|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯದ ಪ್ರಸಕ್ತ ಬಿಜೆಪಿ ಸರ್ಕಾರದ ಅವಧಿ ಮುಗಿಯುವುದರೊಳಗೆ 3.26 ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಒಳಪಡಿಸುವ ಮೂಲಕ ಅಚ್ಚುಕಟ್ಟು ಪ್ರದೇಶವನ್ನು ವೃದ್ಧಿಸುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಬೃಹತ್ ನೀರಾವರಿ ಯೋಜನೆಗಳನ್ನು ತಕ್ಷಣಕ್ಕೆ ಕೈಗೊಳ್ಳಲು ಸಾಧ್ಯವಿಲ್ಲವಾದರೂ, ವಿವಿಧ ಯೋಜನೆಗಳಲ್ಲಿ ರಾಜ್ಯಕ್ಕೆ ಲಭ್ಯವಾದ ನೀರನ್ನು ಪ್ರಾಮಾಣಿಕವಾಗಿ ಬಳಸಿಕೊಳ್ಳುವ ತೀರ್ಮಾನ ಮಾಡಲಾಗಿದೆ. ಇಷ್ಟು ವರ್ಷಗಳ ಕಾಲ ರಾಜ್ಯದಲ್ಲಿ ಕೋಟ್ಯಂತರ ರೂ.ಗಳನ್ನು ನೀರಾವರಿಗಾಗಿ ವೆಚ್ಚ ಮಾಡಲಾಗಿದೆ. ಆದರೆ ಅಚ್ಚುಕಟ್ಟು ಪ್ರದೇಶ ನಿರೀಕ್ಷೆಯಷ್ಟು ಆಗಿಲ್ಲ. ಬಹುತೇಕ ಯೋಜನೆಗಳು ಕುಂಟುತ್ತ ಸಾಗುತ್ತಿವೆ. ಕೆಲವು ದೊಡ್ಡ ಯೋಜನೆಗಳು ನ್ಯಾಯಾಲಯದ ಮುಂದಿವೆ. ಆದ್ದರಿಂದ ಇರುವ ಅವಕಾಶವನ್ನು ಬಳಸಿಕೊಂಡು ನೀರಾವರಿ ಪ್ರದೇಶ ಹೆಚ್ಚಿಸುವ ಮೂಲಕ ಅಚ್ಚುಕಟ್ಟಿಗೆ ನೀರು ನೀಡಲು ಸರ್ಕಾರ ಮುಂದಾಗಿದೆ.
3 ನಿಗಮಗಳ ಯತ್ನ:ರಾಜ್ಯದಲ್ಲಿ 3.26 ಲಕ್ಷ ಹೆಕ್ಟೇರ್ ಭೂಮಿಯನ್ನು ಕರ್ನಾಟಕ ನೀರಾವರಿ ನಿಗಮ, ಕೃಷ್ಣಾ ಜಲಭಾಗ್ಯ ನಿಗಮ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮಗಳ ವ್ಯಾಪ್ತಿಯಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಡಿಸಲಾ ಗುತ್ತಿದೆ. ಕಾವೇರಿ ಜಲ ನಿಗಮದ ವ್ಯಾಪ್ತಿಯಲ್ಲಿ ಈಗ ಯಾವುದೇ ಕಾಮಗಾರಿಗಳು ಇಲ್ಲ. ಉಳಿದ ಮೂರು ನಿಗಮಗಳಲ್ಲಿ ಅಚ್ಚುಕಟ್ಟು ಹೆಚ್ಚಳ ಮಾಡುವ ಪ್ರಯತ್ನ ನಡೆದಿದೆ.
ಹೊಸ ಯೋಜನೆ ಇಲ್ಲ:ಜಲಾಶಯಗಳ ವ್ಯಾಪ್ತಿಯಲ್ಲಿದ್ದರೂ ನೀರು ಸಿಗದ ಪ್ರದೇಶಗಳಿಗೆ ನೀರು ಒದಗಿಸುವುದು ಪ್ರಮುಖ ಉದ್ದೇಶವಾಗಿದೆ. ಅದಕ್ಕಾಗಿ ನಾಲಾ ನೀರಾವರಿ, ಏತ ನೀರಾವರಿ ಹಾಗೂ ಕೆರೆ ತುಂಬಿಸುವ ಕಾಮಗಾರಿಗಳನ್ನು 3.25 ಲಕ್ಷ ಹೆಕ್ಟೇರ್​ಗೆ ನೀರು ಒದಗಿಸಲು ಕೈಗೊಳ್ಳಲಾಗುತ್ತದೆ. ಎಲ್ಲಿಯೂ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಿಲ್ಲ. ಈಗಾಗಲೇ ರಾಜ್ಯಕ್ಕೆ ದೊರೆತಿರುವ ನೀರಿನ ಸಮರ್ಥ ಬಳಕೆ ಮಾತ್ರ ಮಾಡಲಾಗುತ್ತಿದೆ.
ಎಷ್ಟು ವೆಚ್ಚ?:ನೀರಾವರಿ ಯೋಜನೆಗಳಿಗಾಗಿ 11 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಲಾಗುತ್ತಿದೆ. ರ್ಖಚಾಗುವ ಪ್ರತಿ ಮೊತ್ತಕ್ಕೂ ಉತ್ತರದಾಯಿತ್ವದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ.
ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ
ಇತರ ಕಾಮಗಾರಿಗಳು:ನೀರಾವರಿ ಯೋಜನೆಗಳು ಮಾತ್ರವಲ್ಲದೇ ಬಾಗಲಕೋಟೆ ನಗರದ ಯುನಿಟ್ 3 ರಲ್ಲಿ ಮೂಲಸೌಕರ್ಯ, ಬಾಗಲಕೋಟೆ ಅಭಿವೃದ್ಧಿ ಪ್ರಾಧಿಕಾರದಿಂದ 97 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ, ಮಲಪ್ರಭಾ ನದಿಗೆ ಅಡ್ಡಲಾಗಿ ಕೂಡಲಸಂಗಮ ಸೇತುವೆ, ಬಸವನಬಾಗೇವಾಡಿ ಹಾಗೂ ಇಂಗಳೇಶ್ವರ ಪ್ರದೇಶ ಅಭಿವೃದ್ಧಿ, ಕೊಲ್ಹಾರ ಪುನರ್ವಸತಿ ಯೋಜನೆಯಲ್ಲಿ ಮೂಲಸೌಕರ್ಯ, ಆಲಮಟ್ಟಿಯಲ್ಲಿ 14.50 ಕೋಟಿ ರೂ. ವೆಚ್ಚದಲ್ಲಿ ಹೊಸ ಅತಿಥಿಗೃಹ ಮೊದಲಾದವುಗಳಿಗೂ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಿಲ್ಲ. ಆದರೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿದ್ದರೂ ನೀರು ಸಿಗದೆ ಬಾಧಿತವಾಗಿರುವ ಪ್ರದೇಶಕ್ಕೆ ನೀರು ನೀಡುವ ಕೆಲಸ ಮಾಡುತ್ತಿದ್ದೇವೆ. ಆದಷ್ಟು ಬೇಗ ಕಾಮಗಾರಿಗಳಿಗೆ ಅನುಮೋದನೆ ನೀಡಿ ಪ್ರಾರಂಭ ಮಾಡುತ್ತೇವೆ. ನಮ್ಮ ಅವಧಿಯಲ್ಲಿಯೇ ಕಾಮಗಾರಿಗಳನ್ನು ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ.
|ಗೋವಿಂದ ಕಾರಜೋಳಜಲಸಂಪನ್ಮೂಲ ಸಚಿವ
ಸಂಪುಟಕ್ಕೆ ಪ್ರಸ್ತಾವನೆ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಇತ್ತೀಚೆಗೆ ನೀರಾವರಿಗೆ ಸಂಬಂಧಿಸಿದ ಮೂರು ನಿಗಮಗಳ ಆಡಳಿತ ಮಂಡಳಿ ಸಭೆಯಲ್ಲಿ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ. ನಿಗಮಗಳು ಇಲಾಖೆಯ ಮೂಲಕ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲಿವೆ. ಈಗಾಗಲೇ ಅನುದಾನ ನಿಗದಿ ಮಾಡಿರುವುದರಿಂದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವುದು ಕಷ್ಟವಾಗುವುದಿಲ್ಲ. ತಕ್ಷಣ ಟೆಂಡರ್ ಕರೆದು ಕಾಮಗಾರಿಗಳನ್ನು ಆರಂಭಿಸಲು ಸರ್ಕಾರ ಉತ್ಸುಕವಾಗಿದೆ.
ರಾಷ್ಟ್ರೀಯ ಮಾನ್ಯತೆಗೆ ಯತ್ನ:ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಕೃಷ್ಣಾ ಮೂರನೇ ಹಂತದ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ಪಡೆಯುವ ಪ್ರಯತ್ನ ನಡೆದಿದೆ. ಕೇಂದ್ರ ಸರ್ಕಾರ ಬಹುತೇಕ ಒಪ್ಪಿದೆ. ಮೇಕೆದಾಟು ಹಾಗೂ ಮಹದಾಯಿ ನ್ಯಾಯಾಲಯದ ಮುಂದಿವೆ. ಅವುಗಳಿಗೆ ನ್ಯಾಯಾಲಯದ ಒಪ್ಪಿಗೆ ಪಡೆದು ಕಾಮಗಾರಿ ಆರಂಭಿಸುವ ಉದ್ದೇಶ ಇದ್ದು ಪ್ರತ್ಯೇಕವಾಗಿ ಹಣ ಮೀಸಲಿಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
