ಬೆಂಗಳೂರು:ಮುಂಗಾರು ತಡವಾಗಿ ಇನ್ನೇನು ಬರ ಘೋಷಣೆ ಮಾಡಬೇಕು ಎಂಬ ಸ್ಥಿತಿಯಲ್ಲಿದ್ದ ರಾಜ್ಯದಲ್ಲಿ ಇದೀಗ ಸಂಪೂರ್ಣ ವಿಭಿನ್ನ ಸ್ಥಿತಿ ನಿರ್ವಣವಾಗಿದೆ. ಬತ್ತಿ ಹೋಗಿದ್ದ ನದಿಗಳೆಲ್ಲ ಉಕ್ಕಿ ಹರಿಯುತ್ತಿದ್ದರೆ ಬರಿಯಾಗಿದ್ದ ಜಲಾಶಯಗಳಿಗೆ ಬರಪೂರ ನೀರು ಹರಿದು ಬರುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಬರದ ಆತಂಕ ಮಾಯವಾಗಿಸಿದೆಯಾದರೂ ಕೆಲ ಭಾಗಗಳಲ್ಲಿ ಪ್ರವಾಹದ ಆತಂಕವನ್ನೂ ಸೃಷ್ಟಿಸಿದೆ. ಈ ನಡುವೆ ಇಬ್ಬರು ಮಕ್ಕಳು ಸೇರಿ ಮಳೆಗೆ ಮತ್ತೆ ಮೂವರು ಬಲಿಯಾಗಿದ್ದಾರೆ.
ಕರಾವಳಿಯಲ್ಲಿ ರೆಡ್ ಅಲರ್ಟ್:ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ಪ್ರಭಾವ ಕಡಿಮೆಯಾಗಿದೆ. ಆದರೆ, ಹವಾಮಾನ ಇಲಾಖೆ ಬುಧವಾರ ಉತ್ತಮ ಮಳೆಯ ಮುನ್ಸೂಚನೆ (ರೆಡ್ ಅಲರ್ಟ್) ನೀಡಿದ ಹಿನ್ನೆಲೆಯಲ್ಲಿ ಶಾಲೆ, ಪಿಯು ಕಾಲೇಜುಗಳಿಗೆ ಜಿಲ್ಲಾಡಳಿತಗಳು ರಜೆ ಘೊಷಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಕೊಂಚ ಕಡಿಮೆಯಾಗಿದೆ. ಉಕ್ಕಿದ ನದಿಗಳ ಹರಿವಿನ ವ್ಯಾಪ್ತಿ ತುಸು ಕುಗ್ಗಿದೆ.
ಅವಘಡಗಳಿಗೆ ನಾಲ್ವರು ಸಾವು: ಮಳೆ ಸಂಬಂಧಿತ ಅವಘಡಗಳಿಗೆ ಇಬ್ಬರು ಮಕ್ಕಳು, ಇಬ್ಬರು ವೃದ್ಧೆಯರು ಮೃತಪಟ್ಟಿದ್ದಾರೆ. ಹಾವೇರಿ ತಾಲೂಕಿನ ಮಾಳಪುರ ಗ್ರಾಮದಲ್ಲಿ ಮನೆ ಕುಸಿದು ಭಾಗ್ಯಾ ಚಲಮರದ (3) ಎಂಬ ಮಗು ಮೃತಪಟ್ಟಿದೆ. ಎರಡು ದಿನಗಳ ಹಿಂದೆ ನಿರಂತರ ಮಳೆಗೆ ಮನೆ ಕುಸಿದು ಬಿದ್ದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಪುಟ್ಟ ಕಂದಮ್ಮ ಅಸು ನೀಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು ಸ್ಪೂರ್ತಿ ಎಂಬ 15 ತಿಂಗಳ ಮಗು ಮೃತಪಟ್ಟಿದೆ. ತಂದೆ ಕೆಂಚಪ್ಪ ಅವರಿಗೆ ತೀವ್ರ ಗಾಯಗಳಾಗಿದ್ದು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಲಕ್ಷ್ಮೀದೇವಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ವಿಜಯಪುರ ಜಿಲ್ಲೆಯ ಕನ್ನೂರ ಗ್ರಾಮದಲ್ಲಿ ಮನೆ ಮೇಲ್ಛಾವಣಿ ಕುಸಿದು ವೃದ್ಧೆ ಶಿವಮ್ಮ ಸಾವಳಗಿ (60) ಸಾವಿಗೀಡಾಗಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಾಂಧಿನಗರದ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಮಳೆ ಆರ್ಭಟಕ್ಕೆ ಮನೆ ಗೋಡೆ ಕುಸಿದು ವೃದ್ಧೆ ಗೌರಮ್ಮ (62) ಸಾವಿಗೀಡಾಗಿದ್ದು, ಅವರ ಪತಿ ಗಂಭೀರ ಗಾಯಗೊಂಡಿದ್ದಾರೆ.
ಕೊಡಗಲ್ಲಿ ಮಳೆ ಇಳಿಕೆ:ಕೊಡಗಿನಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದು, ತಲಕಾವೇರಿ, ಭಾಗಮಂಡಲದಲ್ಲೂ ಮಳೆಯ ಅಬ್ಬರ ಇಳಿಮುಖವಾಗಿದ್ದು, ರಸ್ತೆ ಮೇಲೆ ಹರಿಯುತ್ತಿದ್ದ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆ. ಭಾಗಮಂಡಲ-ಮಡಿಕೇರಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದ್ದು, ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆ ಆಗಿರುವುದರಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಕಡಿಮೆ ಆಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲ ಅಂಗನವಾಡಿ ಮತ್ತು ಶಾಲಾ, ಕಾಲೇಜುಗಳಿಗೆ ಬುಧವಾರ (ಜು.26)ವೂ ರಜೆ ನೀಡಲಾಗಿದೆ.
ಶತಕ ಬಾರಿಸಿದ ಕೆಆರ್​ಎಸ್:ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕೆ.ಆರ್.ಸಾಗರದ ಅಣೆಕಟ್ಟೆಯ ಒಳಹರಿವಿನ ಪ್ರಮಾಣ 50 ಸಾವಿರ ಕ್ಯೂಸೆಕ್​ಗೆ ಏರಿಕೆಯಾಗಿದ್ದು, ಮಂಗಳವಾರ ಸಂಜೆ ವೇಳೆಗೆ 102 ಅಡಿಗೆ ತಲುಪಿದೆ. ಕೇರಳದ ವಯನಾಡು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್​ಗೂ ಅಧಿಕ ನೀರು ಹರಿದು ಬರುತ್ತಿದ್ದು, ಪೂರ್ಣ ಭರ್ತಿಗೆ 2 ಅಡಿ ಬಾಕಿ ಇದೆ.
ಘಟ್ಟ ಪ್ರದೇಶದಲ್ಲಿ ವರ್ಷಧಾರೆ:ಮಲೆನಾಡಿನಲ್ಲಿ ಮುಸಲಧಾರೆ ಮುಂದುವರಿದಿದ್ದು, ಸಾಕಷ್ಟು ಕಡೆ ಭೂ ಕುಸಿತ ಹಾಗೂ ಮನೆಗಳಿಗೆ ಹಾನಿಯಾಗಿದೆ. ಶಿವಮೊಗ್ಗ ಸಮೀಪದ ಕೂಡ್ಲಿಯ ತುಂಗಾ ಮತ್ತು ಭದ್ರಾ ಸಂಗಮದ ಶ್ರೀ ಸಂಗಮೇಶ್ವರ ಸನ್ನಿಧಾನ ಜಲಾವೃತವಾಗಿದೆ. ಸ್ನಾನಘಟ್ಟ ಮುಳುಗಿ ಪೂಜಾ ಮಂಟಪದವರೆಗೂ ನೀರು ಬಂದಿದೆ. ಲಿಂಗನಮಕ್ಕಿ ಅಣೆಕಟ್ಟೆಗೆ 67,317 ಕ್ಯೂಸೆಕ್, ಭದ್ರಾ ಡ್ಯಾಂಗೆ 31,425 ಕ್ಯೂಸೆಕ್, ತುಂಗಾ ಜಲಾಶಯಕ್ಕೆ 60,455 ಕ್ಯೂಸೆಕ್ ನೀರು ಬರುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ, ಶೃಂಗೇರಿ, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ ತಾಲೂಕುಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಶೃಂಗೇರಿ ತಾಲೂಕಿನಲ್ಲಿ ಮಳೆ ಕೊಂಚ ಬಿಡುವು ನೀಡಿದ್ದರೂ ತುಂಗಾ ನದಿ ಮಾತ್ರ ತುಂಬಿ ಹರಿಯುತ್ತಿದೆ. ಆನೆಗುಂದ ರಾಷ್ಟ್ರೀಯ ಹೆದ್ದಾರಿ-169ರ ನೇರಳಕೊಡಿಗೆಯಲ್ಲಿ ತುಸು ಭೂಕುಸಿತವಾಗಿದೆ.
ಹೇಮಾವತಿ ಭರ್ತಿಗೆ 16 ಅಡಿ ಬಾಕಿ:ಹಾಸನ ಜಿಲ್ಲೆಯಲ್ಲಿ ಕಳೆದ 8-10 ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಹೇಮಾವತಿ ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 2,922 ಅಡಿ ಜಲಾಶಯದಲ್ಲಿ ಈಗ 2,906.25 ಅಡಿ ನೀರು ಭರ್ತಿಯಾಗಿದ್ದು, ಪೂರ್ಣ ಭರ್ತಿಗೆ ಕೇವಲ 16 ಅಡಿ ಬಾಕಿ ಇದೆ. ಸಕಲೇಶಪುರ, ಆಲೂರು, ಅರಕಲಗೂಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಸಕಲೇಶಪುರ ಭಾಗದ ಬಿಸಿಲೆಘಾಟ್ ಮಾರ್ಗದಲ್ಲಿ ಅಲ್ಲಿಲ್ಲಿ ಸಣ್ಣ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದೆ.
ಕೃಷ್ಣೆಗೆ 1.32 ಲಕ್ಷ ಕ್ಯೂಸೆಕ್ ನೀರು:ನೆರೆಯ ಮಹಾರಾಷ್ಟ್ರ ಪಶ್ಚಿಮ ಘಟ್ಟದ ಪ್ರದೇಶ, ಬೆಳಗಾವಿ ಜಿಲ್ಲೆಯ ವಿವಿಧೆಡೆ ಮಂಗಳವಾರ ಮಳೆ ಮತ್ತಷ್ಟು ಬಿರುಸು ಪಡೆದ ಕಾರಣ ನದಿಗಳ ನೀರಿನ ಮಟ್ಟ ಏರುತ್ತಿದೆ. 21 ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ.ಕೃಷ್ಣಾ, ಘಟಪ್ರಭಾ, ವೇದಗಂಗಾ, ದೂಧಗಂಗಾ, ಮಾರ್ಕಂಡೇಯ ಬಳ್ಳಾರಿ ನಾಲಾ ಸೇರಿ ಜಿಲ್ಲೆಯ ವಿವಿಧ ಕಡೆ ಹಳ್ಳಗಳು ಉಕ್ಕಿ ಹರಿಯುತ್ತಿವೆ. ಕೃಷ್ಣಾ ನದಿಗೆ ಮಂಗಳವಾರ 1.32 ಲಕ್ಷ ಕ್ಯೂಸೆಕ್ ನೀರು ಹರಿಬಂದಿದೆ.
ಟಿಬಿ ಡ್ಯಾಮ್ ಒಳಹರಿವು ಏರಿಕೆ:ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ಕಳೆದೊಂದು ವಾರದಲ್ಲಿ ಗಣನೀಯ ಒಳಹರಿವು ದಾಖಲಾಗುತ್ತಿದ್ದು, ಮಂಗಳವಾರ 1633 ಅಡಿ ಪೈಕಿ 1606.78 ಅಡಿಗೆ ತಲುಪಿದೆ. ಒಳಹರಿವು ಇದೇ ಪ್ರಮಾಣದಲ್ಲಿ ಮುಂದುವರಿದರೆ ವಾರದೊಳಗೆ ಭರ್ತಿಯಾಗಲಿದೆ. 105.788 ಟಿಎಂಸಿ ಅಡಿ ಸಾಮರ್ಥ್ಯದಲ್ಲಿ 31.658 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ನೀರುಪಾಲಾದವರ ಸುಳಿವಿಲ್ಲ:ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊಲ್ಲೂರಿಗೆ ಯಾತ್ರಾರ್ಥಿಯಾಗಿ ಬಂದು ಸ್ನೇಹಿತನ ಜತೆ ಅರಿಶಿನಗುಂಡಿ ಜಲಪಾತ ವೀಕ್ಷಣೆಗೆ ತೆರಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಭದ್ರಾವತಿಯ ಶರತ್ ಕುಮಾರ್(23) ಹಾಗೂ ಮನೆ ಪಕ್ಕ ಹೊಳೆಬದಿಗೆ ತೆರಳಿ ನಾಪತ್ತೆಯಾಗಿದ್ದ ಜಡ್ಕಲ್ ಗ್ರಾಮದ ಮೆಕ್ಕೆ ನಿವಾಸಿ ಸುರೇಶ ಎಂಬುವರು ಇನ್ನೂ ಪತ್ತೆಯಾಗಿಲ್ಲ. ಈ ಇಬ್ಬರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
ಪ್ರಕೃತಿ ವಿಕೋಪ ನಿರ್ವಹಣೆಗೆ ಕೊಡಗು ಜಿಲ್ಲಾಧಿಕಾರಿ ಖಾತೆಯಲ್ಲಿ 56 ಕೋಟಿ ರೂ. ಇದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟು 540 ಕೋಟಿ ರೂ. ಇದೆ. ಇನ್ನಷ್ಟು ಹಣ ನೀಡಲು ಸಿದ್ಧರಿದ್ದೇವೆ.
| ಕೃಷ್ಣಬೈರೇಗೌಡ, ಸಚಿವ
ಮಳೆ, ನೆರೆ ಬಾಧಿತ ಪ್ರದೇಶಕ್ಕೆ ಬಿಜೆಪಿ ರಾಜ್ಯ ನಾಯಕರ ತಂಡಗಳು ಭೇಟಿ ನೀಡಲಿವೆ. ತಂಡದ ಪಟ್ಟಿ ಹಾಗೂ ರಾಜ್ಯ ಪ್ರವಾಸದ ದಿನಾಂಕವಿನ್ನೂ ಅಂತಿಮವಾಗಿಲ್ಲ.
| ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಹುಬ್ಬಳ್ಳಿ:ಹವಾಮಾನ ವೈಪರೀತ್ಯದಿಂದ ಜುಲೈನಲ್ಲಿ ಮುಂಗಾರು ಆರಂಭವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಬರ ಎಂಬ ವಿಚಾರ ಹೇಗೆ ಸರಿ? ಈಗ ಮಳೆಯಾಗುತ್ತಿಲ್ಲವೆ? ಅವರು (ಬಿಜೆಪಿ) ಅಧಿಕಾರದಲ್ಲಿದ್ದಾಗ ಪ್ರವಾಹ ಬಂದಿಲ್ಲವೆ? ಜನರು ತೊಂದರೆ ಪಟ್ಟಿರಲಿಲ್ಲವೆ? ನನಗೆ ಮೌಢ್ಯಗಳಲ್ಲಿ ನಂಬಿಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜುಲೈನಲ್ಲಿ ಇಲ್ಲಿಯವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅತಿಯಾಗಿ ಮಳೆಯಾಗಿರುವ ಜಿಲ್ಲೆಗಳಿಗೆ ಸಚಿವರ ನೇತೃತ್ವದಲ್ಲಿ ತಂಡ ಮಾಡಿಕೊಂಡು ಪರಿಶೀಲನೆ ನಡೆಸಿದ್ದೇವೆ. ಖುದ್ದು ನಾನು ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.
ಪರಿಹಾರ ಕೊಡುತ್ತೇವೆ:ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮಳೆಗೆ ಮನೆ ಹಾನಿ ಪರಿಹಾರ ಯೋಜನೆ ಮುಂದುವರಿಸುತ್ತೇವೆ. ಸಂಪೂರ್ಣವಾಗಿ ಮನೆ ಹಾನಿಯಾದರೆ 5 ಲಕ್ಷ ರೂ., ಶೇ. 50ರಿಂದ 75 ಹಾನಿಯಾದರೆ 3 ಲಕ್ಷ ರೂ. ಹಾಗೂ ಶೇ. 25ಕ್ಕಿಂತ ಕಡಿಮೆಯಾಗಿದ್ದರೆ 50 ಸಾವಿರ ರೂ. ಪರಿಹಾರ ನೀಡಲಾಗುವುದು. ಎಂಎಲ್​ಎ ಅಥವಾ ಯಾರದ್ದೇ ಒತ್ತಡಕ್ಕೂ ಅಧಿಕಾರಿಗಳು ಮಣಿಯಬಾರದು. ಮನೆ ಹಾನಿ ಕುರಿತು ತಪ್ಪಾಗಿ ವರದಿ ಮಾಡಬಾರದು ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನದಿ ಪಾತ್ರದಲ್ಲಿ ಭೀತಿ:ಕಲಬುರಗಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಮುಲ್ಲಾಮಾರಿ ಮತ್ತು ಕಾಗಿಣಾ ನದಿಗಳು ಉಕ್ಕೇರಿ ಹರಿಯತ್ತಿವೆ. ಹಲವೆಡೆ ಜಮೀನಿಗೆ ನೀರು ನುಗ್ಗಿ ಬೆಳೆಗಳು ಜಲಾವೃತಗೊಂಡಿದ್ದರೆ, ಕೆಲ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಚಿಂಚೋಳಿ ತಾಲೂಕಿನ ದೇಗಲಮಡಿಯಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಲವು ಸೇತುವೆಗಳು ಮುಳುಗಡೆಯಾಗಿದ್ದು, ಕೆಲ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ರಾಜ್ಯದಲ್ಲಿ ಹಲವೆಡೆ ಸುರಿಯುತ್ತಿರುವ ಭಾರಿ ಮಳೆ, ಸಿಡಿಲಬ್ಬರ, ನೆರೆ ಹಾಗೂ ಕಡಲ್ಕೊರೆತದಿಂದ ಉಂಟಾಗಿರುವ ಹಾನಿ ಬಗ್ಗೆ ಸಾಕ್ಷಾತ್ ಸಮೀಕ್ಷೆ ನಡೆಸಲು ಪ್ರತಿಪಕ್ಷ ತೀರ್ವನಿಸಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ, ಇನ್ನಿತರ ನಾಯಕರ ನಡುವೆ ಚರ್ಚೆ ನಡೆದಿದೆ. ಎರಡು ತಂಡಗಳು ಶನಿವಾರ ಹಾಗೂ ಭಾನುವಾರ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ಆದರೆ, ರಾಜ್ಯ ನಾಯಕರ ಲಭ್ಯತೆ, ಕಾಲಾವಕಾಶ ನೋಡಿಕೊಂಡು ಮಳೆಬಾಧಿತ ಪ್ರದೇಶದ ಭೇಟಿ ದಿನಾಂಕ ಅಂತಿಮಗೊಳಿಸ ಲಾಗುವುದು ಎಂದು ಮೂಲಗಳು ತಿಳಿಸಿವೆ.
ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

ಪಾಕ್​ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me