ತಿಂಗಳ ಮೊದಲೇ ತುಂಗೆ ಭರ್ತಿ:ಗಾಜನೂರು ತುಂಗಾ ಜಲಾಶಯ ಕಳೆದ ವರ್ಷ ಜೂನ್ ಎರಡನೇ ವಾರದಲ್ಲಿ ಸಂಪೂರ್ಣ ಭರ್ತಿಯಾಗಿತ್ತು. ಆದರೆ ಈ ಬಾರಿ 15 ದಿನ ಮುನ್ನವೇ ಜಲಾಶಯದ ನೀರಿನ ಸಂಗ್ರಹ ಗರಿಷ್ಠ 588.24 ಮೀಟರ್ ತಲುಪಿದೆ. ಕಳೆದ ವರ್ಷ ಈ ಅವಧಿಯಲ್ಲಿ 586.75 ಮೀಟರ್ ನೀರು ಸಂಗ್ರಹವಿತ್ತು. ಪ್ರಸ್ತುತ ಜಲಾಶಯಕ್ಕೆ 807 ಕ್ಯೂಸೆಕ್ ನೀರು ಹರಿದುಬರುತ್ತಿದೆ.
ಲಿಂಗನಮಕ್ಕಿ 4 ವರ್ಷದಲ್ಲೇ ಗರಿಷ್ಠ:ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಇದೇ ಮೊದಲ ಬಾರಿಗೆ ಮೇ ಕೊನೆಯ ವಾರದಲ್ಲಿ ಅತ್ಯಧಿಕ ನೀರು ಸಂಗ್ರಹವಿದೆ. ಗರಿಷ್ಠ 1,819 ಅಡಿ ನೀರು ಸಂಗ್ರಹ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸ್ತುತ 1,781.20 ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,770.40 ಅಡಿ ನೀರು ಇತ್ತು. 2019ರಲ್ಲಿ 1,754.75, 2018ರಲ್ಲಿ 1,756.25 ಹಾಗೂ 2017ರಲ್ಲಿ 1,745.45 ಅಡಿ ನೀರಿತ್ತು.
ತುಂಗಭದ್ರಾಗೆ ಹೆಚ್ಚು ಒಳಹರಿವು:ತುಂಗಭದ್ರಾ ಜಲಾಶಯಕ್ಕೆ ಮುಂಗಾರು ಆಗಮನ ಮುನ್ನವೇ ಒಳಹರಿವು (ಶನಿವಾರದ ನೀರಿನ ಮಟ್ಟ 1585.77 ಅಡಿ; ಗರಿಷ್ಠಮಟ್ಟ 1633 ಅಡಿ) ಹೆಚ್ಚಾಗಿದೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದಲ್ಲಿ (1582.26 ಅಡಿ) ಈ ಬಾರಿ 2 ಟಿಎಂಸಿ ಅಡಿ ನೀರು ಹೆಚ್ಚು ಸಂಗ್ರಹವಾಗಿದೆ.
ಘಟಪ್ರಭಾ ಏರಿಕೆ, ಮಲಪ್ರಭಾ ಇಳಿಕೆ:ಏಪ್ರಿಲ್, ಮೇ ತಿಂಗಳಲ್ಲಿ ಆಗಾಗ ಸುರಿದ ಮಳೆಯಿಂದಾಗಿ ಮಲಪ್ರಭಾ ಹಾಗೂ ಘಟಪ್ರಭಾ ಜಲಾಶಯ ಈಗಲೂ ಭರ್ತಿಯಾಗಿಯೇ ಇವೆೆ. ಪ್ರಸ್ತುತ ಮಲಪ್ರಭಾ ಜಲಾಶಯದಲ್ಲಿ 7.27 (ಕಳೆದ ವರ್ಷ 9.77) ಟಿಎಂಸಿ ನೀರಿದ್ದರೆ, ಘಟಪ್ರಭಾ ಡ್ಯಾಂನಲ್ಲಿ 8.46 (ಕಳೆದ ವರ್ಷ 7.40) ಟಿಎಂಸಿ ನೀರಿದೆ.
ಕಬಿನಿಯಲ್ಲಿ ಕಡಿಮೆ:ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಬಿನಿ ಜಲಾಶಯ 2,284 ಅಡಿ ಸಾಮರ್ಥ್ಯ ಹೊಂದಿದ್ದು, ಸದ್ಯ 2263.97 ಅಡಿ ನೀರು ಇದೆ. ಕಳೆದ ವರ್ಷ ಈ ವೇಳೆ 2267.02 ಅಡಿ ನೀರು ಸಂಗ್ರಹವಾಗಿತ್ತು. 19.52 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 8.91 ಟಿಎಂಸಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಈ ವೇಳೆ 9.70 ಟಿಎಂಸಿ ಸಂಗ್ರಹವಾಗಿತ್ತು.
ಆಲಮಟ್ಟಿ ಅಪಾರ:ಆಲಮಟ್ಟಿ ಜಲಾಶಯದಲ್ಲಿ ಸದ್ಯಕ್ಕೆ ಅಪಾರ ನೀರಿನ ಸಂಗ್ರಹವಿದೆ. ಗರಿಷ್ಠ 519.60 ಮೀ. ಎತ್ತರದ ಜಲಾಶಯದಲ್ಲಿ 508.42 ಮೀ.ವರೆಗೆ ನೀರಿದೆ. 123.08 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 23 ಟಿಎಂಸಿ ನೀರಿನ ಲಭ್ಯತೆ ಇದೆ. ಅದರಲ್ಲಿ ಡೆಡ್ ಸ್ಟೋರೇಜ್ 17.62 ಟಿಎಂಸಿ ಇದ್ದು, ಇನ್ನುಳಿದ 5.3 ಟಿಎಂಸಿ ನೀರು ಬಳಕೆಗೆ ಅವಕಾಶವಿದೆ. ಡೆಡ್ ಸ್ಟೋರೇಜ್ ಹೊರತುಪಡಿಸಿ ಉಳಿದ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿದರೆ ಒಂದು ತಿಂಗಳಿಗೂ ಅಧಿಕ ಅವಧಿವರೆಗೆ ನೀರಿನ ಸಮಸ್ಯೆಯಾಗದು.
ಭದ್ರಾದಲ್ಲಿ ಹೆಚ್ಚು:ಗರಿಷ್ಠ 186 ಅಡಿ ನೀರು ಸಂಗ್ರಹ ಸಾಮರ್ಥ್ಯದ ಭದ್ರಾ ಜಲಾಶಯದಲ್ಲಿ ಪ್ರಸ್ತುತ 137.6 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 133.2 ಅಡಿ ನೀರಿತ್ತು.
ಹೇಮಾವತಿ ಉತ್ತಮ:2922 ಅಡಿ ಸಾಮರ್ಥ್ಯದ ಹೇಮಾವತಿ ಜಲಾಶಯ ಕಳೆದ ವರ್ಷದಷ್ಟೇ ಈ ಬಾರಿಯೂ ನೀರನ್ನು ಹೊಂದಿದೆ. ಹೋದ ವರ್ಷ 2892.93 ಅಡಿ ಇದ್ದರೆ ಈಗ 2884.50 ಅಡಿ ಇದೆ.
ಕೆಆರ್​ಎಸ್, ಹಾರಂಗಿಯಲ್ಲಿ ಇಳಿಕೆ:124.80 ಅಡಿ ಸಾರ್ಮರ್ಥ್ಯದ ಕೃಷ್ಣರಾಜಸಾಗರ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ 93.08 ಅಡಿ ನೀರಿತ್ತು. ಸದ್ಯ 86.78 ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷಕೆ ಹೋಲಿಸಿದರೆ 6.5 ಅಡಿ ನೀರು ಕಡಿಮೆಯಾಗಿದೆ. ಹಾರಂಗಿ ಜಲಾಶಯದಲ್ಲಿ ಕಳೆದ ವರ್ಷ ಈ ದಿನ(ಶನಿವಾರ)ಕ್ಕೆ 2830.87 ಅಡಿ ನೀರಿನ ಸಂಗ್ರಹವಿತ್ತು. ಈ ವರ್ಷ 2822.06 ಅಡಿ ನೀರಿದೆ. ಹಿಂದಿನ ವರ್ಷಕ್ಕಿಂತ 8 ಅಡಿ ನೀರು ಇಳಿಕೆಯಾಗಿದೆ.
ಬಸವಸಾಗರದಲ್ಲಿದೆ 19.56 ಟಿಎಂಸಿ:ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ ಸದ್ಯ 19.56 ಟಿಎಂಸಿ ಇದೆ. 33.31 ಟಿಎಂಸಿ ಸಾಮರ್ಥ್ಯದ ಜಲಾಶಯ ದಲ್ಲಿ ಕಳೆದ ಬಾರಿ ಈ ಅವಧಿಯಲ್ಲಿ 18.60 ಟಿಎಂಸಿ ನೀರು ಸಂಗ್ರಹ ಇತ್ತು.
ಅಪ್ಪನ ಹೆಣ ಬೇಡ, ಅವರ ಹಣ ಬೇಕು; ಅನಾಥ ಶವ ಎಂದರೂ ಸರಿ ಎಂದ, 6 ಲಕ್ಷ ಇದೆ ಎಂದಾಗ 5 ನಿಮಿಷ ಎಂದು ಹೇಳಿದ ಮಗ!

ಸಂಬಂಧಿಕರಿಗಾಗಿ ಕಾಯುತ್ತಿವೆ ಕೋವಿಡ್‌ನಿಂದ ಮೃತಪಟ್ಟ ಸಾವಿರಾರು ಜನರ ಅಸ್ಥಿಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 2 =
Remember me
