ಬೆಂಗಳೂರು:ಸರ್ಕಾರದಲ್ಲಿ ಮೀಸಲು ಮುಂಬಡ್ತಿ ಸಂಘರ್ಷ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ.ಮೀಸಲು ಮುಂಬಡ್ತಿ ಖಾತ್ರಿ ನೀಡಲು ಸರ್ಕಾರ ಕಾನೂನು ತಂದರೂ ಅದು ಜಾರಿಯಾಗುತ್ತಿಲ್ಲ ಎಂದು ಪರಿಶಿಷ್ಟ ಜಾತಿ, ಪಂಗಡದ ನೌಕರರು ಅಸಮಾಧಾನ ಹೊರಹಾಕಿದ್ದು, ಮುಖ್ಯವಾಗಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಜ್ಯೇಷ್ಠತೆ ಸಂರಕ್ಷಣಾ ಕಾಯ್ದೆ 2017ರ ನಂತರ ಸರ್ವೋಚ್ಛ ನ್ಯಾಯಾಲಯವು 2019ರ ಮೇ 10ರಂದು ತೀರ್ಪು ನೀಡಿ ಸರ್ಕಾರ ತೀರ್ಮಾನ ಎತ್ತಿ ಹಿಡಿಯಿತು. ಬಳಿಕ 2019ರ ಮೇ 15ರಂದು ಸರ್ಕಾರ ಆದೇಶ ಹೊರಡಿಸಿದರೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅದೇ ವರ್ಷ ಜೂನ್‌ನಲ್ಲಿ ಸುತ್ತೋಲೆ ಹೊರಡಿಸುವುದರ ಮೂಲಕ ಜ್ಯೇಷ್ಠತೆ ದೊರೆಯದಂತೆ ಮಾಡಿದೆ ಎಂಬುದು ಪ್ರಧಾನ ಆರೋಪವಾಗಿದೆ.ಈ ಸಮಸ್ಯೆ ಬಗ್ಗೆ ಹಿಂದಿನ ಸರ್ಕಾರ ಅವಧಿಯಲ್ಲಿ ಸಾಕಷ್ಟು ಚರ್ಚೆಯಾಗಿತ್ತು. 2021ರ ಜನವರಿ 21ರಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ರಾಮುಲು ಅಧಿಕಾರಿಗಳ ಸಭೆ ನಡೆಸಿ ಸ್ಪಷ್ಟ ಸಭಾ ನಡಾವಳಿ ಸಿದ್ಧ್ದಪಡಿಸಿ ಸೂಚನೆ ನೀಡಿದ್ದರು.ತದನಂತರ ಹಿಂದಿನ ಸರ್ಕಾರದ ಅವಧಿಯಲ್ಲಿ ಎಸ್ಸಿ, ಎಸ್ಟಿ ಪರವಾಗಿ ಮೀಸಲಾತಿ ಹೆಚ್ಚಿಸಿ ಶೇಕಡ 17ರ ಜತೆ ಶೇ.7ರಷ್ಟು ನಿಗದಿಪಡಿಸಿ 100 ಬಿಂದುಗಳಿಗೆ ಒಂದು ಸೈಕಲ್ ಎಂದು ಗುರುತಿಸಿ ಆದೇಶ ಹೊರಡಿಸಿತ್ತು. ಆದರೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿರುವ ಮೀಸಲಾತಿ ವಿರೋಧಿ ಅಧಿಕಾರಿಗಳು ತಪ್ಪಾಗಿ ಬಿಂಬಿಸಿ ಮೀಸಲಾತಿ ದೊರೆಯದಂತೆ ಅಭಿಪ್ರಾಯ ನೀಡುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.ಈ ತೀರ್ಮಾನದಿಂದ ಪರಿಣಾಮ ಲೋಕೋಪಯೋಗಿ ಇಲಾಖೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಭಿಪ್ರಾಯವನ್ನು ಧಿಕ್ಕರಿಸಿ 134 ಜನರಿಗೆ ಹಾಗೂ ಮೊನ್ನೆಮೊನ್ನೆ 34 ಜನರಿಗೆ ಬಡ್ತಿ ನೀಡುವಾಗ (ಎಇ ಹುದ್ದೆಯಿಂದ ಎಇಇ) ಮೀಸಲಾತಿ ಅಳವಡಿಸದೇ ಬಡ್ತಿ ನೀಡಲಾಗಿದೆ. ಅದೇ ರೀತಿ ಕೆಎಸ್‌ಆರ್‌ಟಿಸಿಯಲ್ಲಿ ಬಿ.ಕೆ ಪವಿತ್ರ 1ರ ಜ್ಯೇಷ್ಠತೆಯನ್ನೇ ಮುಂದುವರೆಸಿರುವುದು, ಕೃಷಿ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ 80 ಹುದ್ದೆಗಳನ್ನು ತುಂಬಲು ಸಮಾಜ ಕಲ್ಯಾಣ ಇಲಾಖೆ ಸೂಚಿಸಿದ್ದರೂ ಮುಂಬಡ್ತಿ ನೀಡದೇ ಇರುವುದು ಕಂಡುಬಂದಿದೆ.ಪೋಲಿಸ್ ಇಲಾಖೆ ಮತ್ತು ಅಗ್ನಿಶಾಮಕ ದಳ ಇಲಾಖೆಯಲ್ಲಿ ಆರು ರಿಜಿನಲ್ ಅಗ್ನಿ ಶಾಮಕ ದಳ ಹುದ್ದೆ ಖಾಲಿ ಇದ್ದರೂ ಎಲ್ಲಾ ಹುದ್ದೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಬೇಕಾಗುತ್ತದೆ ಎಂದು ಬಡ್ತಿ ನೀಡದೇ ಇರುವ ಪ್ರಸಂಗವೂ ನಡೆದಿದೆ ಎಂದು ಎಸ್ಟಿಎಸ್ಟಿ ನೌಕರರ ಸಂಘ ಅಸಮಾಧಾನ ಹೊರಹಾಕಿದೆ.ಇದೇ ಕಾರಣಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವರ ಮಧ್ಯ ಪ್ರವೇಶಕ್ಕೂ ಒತ್ತಾಯಿಸಿದ್ದು, ತಕ್ಷಣವೇ ಸಭೆ ಕರೆಯುವಂತೆ ಕೋರಲಾಗಿದೆ. ಜತೆಗೆ ಯಾರಿಗೆಲ್ಲ ಸಮಸ್ಯೆಯಾಗಿದೆಯೋ ಅವರನ್ನೂ ಸಭೆಗೆ ಆಹ್ವಾನಿಸಿದರೆ ಚಿತ್ರಣ ಗೊತ್ತಾಗಲಿದೆ ಎಂದು ಮನವಿ ಮಾಡಲಾಗಿದೆ.ಸಮಾಜ ಕಲ್ಯಾಣ ಇಲಾಖೆ ಸಚಿವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅಕ್ಟೋಬರ್ 12ರಂದು ಸಭೆ ಕರೆಯಲು ಸೂಚಿಸಿದ್ದಾರೆಂದು ತಿಳಿದುಬಂದಿದೆ.ಗೃಹ, ಲೋಕೋಪಯೋಗಿ ಇಲಾಖೆ ಸಚಿವರು, ಆಡ್ವೊಕೇಟ್ ಜನರಲ್, ಕಾನೂನು ಇಲಾಖಾ ಕಾರ್ಯದರ್ಶಿ, ಡಿಪಿಎಆರ್ ಕಾರ್ಯದರ್ಶಿಯೊಂದಿ ಸಮಾಜ ಕಲ್ಯಾಣ ಇಲಾಖೆ ಸಚಿವರು ಅಂದು ಸಭೆ ನಡೆಸಲಿದ್ದು, ಸ್ಥಳದಲ್ಲೇ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × four =
Remember me
