ಬೆಂಗಳೂರು:ಸಬ್​ಇನ್​ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿ ಫಲಿತಾಂಶ ಪ್ರಕಟಿಸುವಂತೆ ಅಭ್ಯರ್ಥಿಗಳು ರಕ್ತದಲ್ಲಿ ಗೃಹ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಫಲಿತಾಂಶ ಪ್ರಕಟ ಮಾಡಿ ಇಲ್ಲ ದಯಮರಣ ನೀಡಿ. ರೈತ, ಬಡಮಕ್ಕಳಿಗೆ ಅನ್ಯಾಯ ಮಾಡಬೇಡಿ ಎಂದು ಅಳಲು ತೋಡಿಕೊಂಡಿದ್ದಾರೆ. ಮತ್ತೊಂದೆಡೆ 402 ಎಸ್​ಐ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ಬರೆಯಲು ಸಿದ್ದತೆ ನಡೆಸಿರುವ ಅಭ್ಯರ್ಥಿಗಳಲ್ಲೂ ಆತಂಕ ಮೂಡಿದೆ. ಎಸ್​ಐ ನೇಮಕಾತಿ ಬಯಸಿರುವ ಕೆಲ ಅಭ್ಯರ್ಥಿಗಳು ಮದುವೆ, ಖಾಸಗಿ ನೌಕರಿ ಮುಂದೂಡಿ ಕಾಯುತ್ತಿದ್ದಾರೆ. ಹೆತ್ತವರು ತಮ್ಮ ಮಕ್ಕಳು ಖಾಕಿ ಧರಿಸುವುದನ್ನು ಕಣ್ಣಾರೆ ನೋಡಬೇಕೆಂಬ ಕನಸು ಕಟ್ಟಿಕೊಂಡಿ ದ್ದಾರೆ. ಆದರೆ, ರಾಜ್ಯ ಸರ್ಕಾರ ನೇಮಕಾತಿಗೆ ಅರ್ಜಿ ಕರೆದು 3 ವರ್ಷ ತುಂಬಿ ಮರುಪರೀಕ್ಷೆ ಮುಗಿದು 4-5 ತಿಂಗಳೇ ಕಳೆದಿದೆ. ಆದರೆ ಕಲ್ಯಾಣ ಕರ್ನಾಟಕ ಮೀಸಲಾತಿ ಸ್ಪಷ್ಟತೆ ಕಂಡುಕೊಳ್ಳುವಲ್ಲಿ ವಿಫಲವಾಗಿ ಆಯ್ಕೆಪಟ್ಟಿ ಪ್ರಕಟಿಸಲು ವಿಳಂಬ ಮಾಡುತ್ತಿದೆ.
ಇದನ್ನೂ ಓದಿ:ಇದು ಹೀಗೆ ಮುಂದುವರಿದ್ರೆ… ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​ಗೆ ಶುರುವಾಯ್ತು ಎಚ್ಚರಿಕೆ ಗಂಟೆ
ಎಸ್​ಐ ನೇಮಕಾತಿಗೆ 2020ರಲ್ಲಿ ಅರ್ಜಿ ಕರೆದು ಕೊನೆಗೆ ಹಗರಣದಲ್ಲಿ ಸಿಲುಕಿ ಹೈಕೋರ್ಟ್ ತೀರ್ಪಿನಂತೆ ಜನವರಿಯಲ್ಲಿ ಮರು ಪರೀಕ್ಷೆ ನಡೆಸಿದೆ. ಇನ್ನೇನು ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಬೇಕೆಂದುಕೋಳ್ಳುವಷ್ಟರಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿ ಕುರಿತು 2023ರ ಫೆ.1ರಂದು ಹೊರಡಿಸಿರುವ ಸುತ್ತೋಲೆಯಿಂದ ಗೊಂದಲ ಉಂಟಾಗಿ ಆಯ್ಕೆ ಪಟ್ಟಿ ಪ್ರಕಟಿಸಲು ಗೃಹ ಇಲಾಖೆ ತಿಣುಕಾಡುತ್ತಿದೆ. 545 ಮತ್ತು 402 ಎಸ್​ಐ ನೇಮಕಾತಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿದರೂ ಒಮ್ಮೆಯೇ ದೇಹದಾರ್ಢ್ಯ ಪರೀಕ್ಷೆ ನಡೆಸಿ ಅರ್ಹತ ಪ್ರಮಾಣ ಪತ್ರ ನೀಡಲಾಗಿದೆ. ಆದರಿಂದ 545 ಎಸ್​ಐ ನೇಮಕಾತಿ ಪೂರ್ಣವಾದ ಮೇಲೆಯೇ 402 ಪ್ರಕಟಿಸಬೇಕಾಗಿದೆ. ಮಾರ್ಚ್​ನಲ್ಲಿ ಆಯ್ಕೆ ಪಟ್ಟಿ ಬಿಡುಗಡೆಯಾಗಬೇಕಿತ್ತು. ಆದರೆ ವಿಳಂಬ ಆಗಿದ್ದಕ್ಕೆ ರೋಸಿ ಹೋಗಿರುವ ಅಭ್ಯರ್ಥಿಗಳು, ರಕ್ತದಲ್ಲಿ ಪತ್ರ ಬರೆಯುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರದ ಮುಂದಿರುವ ಸವಾಲು ಏನು: ಪ್ರಾದೇಶಿಕವಾಗಿ ಹಿಂದುಳಿದ ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬೀದರ್, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ಭಾರತದ ಸಂವಿಧಾನಕ್ಕೆ 2012ರಲ್ಲಿ 98ನೇ ತಿದ್ದುಪಡಿ ಮಾಡಿ 371(ಜೆ) ವಿಧಿಯನ್ನು ಸೇರ್ಪಡೆ ಮಾಡಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಸಾರ್ವಜನಿಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ, ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚನೆ ಹಾಗೂ ವೃತ್ತಿಪರ ತರಬೇತಿ ವಿಷಯದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಿದೆ. ಮಾತ್ರವಲ್ಲದೆ, ಹೇಗೆ ಅನುಷ್ಠಾನ ಮಾಡಬೇಕು ಎನ್ನುವ ಬಗ್ಗೆ ಮೂಲ ಕಾಯ್ದೆ ಮತ್ತು ನಿಯಮಗಳನ್ನು ರೂಪಿಸಲಾಗಿದೆ. 2023ರ ಫೆ.1ರಂದು ಸರ್ಕಾರ ಹೊರಡಿಸಿರುವ ಸುತ್ತೋಲೆ ಗೊಂದಲ ಮೂಡಿಸಿದೆ. ನೇಮಕಾತಿ ಮತ್ತು ಬಡ್ತಿಗಳಲ್ಲಿ 371(ಜೆ) ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೀಡಿರುವ ವಿಶೇಷ ಸ್ಥಾನಮಾನದ ಮೂಲ ಕಾಯ್ದೆ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಇತರೆ ಜಿಲ್ಲೆಗಳ ಜನಪ್ರತಿನಿಧಿಗಳ ಕೂಗು ಕೇಳಿಬಂದಿದೆ. ಮತ್ತೊಂದೆಡೆ 371(ಜೆ) ಮೀಸಲಾತಿ ವಿರೋಧಿಸಿದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಮುನ್ನೆಲೆಗೆ ಬರುತ್ತದೆ ಎಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೂಗುಗಳು ಕೇಳಿ ಬರುತ್ತಿವೆ. ಇದರಿಂದ ರಾಜ್ಯ ಸರ್ಕಾರ ಅಡಕತ್ತರಿನಲ್ಲಿ ಸಿಲುಕೊಂಡಂತೆ ಆಗಿದೆ.
ಇದನ್ನೂ ಓದಿ:ಮಳೆ ನಿರಂತರ ಪ್ರವಾಹದ ಅವಾಂತರ: ಕೆಲವೆಡೆ ಭೂಕುಸಿತ, ಸಂಪರ್ಕ ಬಂದ್
ಹೈಕೋರ್ಟ್ ಆದೇಶದಂತೆ ನಿರ್ಧಾರ
2023ರ ಫೆ.1ರಂದು ಸರ್ಕಾರ ಹೊರಡಿಸಿದ ಸುತ್ತೋಲೆ ವಿವಾದಕ್ಕೆ ಕಾರಣವಾಗಿದೆ. ಅರ್ಜಿ ಸಲ್ಲಿಕೆ ವೇಳೆ ಸ್ಥಳೀಯ ಅಭ್ಯರ್ಥಿಗಳ ಆಯ್ಕೆ ಪರಿಗಣಿಸದೆ ಮೆರಿಟ್ ಪಟ್ಟಿ ಆಧಾರದ ಮೇಲೆ ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಪರಿಗಣಿಸಿ ಆಯ್ಕೆ ಪಟ್ಟಿ ಪ್ರಕಟಿಸಬೇಕೆಂದು ಸೂಚಿಸಲಾಗಿದೆ. ಈ ಪ್ರಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ‘ಸಹಾಯಕ ಪ್ರಾಧ್ಯಾಪಕರ’ ನೇಮ ಕಾತಿ ಪೂರ್ವಾನ್ವಯ ಮಾಡಿ ಆಯ್ಕೆಪಟ್ಟಿ ಪ್ರಕಟಿಸಿದೆ.ಇದನ್ನು ಪ್ರಶ್ನಿಸಿದ್ದ ಅಭ್ಯರ್ಥಿಯ ಅರ್ಜಿ ವಿಚಾರಣೆ ಕರ್ನಾಟಕ ಆಡಳಿತ ನ್ಯಾಯಮಂಡಳಿ 2023ರ ಸುತ್ತೋಲೆ ರಾಜ್ಯಪಾಲರ ಆದೇಶ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧ ವಾಗಿದೆ. ಒಂದೇ ಪದನಾಮದ ಹುದ್ದೆಗೆ ಎರಡೆರಡು ಅವಕಾಶ ಕಲ್ಪಿಸಿ ಕೊಟ್ಟಂತೆ ಆಗುತ್ತದೆ ಎಂದು ಸುತ್ತೋಲೆಯನ್ನು ರದ್ಧುಪಡಿ ಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ತೀರ್ಪಿಗಾಗಿ ಕಾಯುತ್ತಿದೆ. ಎಸ್​ಐ ನೇಮಕಾತಿ ಆಯ್ಕೆಪಟ್ಟಿ ಪ್ರಕಟ ಮಾಡಿದರೆ ಎಲ್ಲ ನೇಮಕಾತಿಗೂ ಅನ್ವಯ ಆಗುವ ಉದ್ದೇಶಕ್ಕೆ ವಿಳಂಬ ನೀತಿ ಅನುಸರಿಸುತ್ತಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + 15 =
Remember me
