ಲೋಕಸಭೆ ಫಲಿತಾಂಶದ ಕುತೂಹಲಕ್ಕೆ ಮಂಗಳವಾರ ತೆರೆ ಬಿದ್ದಿದೆ. ಮತಗಟ್ಟೆ ಸಮೀಕ್ಷೆಗಳ ಭವಿಷ್ಯ, ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಮೀರಿದ ಫಲಿತಾಂಶ ಹಲವು ಸಂದೇಶಗಳನ್ನು ರವಾನಿಸಿದೆ. ಮೂರನೇ ಬಾರಿ ಅಧಿಕಾರಕ್ಕೆ ಏರುವ ಭಾರಿ ವಿಶ್ವಾಸದಲ್ಲಿದ್ದ ಬಿಜೆಪಿ ಸ್ಪಷ್ಟ ಬಹುಮತದಿಂದ ಸ್ವಲ್ಪ ದೂರವಿದ್ದರೂ, ಮೈತ್ರಿಪಕ್ಷಗಳ ನೆರವಿನೊಂದಿಗೆ ಸರ್ಕಾರ ರಚಿಸಬಹುದಾಗಿದೆ. ಕಳೆದ ಬಾರಿ ಅಧಿಕೃತ ಪ್ರತಿಪಕ್ಷದ ಸ್ಥಾನ ಪಡೆಯಲು ಬೇಕಾಗುವಷ್ಟು ಸ್ಥಾನ ಪಡೆಯಲು ವಿಫಲವಾಗಿದ್ದ ಕಾಂಗ್ರೆಸ್ ಈ ಬಾರಿ ಬಲ ವೃದ್ಧಿಸಿಕೊಂಡಿದೆ. ಇಂಡಿ ಒಕ್ಕೂಟದ ಮೂಲಕ ಪ್ರಬಲ ಪ್ರತಿಪಕ್ಷ ರೂಪಗೊಂಡಿರುವುದು ಪ್ರಜಾಪ್ರಭುತ್ವದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯೇ.
2014 ಮತ್ತು 2019ರಲ್ಲಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ಬಂದಿದ್ದ ಬಿಜೆಪಿಗೆ ಈ ಬಾರಿ ಅದರ ಅತಿ ಆತ್ಮವಿಶ್ವಾಸವೇ ಅಡ್ಡಿಯಾಯಿತೇನೋ. ಹಾಗಂತ, ಬಿಜೆಪಿ ತನ್ನ ಬಲ ಕಳೆದುಕೊಂಡಿದೆ ಅಂತೇನಲ್ಲ. ಉತ್ತರದ ಕೆಲ ರಾಜ್ಯಗಳಲ್ಲಿ ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗಳಿಸಿದ್ದರೂ, ರಾಜಧಾನಿ ದೆಹಲಿ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಎಲ್ಲ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಅಲ್ಲದೆ, ಒಡಿಶಾದಲ್ಲಿ ಇದೇ ಮೊದಲ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು, ಲೋಕಸಭೆಯಲ್ಲೂ ಈ ರಾಜ್ಯದಿಂದ ಸ್ಥಾನ ವೃದ್ಧಿಸಿಕೊಂಡಿದೆ. ಹಾಗಾಗಿ, ಆಡಳಿತ ವಿರೋಧಿ ಅಲೆಯ ವಾದವನ್ನು ಸಂಪೂರ್ಣವಾಗಿ ಒಪು್ಪವಂತಿಲ್ಲ. ಇಂಡಿ ಮೈತ್ರಿಕೂಟದಲ್ಲಿ ಹಲವು ಪಕ್ಷಗಳು ಒಂದಾಗಿ 230ರ ಗಡಿ ದಾಟಿದ್ದರೆ, ಬಿಜೆಪಿ ಏಕಾಂಗಿಯಾಗಿ 240ರ ಗಡಿ ದಾಟಿದೆ. ಸರ್ಕಾರ ರಚನೆಯ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ.
ಚುನಾವಣೆ ಎಂದರೆ ಹಾಗೆಯೇ. ಮತದಾರರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ನಿಖರವಾಗಿ ಹೇಳುವುದು ತುಂಬ ಕಷ್ಟ. ಹಾಗಾಗಿಯೇ, 2004ರಂತೆ ಈ ಬಾರಿ ಕೂಡ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಿವೆ. ಅದೇನಿದ್ದರೂ, ಮತದಾರರ ತೀರ್ವನವನ್ನು ಸ್ವೀಕರಿಸಿ, ಗೌರವಿಸುವುದು ಮುಖ್ಯ. ಎಲ್ಲಿ ತಪು್ಪಗಳಾಗಿವೆ, ಸುಧಾರಣೆಗಳ ದೃಷ್ಟಿಯಲ್ಲಿ ಏನು ಮಾಡಬೇಕು ಎಂಬುದನ್ನು ಆಯಾ ಪಕ್ಷಗಳು ಅವಲೋಕಿಸಿ ಅಳವಡಿಸಿಕೊಳ್ಳಬೇಕಾದ ಅಂಶ. ಆದರೆ, ಅಧಿಕಾರಕ್ಕೆ ಬರುವ ಹೊಸ ಸರ್ಕಾರ ಜನರ ಆಶೋತ್ತರ, ನಿರೀಕ್ಷೆಗಳಿಗೆ ಸ್ಪಂದಿಸುವುದನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ಹಣದುಬ್ಬರ, ನಿರುದ್ಯೋಗದಂಥ ಹಲವು ಜ್ವಲಂತ ಸಮಸ್ಯೆಗಳ ವಿರುದ್ಧ ಪರಿಣಾಮಕಾರಿ ಪರಿಹಾರ ಕಂಡುಹಿಡಿಯಬೇಕಿದೆ. ಯುವಕರ, ರೈತರ, ಮಹಿಳೆಯರ ಕನಸು, ಆಶಯಗಳನ್ನು ಸಾಕಾರಗೊಳಿಸುವ ಸಮರ್ಥ ಸರ್ಕಾರ ಅಸ್ತಿತ್ವಕ್ಕೆ ಬರುವಂತಾಗಲಿ. ಚುನಾವಣೆ ಮುಗಿದಿರುವುದರಿಂದ ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ಪೂರ್ಣವಿರಾಮ ಹಾಕಿ, ನಮ್ಮ ನಾಯಕರು, ಜನಪ್ರತಿನಿನಿಧಿಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸಲಿ.
ಡಿಕೆ ಸುರೇಶ್‌ ವಿರುದ್ಧ ಗೆಲುವಿನ ಸೀಕ್ರೆಟ್ ಬಿಚ್ಚಿಟ್ಟ ಡಾ.ಸಿ.ಎನ್‌. ಮಂಜುನಾಥ್‌!

ಸತತ ಮೂರನೇ ಬಾರಿಗೆ ಎನ್​​ಡಿಎ ಸರ್ಕಾರ ರಚಿಸಲಿದೆ: ಗೆಲುವು ಕೊಟ್ಟ ದೇಶವಾಸಿಗಳಿಗೆ ಮೋದಿ ಧನ್ಯವಾದ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + two =
Remember me
