|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಅನಾಥ ಮಕ್ಕಳಿಗೆ ಹಿಂದುಳಿದ ವರ್ಗಗಳ ಮೀಸಲಾತಿ ನೀಡುವ ಮೂಲಕ ಅವರ ಬಾಳಿನಲ್ಲಿ ಭರವಸೆ ತುಂಬುವ ಕಾಲ ಸನ್ನಿಹಿತವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಇರುವ ಮೀಸಲಾತಿಯನ್ನು ರಾಜ್ಯದಲ್ಲಿಯೂ ಜಾರಿಗೆ ತರುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಿದ್ಧತೆ ಮಾಡಿಕೊಂಡಿದೆ.
ಕರೊನಾ ಸಂದರ್ಭದಲ್ಲಿ ಅಪ್ಪ-ಅಮ್ಮನನ್ನು ಕಳೆದು ಕೊಂಡ ನೂರಾರು ಮಕ್ಕಳು ರಾಜ್ಯದಲ್ಲಿದ್ದಾರೆ. ಇದಲ್ಲದೇ, ಹುಟ್ಟುತ್ತಲೆ ಪಾಲಕರನ್ನು ಕಳೆದುಕೊಂಡು ಬೀದಿಗೆ ಬಿದ್ದವರು, ಮನೆಬಿಟ್ಟು ಬಂದವರು.. ಈ ಬಗೆಯ ಅನಾಥ ಮಕ್ಕಳು ಸಹ ಇದ್ದಾರೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ತಂದರೆ ಇವರ ಬಾಳಿನಲ್ಲಿ ಬೆಳಕು ತರಬಹುದೆಂಬ ಆಶಯ ವ್ಯಕ್ತವಾಗಿದೆ.
ಎಲ್ಲಿದೆ ಈ ಅವಕಾಶ?:ತಮಿಳುನಾಡು ಸರ್ಕಾರ ಮೊದಲ ಬಾರಿಗೆ ಅನಾಥ ಮಕ್ಕಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ.1 ಮೀಸಲಾತಿ ನೀಡಿದೆ. ಆ ನಂತರ ಮಹಾರಾಷ್ಟ್ರ, ತೆಲಂಗಾಣ, ರಾಜಸ್ಥಾನಗಳು ಜಾರಿಗೆ ತಂದಿವೆ. ಇಲ್ಲಿಯೂ ಈ ನೀತಿ ಜಾರಿಗೆ ಬಂದರೆ ಕರ್ನಾಟಕ ಐದನೇ ರಾಜ್ಯವಾಗಲಿದೆ.
ಸಮಗ್ರ ಅಧ್ಯಯನ:ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಬೇರೆ ಬೇರೆ ರಾಜ್ಯಗಳ ಮೀಸಲಾತಿ ನೀತಿಯನ್ನು ಅಧ್ಯಯನ ಮಾಡಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದಲೂ ಸಂಖ್ಯೆಯ ಬಗ್ಗೆ ಮಾಹಿತಿ ಪಡೆದಿದೆ. ರಾಜ್ಯದಲ್ಲಿ 2005 ರಲ್ಲಿ ಅನಾಥ ಮಕ್ಕಳಿಗಾಗಿಯೇ ಬಾಲಮಂದಿರಗಳನ್ನು ಸ್ಥಾಪಿಸುವ ಕೆಲಸ ನಡೆಯಿತು.
ಬೇಡಿಕೆ ಏನು?
ರಾಜ್ಯದಲ್ಲಿಯೂ ತೆಲಂಗಾಣ ಮಾದರಿಯಲ್ಲಿ ‘ರಾಜ್ಯದ ಮಕ್ಕಳು’ಎಂದು ಗುರುತಿಸಬೇಕೆಂಬ ಬೇಡಿಕೆ ಇದೆ. ಈ ರೀತಿಯಲ್ಲಿ ಗುರುತಿಸಿದರೆ ಅನಾಥ ಮಕ್ಕಳಿಗೆ ಶುಲ್ಕ ಪಾವತಿಯಲ್ಲಿ ಸಮಸ್ಯೆಯಾಗುವುದಿಲ್ಲ. ಇಲ್ಲದಿದ್ದಲ್ಲಿ ಹಿಂದುಳಿದ ವರ್ಗಗಳಿಗೆ ನಿಗದಿಯಾಗಿರುವ ಶುಲ್ಕ ಪಾವತಿಸಬೇಕಾಗುತ್ತದೆ. ಶುಲ್ಕ ಪಾವತಿ ಸಾಧ್ಯವಾಗದಿದ್ದರೆ ಶಿಕ್ಷಣವನ್ನು ಅರ್ಧಕ್ಕೆ ತೊರೆಯಬೇಕಾಗುತ್ತದೆ ಎಂದು ಹೋರಾಟಗಾರರು ಹೇಳುತ್ತಾರೆ. ಹಿಂದೆ ಅನಾಥ ಮಕ್ಕಳನ್ನು ‘ಅಕ್ಕನ ಮಕ್ಕಳು’ಎಂದು ಗುರುತಿಸುವ ಪ್ರಯತ್ನ ಅರ್ಧಕ್ಕೆ ನಿಂತಿತ್ತು.
ಅನುಕೂಲಗಳು
ಯಾವ ರಾಜ್ಯದಲ್ಲಿ ಏನಿದೆ?
ಎಷ್ಟು ಅನಾಥ ಮಕ್ಕಳಿದ್ದಾರೆ?
ಸರ್ಕಾರದ ಅಂಕಿಅಂಶ ಪ್ರಕಾರವೇ, ಬೀದಿಯಲ್ಲಿರುವ, ಸರ್ಕಾರದ ಬಾಲಮಂದಿರಗಳಲ್ಲಿ ಇರುವವರು ಸೇರಿದರೆ 40 ಸಾವಿರ ಮಕ್ಕಳು ಇರಬಹುದೆಂದು ಆಯೋಗ ಅಂದಾಜು ಮಾಡಿದೆ. ಈ ಸಂಖ್ಯೆ ವಾಸ್ತವದಲ್ಲಿ ಹೆಚ್ಚಿರ ಬಹುದೆಂದೂ ಹೇಳಲಾಗುತ್ತಿದೆ.
ಆಯೋಗವು ಹೇಳೋದೇನು?
ರಾಜ್ಯದಲ್ಲಿಯೂ ಅನಾಥ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.1 ಮೀಸಲಾತಿ ಯನ್ನು ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ನೀಡುವಂತೆ ಶಿಫಾರಸನ್ನು ಒಂದೆರಡು ವಾರ ದಲ್ಲಿ ಆಯೋಗವು ಸರ್ಕಾರಕ್ಕೆ ರವಾನಿಸಲಿದೆ. ಆ ನಂತರ ಸರ್ಕಾರ ಸಚಿವ ಸಂಪುಟದ ಮುಂದಿಟ್ಟು ಅಂತಿಮ ನಿರ್ಧಾರ ತೆಗೆದು ಕೊಂಡು ಆದೇಶ ಪ್ರಕಟಿಸಲಿದೆ.
ಯಾರ ಪರಿಗಣನೆ?
ತಂದೆ, ತಾಯಿ ಯಾರೆಂದು ಗೊತ್ತಿಲ್ಲದಿರುವವರು, ಸಾಕಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಏಕಪೋಷಕರು, ಕೋವಿಡ್ ಸಂದರ್ಭದಲ್ಲಿ ಪಾಲಕರನ್ನು ಕಳೆದುಕೊಂಡವರನ್ನು ಅನಾಥ ಮಕ್ಕಳೆಂದು ಗುರುತಿಸುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ವಿವಿಧೆಡೆ ಪ್ರವಾಸ ಮಾಡಿದಾಗ ಇಂತಹ ಮಕ್ಕಳ ಸ್ಥಿತಿ ಗಮನಿಸಿದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಮೀಸಲಾತಿ ನೀಡಿರುವುದನ್ನು ಅಧ್ಯಯನ ಮಾಡಿದ್ದೇವೆ. ಒಂದು ವಾರದೊಳಗೆ ಎಲ್ಲ ಮಾಹಿತಿಯನ್ನು ಸಿದ್ಧಪಡಿಸಿ ಹಿಂದುಳಿದ ವರ್ಗಗಳಡಿ ಮೀಸಲಾತಿ ಕಲ್ಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ.
| ಕೆ. ಜಯಪ್ರಕಾಶ್ ಹೆಗ್ಡೆರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ
2013 ರಿಂದ ಹೆಚ್ಚು ಅನುದಾನ ನೀಡಲಾಗುತ್ತಿದೆ. ದತ್ತು ನಂತರ ಅಂಕಿ-ಅಂಶ: ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಡಿಸಿಗೆ ಅಧಿಕಾರ ನೀಡಿ ಪ್ರಕ್ರಿಯೆ ಸರಳ ಮಾಡಿದೆ. ಆದ್ದರಿಂದ ದತ್ತು ಪ್ರಕ್ರಿಯೆಗಳು ಮುಗಿದ ನಂತರ ನಿಖರ ಅಂಕಿ-ಅಂಶ ಸರ್ಕಾರಕ್ಕೆ ಸಿಗುತ್ತದೆ. ಮೀಸಲಾತಿ ನೀತಿ ಪ್ರಕಟಿಸಿ ಕಾಲಕಾಲಕ್ಕೆ ಜಾರಿ ಮಾಡಬಹುದಾಗಿದೆ.
ಉದ್ಯೋಗ ಹೇಗೆ?:ಅರ್ಜಿ ಆಹ್ವಾನ ಮಾಡಿದ ಸಂದರ್ಭದಲ್ಲಿ ಮೊದಲ ಆದ್ಯತೆಯನ್ನು ಅನಾಥ ಮಕ್ಕಳಿಗೆ ನೀಡುವುದು, ಈ ಮೀಸಲಾತಿಯಡಿಯಲ್ಲಿ ಯಾರೂ ಇಲ್ಲದಿದ್ದಲ್ಲಿ ಹಿಂದುಳಿದ ವರ್ಗಗಳ ಇತರ ಅಭ್ಯರ್ಥಿಗಳಿಗೆ ನೀಡಬಹುದೆಂದು ಶಿಫಾರಸು ಮಾಡಲಾಗುತ್ತದೆ.
ಕೋವಿಡ್​ನಲ್ಲಿ ಅನಾಥ:ರಾಜ್ಯದಲ್ಲಿ ಕೋವಿಡ್ ಸಂದರ್ಭದಲ್ಲಿ ಅಂದಾಜು 200 ಮಕ್ಕಳು ತಂದೆ ಹಾಗೂ ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಒಬ್ಬ ಪಾಲಕರನ್ನು ಕಳೆದುಕೊಂಡವರ ಸಂಖ್ಯೆ ಜಾಸ್ತಿ ಇದೆ. ಈ ಮಕ್ಕಳಿಗೆ ಸರ್ಕಾರ ನಿಗದಿ ಮಾಡಿರುವ ಪರಿಹಾರ ಸಹ ಇನ್ನೂ ಸಿಕ್ಕಿಲ್ಲವೆನ್ನಲಾಗಿದೆ.
ಉನ್ನತ ಶಿಕ್ಷಣದಲ್ಲಿ ಆದ್ಯತೆ:ಈ ಹಿಂದೆ ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಅನಾಥ ಮಕ್ಕಳಿಗೆ ಮೀಸಲಾತಿ ನೀಡುವ ಪ್ರಯತ್ನ ನಡೆದಿತ್ತು. ಆದರೆ ಅದು ಸೂಕ್ತ ರೀತಿಯಲ್ಲಿ ಜಾರಿಗೆ ಬರಲಿಲ್ಲ.
ಲಂಚಕ್ಕೆ ಬೇಡಿಕೆ ಇಟ್ಟು ಎಸಿಬಿ ಬಲೆಗೆ ಬಿದ್ದ ತೋಟಗಾರಿಕೆ ಇಲಾಖೆಯ ತೋಟಯ್ಯ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − nine =
Remember me
