ಚಿತ್ರದುರ್ಗ:ಅಂಗವಿಕಲರ ಸರ್ಕಾರಿ ನೌಕರರಿಗೆ ಸೇವಾ ಜೇಷ್ಠತೆ ಆಧರಿಸಿ ಶೇ.3 ಬಡ್ತಿ ಮೀಸಲು ಕೊಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಅನು ಷ್ಠಾನಗೊಳಿಸದ ರಾಜ್ಯಸರ್ಕಾರ ನಡೆ ವಿರುದ್ಧ ಶೀಘ್ರದಲ್ಲೇ ದಾವೆ ಹೂಡುವುದಾಗಿ ರಾಜ್ಯ ಅಂಗವಿಕಲ ನೌಕರರ ಸಂಘದ ಅಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡ್ತಿ ಮೀಸಲು ಆದೇಶ ಜಾರಿಯಾಗಿ 10 ತಿಂಗಳಾದರೂ ರಾಜ್ಯಸರಕಾರ ಕಡೆಗಣಿಸಿ ದೆ. ಈ ವಿಷಯದ ಕುರಿತಂತೆ ಅನೇಕ ಸಚಿವರು,ಮುಖ್ಯಕಾರ‌್ಯದರ್ಶಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಈಗಾಗಲೇ ಅನೇಕ ಇಲಾಖೆಗಳಲ್ಲಿ ಬಡ್ತಿ ಕೊಡಲಾಗಿದ್ದು,ಇನ್ನೂ ಕೆಲವು ಇಲಾಖೆಗಳಲ್ಲಿ ಬಡ್ತಿಗೆ ಸಿದ್ಧತೆ ನಡೆದಿದ್ದು, ಬಡ್ತಿ ಸೌಲಭ್ಯದಿಂದ ಅಂಗವಿಕಲ ನೌಕರರನ್ನು ವಂಚಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಎರಡು ತಿಂಗಳಿಗೊಮ್ಮೆ ಪ್ರತಿ ಜಿಲ್ಲೆಯಲ್ಲಿ ಸಚಿವರ ಸಭೆ: ಪಂಚಾಯಿತಿ ಚುನಾವಣೆಗೆ ಪಂಚರತ್ನ ಪ್ರಯೋಗ
ರಾಜ್ಯವಿವಿಧ ಇಲಾಖೆಗಳಲ್ಲಿ 25 ಸಾವಿರಕ್ಕೂ ಅಧಿಕ ಅಂಗವಿಕಲ ನೌಕರರು ಇದ್ದಾರೆ ಎಂದರು. ಸಂಘದ ನಿರ್ದೇಶಕ ಕಾಶಿನಾಥ ಶಿರಿಗೇರಿ,ಜಿಲ್ಲಾಧ್ಯಕ್ಷ ವೈಟಿ.ಶಿವಕುಮಾರ, ಗಿರೀಶ,ವಿಶ್ವನಾಥಯ್ಯ ಇದ್ದರು.
ಸೋಂಕಿತರ ಆರೈಕೆ ಕಾರಣ ನಿಗಾ ಸಾಧ್ಯವಾಗಿಲ್ಲ, ಸಿಸಿಬಿ ಪೊಲೀಸರ ಮುಂದೆ ವೈದ್ಯರ ತಪ್ಪೊಪ್ಪಿಗೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
