ಶಿವಮೊಗ್ಗ:ಸಂಸದ ಡಿ.ಕೆ.ಸುರೇಶ್ ಅವರನ್ನು ಗುಂಡಿಟ್ಟು ಕೊಲ್ಲಿ ಎಂದು ನಾನು ಹೇಳಿಲ್ಲ. ದೇಶ ವಿಭಜನೆ ಮಾಡುವ ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ತರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ‌ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿದ ಅವರು, ಸಂಸದ ಸುರೇಶ್ ಅವರ ದೇಶ ವಿಭಜನೆ ಹೇಳಿಕೆಯನ್ನು ಖಂಡಿಸುತ್ತೇನೆ. ತೆರಿಗೆ ಕೇಳುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ತೆರಿಗೆ ನೆಪದಲ್ಲಿ ದೇಶ ವಿಭಜನೆ ಮಾಡುವುದಕ್ಕೆ ವಿರೋಧವಿದೆ ಎಂದರು.
ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯೇ ಸುಳ್ಳು ಎಂದು ಕೇಂದ್ರದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ತೆರಿಗೆ ಹಂಚಿಕೆ ವಿಚಾರದಲ್ಲಿ ಸಿಎಂ ಶ್ವೇತ ಪತ್ರ ಹೊರಡಿಸಬೇಕು. ಪದೆ ಪದೇ ಕೇಂದ್ರದಿಂದ ತೆರಿಗೆ ಹಂಚಿಕೆ ಸರಿಯಾಗಿ ಆಗಿಲ್ಲವೆಂದು ಆರೋಪ ಮಾಡುವುದು ಸರಿಯಲ್ಲ. ಶ್ವೇತಪತ್ರ ಹೊರಡಿಸಿದ್ದೇ ಆದಲ್ಲಿ ಸಿದ್ದರಾಮಯ್ಯ ಅವರ ನಿಜಬಣ್ಣ ಬಹಿರಂಗಗೊಳ್ಳಲಿದೆ ಎಂದರು.
ಗ್ಯಾರಂಟಿಗಳಿಂದ ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ನಾನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಂತೆ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿಲ್ಲ. ನನ್ನ ಮೇಲಿದ್ದ ಎಲ್ಲ ಪ್ರಕರಣಗಳಲ್ಲೂ ಕ್ಲೀನ್ ಚೀಟ್ ಸಿಕ್ಕಿದೆ. ಇದೀಗ ಮತ್ತೊಂದು ಎಫ್ ಐಆರ್ ದಾಖಲಿಸಿದ್ದಾರೆ. ಇದರಲ್ಲೂ ಕ್ಲೀನ್ ಚೀಟ್ ಸಿಗಲಿದೆ. ಒಂದಲ್ಲ ನೂರು ಎಫ್ ಐಆರ್ ದಾಖಲಿಸಿದರೂ ಹೆದರುವುದಿಲ್ಲ ಎಂದು ಹೇಳಿದರು.
ಕುಡಿದ ಮತ್ತಿನಲ್ಲಿ ಮಾತ್ರ ಚೆನ್ನಾಗಿ​​ ಇಂಗ್ಲಿಷ್​ ಮಾತಾಡ್ತೀರಾ? ಸಂಶೋಧನೆಯಲ್ಲಿ ತಿಳಿದು ಬಂತು ಅಚ್ಚರಿಯ ಸತ್ಯ

ಇಂಗ್ಲೆಂಡ್​ ವಿರುದ್ಧದ ಉಳಿದ 3 ಟೆಸ್ಟ್​ ಪಂದ್ಯಗಳಿಗೂ​ ಕೊಹ್ಲಿ ಅಲಭ್ಯ: ಬಿಸಿಸಿಐ ಕೊಟ್ಟ ಕಾರಣ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
