔಷಧಗಳನ್ನು ಸ್ಥಳೀಯವಾಗಿ ಖರೀದಿಸುವಂತೆ ರಾಜ್ಯಕ್ಕೆ ಎರಡು ಬಾರಿ ಕೇಂದ್ರದಿಂದ ಸೂಚನೆ ಬಂದಿದೆ. ಮಾದರಿ ನೀತಿಸಂಹಿತೆ ಜಾರಿಗೆ ನಂತರ ಎರಡನೇ ಬಾರಿ ಈ ರೀತಿ ಸೂಚಿಸಲಾಗಿದೆ ಎಂದು ಸಚಿವರು ಪತ್ರದಲ್ಲಿ ವಿವರಿಸಿದ್ದಾರೆ.
ಕರ್ನಾಟಕವು ತಿಂಗಳಿಗೆ 6,800 ರೋಗಿಗಳಂತೆ ವಾರ್ಷಿಕ 80 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿದೆ. ಹಾಗಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಟಿ.ಬಿ. ವಿರೋಧಿ ಔಷಧಗಳನ್ನು ಖರೀದಿಸಲು ರಾಜ್ಯವು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಈ ಔಷಧಗಳನ್ನು ಖರೀದಿಸಲು 2024-2025ರ ಅನುಮೋದಿತ ಪ್ರಕ್ರಿಯೆಗಳ ದಾಖಲೆಯನ್ನು ಬಳಸಿಕೊಳ್ಳಲು ಅನುಮತಿ ಕುರಿತು ಕೇಂದ್ರ ಜಂಟಿ ಕಾರ್ಯದರ್ಶಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರಿಂದ ಪತ್ರವನ್ನು ಕಳುಹಿಸಲಾಗಿದೆ. ಇದಲ್ಲದೆ ಆರೋಗ್ಯ ಇಲಾಖೆಯು ರಾಜ್ಯ ಸರ್ಕಾರಕ್ಕೂ ಕೋರಿಕೆ ಸಲ್ಲಿಸಿದ್ದು, ಔಷಧಗಳ ಖರೀದಿಗೆ ಹಣಕಾಸು ಇಲಾಖೆ ಹೆಚ್ಚುವರಿ ಹಣ ನೀಡಲಿದೆ ಎಂ ದು ಸಚಿವರು ಹೇಳಿದ್ದಾರೆ.
ದೂರಲು ಬಯಸುವುದಿಲ್ಲ:ರಾಜ್ಯಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ಲಭ್ಯವಿಲ್ಲ ಹಾಗೂ ಅದರ ಉತ್ಪಾದನಾ ಪ್ರಕ್ರಿಯೆಯಲ್ಲಿನ ಸಮಸ್ಯೆಯಿಂದ ಖರೀದಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದಿಲ್ಲ. ಹಾಗೆಂದು ಕೇಂದ್ರ ಸರ್ಕಾರದ ಈ ಕ್ರಮವನ್ನು ದೂರಲು ಬಯಸುವುದಿಲ್ಲ. ಕೇಂದ್ರದ ಈ ಕ್ರಮದಿಂದ ಕ್ಷಯ ರೋಗಿಗಳಿಗೆ ರಾಜ್ಯದಿಂದಲೂ ತೊಡಕಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರವು ತಕ್ಷಣವೇ ಪ್ರತಿಕ್ರಿಯಿಸಬೇಕು. ಟಿ.ಬಿ. ರೋಗಿಗಳಿಗೆ ಅಗತ್ಯವಿರುವ ಮಟ್ಟದಲ್ಲಿ ನಿರ್ಣಾಯಕ ಔಷಧಗಳ ಪೂರೈಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − one =
Remember me
