
ಜನರ ಒಲವು ಬಿಜೆಪಿ ಮೇಲೆ ಹೆಚ್ಚಾಗಿದೆ. ನಾನು ಎಲ್ಲೆಲ್ಲಿ ಹೋಗಿದ್ದೇನೋ ಅಲ್ಲೆಲ್ಲ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಹೋಗಿದ್ದೆ. ಮೈಸೂರು, ಮಂಡ್ಯ ಹೋಗಿದ್ದೆ. ಹಾಸನ, ಬೆಂಗಳೂರು.. ಎಲ್ಲ ಕಡೆಗಳಲ್ಲಿ ಬಿಜೆಪಿ ಬಗ್ಗೆ ಒಳ್ಳೆಯ ಅಭಿಪ್ರಾಯ ಜನರಲ್ಲಿದೆ. ಪ್ರತಿಯೊಂದು ಕಡೆ ನಾನು ಬಿಜೆಪಿಯ ಭರ್ಜರಿ ಅಲೆ ಕಂಡಿದ್ದೇನೆ. ಮೋದಿಗೆ ಭಾರಿ ಜನಬೆಂಬಲ ಇರುವುದನ್ನು ಗಮನಿಸಿದ್ದೇನೆ. ಎಲ್ಲ ಜನರೂ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬಯಸುತ್ತಿದ್ದಾರೆ. ಪೂರ್ಣ ಬಹುಮತ ಪಡೆದು ನಾವು ಗೆಲುವು ಸಾಧಿಸುತ್ತೇವೆ. ಮ್ಯಾಜಿಕ್ ನಂಬರ್‌ಗಿಂತ 15 ಸ್ಥಾನ ಹೆಚ್ಚು ಗೆಲ್ಲುತ್ತೇವೆ. ಈ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ.
ಯಾವತ್ತೂ ಸುಳ್ಳಾಗಿಲ್ಲ ಅಂತೇನಿಲ್ಲ. ಆದರೆ, ಹೆಚ್ಚು ಬಾರಿ ಲೆಕ್ಕಾಚಾರ ಸರಿಯಾಗಿದೆ.
ಅದರ ಪರಿಣಾಮ ಯಾವಾಗ ಆಗಲಿದೆ ಎಂದರೆ, ಆರೋಪಿಸುತ್ತಿ ರುವವರು ಹಿಂದೆ ಅಧಿಕಾರದಲ್ಲಿದ್ದಾಗ ಸರಿಯಾಗಿ ನಿರ್ವಹಣೆ ಮಾಡಿದ್ದರೆ ಮಾತ್ರ. ಅವರಿಗಿಂತ ನಾವು ಪರಿಣಾಮಕಾರಿಯಾಗಿ ನಿರ್ವಹಿಸಿದ್ದೇವೆ.ಕರ್ನಾಟಕದ ಜನತೆ ಅದನ್ನೆಲ್ಲ ಗಮನಿಸಬೇಕು ಮತ್ತು ಯೋಚಿಸಿ ಮತ ನೀಡಬೇಕು.
ಚುನಾವಣೆ ದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿಲ್ಲ. ಹಾಗಂತ ಚುನಾವಣೆ ಮೇಲೆ ಅದರ ಪರಿಣಾಮ ತಳ್ಳಿ ಹಾಕುವಂತಿಲ್ಲ. ಆದರೆ ನಮ್ಮ ಉದ್ದೇಶ ಅದಲ್ಲ. ಇಲ್ಲಿ ಬಹಳ ವರ್ಷದಿಂದ ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಡಲಾಗಿತ್ತು. ದೇಶದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಬಾರದು ಎನ್ನುವುದು ಬಿಜೆಪಿಯ ನಿಲುವು. ನಮ್ಮ ಸಂವಿಧಾನ ಕೂಡ ಧರ್ವಧಾರಿತ ಮೀಸಲಾತಿ ಒಪ್ಪುವುದಿಲ್ಲ. ಹಾಗಾಗಿ ಅದನ್ನ ರದ್ದು ಮಾಡಲಾಯಿತು. ಆ ವೇಳೆ ಮರುವಿಂಗಡಣೆ ಮಾಡಲಾಯಿತು. ಅದರಲ್ಲಿ ಉಳಿದಿದ್ದನ್ನೇ ಹಂಚಿಕೆ ಮಾಡಲಾಗಿದೆ.
ಕಾಂಗ್ರೆಸ್​ನವರಿಗೂ ಗೊತ್ತಿದೆ ಶೇ.75ರಷ್ಟು ಮೀಸಲಾತಿ ಕೊಡಲು ಬರುವುದಿಲ್ಲ ಎಂದು. ಆದರೂ ಸುಳ್ಳು ಭರವಸೆ ನೀಡುತ್ತಾರೆ. ಜನರಿಗೂ ಅವರ ಬಗ್ಗೆ ಗೊತ್ತಾಗಿದೆ.
ನೋಡಿ, ಯಾವುದೇ ಆರೋಪಕ್ಕೆ ಖಚಿತ ದಾಖಲೆಗಳು ಇದ್ದರೆ ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ. ಉದಾಹರಣೆಗೆ 2ಜಿ, ಅದಕ್ಕೆ ಖಚಿತ ದಾಖಲೆಗಳಿದ್ದವು. ಬೊಫೋರ್ಸ್ ಹಾಗೂ ನೆಹರು ಕಾಲದಲ್ಲಿ ಜಿಕ್ಕೋ ಹಗರಣಕ್ಕೆ ದಾಖಲೆಗಳು ಇದ್ದವು. ಶೇ.40 ಕಮಿಷನ್ ಆರೋಪದ ಯಾವುದೇ ಪ್ರಕರಣ ಯಾವುದೇ ಕೋರ್ಟ್​ನಲ್ಲೂ ಬಾಕಿ ಇಲ್ಲ.
ಲಿಂಗಾಯತರಿಗೆ ಸಹಜವಾಗಿ ಇಂಥ ಹೇಳಿಕೆ ಸರಿ ಅನ್ನಿಸುವುದಿಲ್ಲ. ಸಿದ್ದರಾಮಯ್ಯ ಅಂದಾಕ್ಷಣ ಜನ ನಂಬುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಏಕೆಂದರೆ ಭ್ರಷ್ಟಾಚಾರ ವಿಚಾರದಲ್ಲಿ ಅವರ ನಿರ್ಧಾರಗಳು ಶೋಚನೀಯವಾಗಿವೆ.
ಖರ್ಗೆಯವರನ್ನು ಬಿಡಿ. ಮೊದಲು ಸೋನಿಯಾ ಗಾಂಧಿ ಕೀಳಾಗಿ ಮಾತನಾಡಿದರು. ಬಳಿಕ ಪ್ರಿಯಾಂಕಾ, ರಾಹುಲ್ ಗಾಂಧಿ ನಿಂದಿಸಿದರು. ಆದರೆ ಕಾಂಗ್ರೆಸ್ ನಾಯಕರು ನಿಂದನೆ ಮಾಡಿದಾಗೆಲ್ಲ ಮೋದಿ ಮತ್ತಷ್ಟು ಪ್ರಬಲರಾಗಿ ಹೊರಹೊಮ್ಮಿದ್ದಾರೆ. ಕರ್ನಾಟಕದ ಜನತೆ ಮತದಾನದ ಮೂಲಕ ಅದಕ್ಕೆಲ್ಲ ಉತ್ತರ ನೀಡುತ್ತಾರೆ.
ನನಗೆ ಆಕ್ರೋಶವೇನಿಲ್ಲ. ರಾಜ್ಯದ ಜನ ತೀರ್ಮಾನ ಮಾಡಬೇಕಿದೆ. ಆ ಎರಡೂ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಶೆಟ್ಟರ್ ಗೆದ್ದಿದ್ದಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಚುನಾವಣೆಯಲ್ಲಿ ಸೋತಿದ್ದ ಸವದಿ ಅವರನ್ನು ಎಂಎಲ್​ಸಿಯಾಗಿಸಿ ಉಪಮುಖ್ಯಮಂತ್ರಿ ಮಾಡಿದ್ದೆವು. ಇದನ್ನೆಲ್ಲ ನೋಡಿ ಜನ ವೋಟ್ ಹಾಕುತ್ತಾರೆ.
ಲಿಂಗಾಯತರು ಭ್ರಷ್ಟರು ಅಂತ ಬಹುಶಃ ಇದೇ ಕಾರಣಕ್ಕೆ ಸಿದ್ದರಾಮಯ್ಯ ಹೇಳಿರಬಹುದು.
ನಮ್ಮ ಸರ್ಕಾರ 2014ರಿಂದಲೂ ಆಡಳಿತ ನಡೆಸುತ್ತಿದೆ. ಪಿಎಫ್​ಐ ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಬಗ್ಗೆ ದಾಖಲೆಗಳು ಸಿಕ್ಕ ಬಳಿಕವೇ ಬ್ಯಾನ್ ಮಾಡಿದ್ದೇವೆ. ಕೋರ್ಟ್ ಕೂಡ ನಿಷೇಧವನ್ನು ಎತ್ತಿಹಿಡಿದಿದೆ.
ಭಾರತ್ ಜೋಡೋ ಯಾತ್ರೆ ಬಳಿಕ, ಕಾಂಗ್ರೆಸ್​ನ ತವರು ಎಂದು ಪರಿಗಣಿಸುವ ಈಶಾನ್ಯದ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮಣಿಪುರ ಮೂರೂ ರಾಜ್ಯಗಳಲ್ಲಿ ಅವರು ಸೋಲನುಭವಿಸಿದರು. ಈಗಂತೂ ಯಾತ್ರೆ ಮುಗಿದು ಬಹಳ ಸಮಯವಾಗಿದೆ.
ಎಲ್ಲರೂ ಪ್ರಚಾರದಲ್ಲಿ ತೊಡಗಿದರೆ ಒಳ್ಳೆಯದೇ ಅಲ್ವಾ. (ವ್ಯಂಗ್ಯವಾಗಿ)
ಕಳೆದ ಚುನಾವಣೆಯಲ್ಲಿ ನಮಗೆ 18ರಲ್ಲಿ 11 ಸ್ಥಾನ ಸಿಕ್ಕಿದ್ದವು. ಎಲ್ಲ 18 ಸ್ಥಾನಗಳನ್ನೂ ಗೆಲ್ಲುವುದು ನಮ್ಮ ಪ್ರಯತ್ನ ಆಗಿರುತ್ತದೆ. ಕನಿಷ್ಟ 16 ಸ್ಥಾನ ಗೆಲ್ಲುತ್ತೇವೆ.
ಬಿಜೆಪಿಗೆ ಭಾರಿ ಅನುಕೂಲ ಆಗಲಿದೆ. ದೊಡ್ಡಮಟ್ಟದಲ್ಲಿ ಅಲೆ ಎದ್ದಿದೆ. ಮೋದಿಯವರಿಗೆ ಸಿಗುತ್ತಿರುವ ಜನ ಬೆಂಬಲ ನಿರ್ಣಾಯಕ ಸ್ವರೂಪ ಪಡೆದು, ಗೆಲುವಾಗಿ ಪರಿವರ್ತನೆ ಆಗಲಿದೆ.
ಈ ಎರಡೂ ವಿಚಾರಗಳನ್ನು ಮಿಶ್ರಣ ಮಾಡುವುದು ಬೇಡ. ಕಾಂಗ್ರೆಸ್ ಹಿಮಾಚಲ ಪ್ರದೇಶ, ಹರಿಯಾಣ, ಉತ್ತರಾಖಂಡ, ತ್ರಿಪುರಾ, ಮಣಿಪುರ ಮತ್ತು ಅಸ್ಸಾಂನಲ್ಲೂ ಉಚಿತ ಕೊಡುಗೆ ಭರವಸೆ ನೀಡಿತ್ತು. ಅಲ್ಲೆಲ್ಲಾ ಸೋಲುಂಡಿದೆ. ಕಾಂಗ್ರೆಸ್ ಭರವಸೆಗಳ ಮೇಲೆ ಜನರಿಗೆ ನಂಬಿಕೆ ಉಳಿದಿಲ್ಲ. ಏಕೆಂದರೆ ಬಜೆಟ್ ಮೇಲೆ ಶೇ.70ರಷ್ಟು ಉಚಿತ ಘೋಷಣೆಗಳ ಹೊರೆಯಾಗುತ್ತದೆ. ಅದಕ್ಕೆ ದುಡ್ಡು ಎಲ್ಲಿಂದ ತರಲು ಸಾಧ್ಯ ಎಂಬುದು ಜನರಿಗೆ ಅರ್ಥ ಆಗಲಿದೆ.
ಯಾವುದೇ ರಾಜ್ಯ ಸರ್ಕಾರ ರಾಷ್ಟ್ರೀಯ ನೀತಿಯನ್ನು ಹೇಗೆ ರದ್ದು ಮಾಡುತ್ತದೆ? ನನಗಂತೂ ತಿಳಿದಿಲ್ಲ. ನಿಮ್ಮ ಹೇಳಿಕೆಯ ತಾತ್ಪರ್ಯ ಏನು ಎಂದು ಚುನಾವಣೆ ಬಳಿಕ ನಾನು ಅವರಿಗೆ ಕೇಳುತ್ತೇನೆ. ಕೇವಲ ವೋಟ್ ಬ್ಯಾಂಕ್ ದೃಷ್ಟಿಯಿಂದ ಇಂಥ ಭರವಸೆ ನೀಡಲಾಗುತ್ತದೆ. ಇನ್ನು ಅವರು ಬಜರಂಗಬಲಿಗೆ ಅವಮಾನ ಮಾಡಿದ್ದಾರೆ. ಕರ್ನಾಟಕ ಹನುಮಂತನ ಜನ್ಮಭೂಮಿ. ಕರ್ನಾಟಕದ ಜನ ಆಂಜನೇಯನ ಅವಮಾನ ಸಹಿಸುವುದಿಲ್ಲ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
