ಬಸವನ ಬಾಗೇವಾಡಿ:ಮಹಿಳೆಯರನ್ನು ಗೌರವಿಸುವುದು ಇಡೀ ಸೃಷ್ಟಿಯನ್ನು ಗೌರವಿಸುವುದರ ಸಂಕೇತವಾಗಿದ್ದು,ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಗೌರವಿಸುವುದು ಪ್ರಮುಖವಾಗಿದೆ ಎಂದು ಶಹಾಪುರ ಮಠದ ಶ್ರೀ ಸೂಗೂರೇಶ್ವರ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಿಸಿದ್ದಾರೆ.ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಸುಕ್ಷೇತ್ರ ಉತ್ನಾಳ ಹಿರೇಮಠದ ಶ್ರೀಮಹಾಲಕ್ಷ್ಮಿ ದೇವಿ ವಾರ್ಷಿಕ ಜಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆಯರನ್ನು ಎಲ್ಲಿ ಗೌರವಿಸಲಾಗುತ್ತದೆಯೋ ಅಲ್ಲಿ ಭಗವಂತ ನೆಲೆಸಿರುತ್ತಾನೆ ಎಂಬ ಮಾತಿದೆ.ಅದರಂತೆ ಉತ್ನಾಳ ಜಾತ್ರೆಯಲ್ಲಿ ಪ್ರತಿವರ್ಷ ಸಾವಿರಾರು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.ಮಹಿಳೆಯರಿಗೆ ಉಡಿತುಂಬುವುದು ಎಂದರೆ ಜಗತ್ತಿನ ಸೃಷ್ಠಿಗೆ ಆಧಾರವಾಗಿರುವ ಗರ್ಭವನ್ನು ಗೌರವಿಸುವ ಪ್ರತೀಕ.ಪ್ರತಿಯೊಂದು ಜೀವಿ ಜನಿಸುವುದಕ್ಕೆ ಹೆಣ್ಣಿನ ಗರ್ಭ ಆಶ್ರಯವಾಗಿರುತ್ತದೆ.ಅಂತಹ ಗರ್ಭ(ಹೊಟ್ಟೆ)ಯಾವಾಗಲೂ ಸಮೃದ್ಧವಾಗಿರಬೇಕೆಂಬ ಕಾರಣಕ್ಕೆ ಮಹಿಳೆಯರಿಗೆ ಉಡಿ ತುಂಬುವ ಪರಿಕಲ್ಪನೆ ನಮ್ಮ ಸಂಸ್ಕೃತಿಯಲ್ಲಿದೆ ಎಂದು ಶ್ರೀಗಳು ವಿವರಿಸಿದರು.
ಸಮಾರಂಭದಲ್ಲಿ ಆಯುರ್ವೇದ ಎಂ.ಡಿ.ಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಡಾ.ಮಹಾಂತೇಶ ಹಿರೇಮಠ ಅವರಿಗೆ ಸುವರ್ಣ ಉಂಗುರ ತೊಡಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಂಧಗಿ ಸಾರಂಗಮಠದ ಶ್ರೀಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು,ನಾಗಣಸೂರು ಮಠದ ಶ್ರೀ ಶ್ರೀಕಂಠ ಶಿವಾಚಾರ್ಯ ಸ್ವಾಮಿಗಳು,ಉತ್ನಾಳ ಹಿರೇಮಠದ ಶ್ರೀಶಿವಪುತ್ರಯ್ಯ ಸ್ವಾಮಿಗಳು,ಕರಿಭಂಟನಾಳದ ಶ್ರೀಶಿವಕುಮಾರ ಸ್ವಾಮಿಗಳು,ಕಲಕೇರಿ ಶ್ರೀಗಳು,ಸಂಗಮೇಶ ಹಿರೇಮಠ,ಮಾತೋಶ್ರೀ ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.
ಸುಕ್ಷೇತ್ರ ಉತ್ನಾಳ ಹಿರೇಮಠದ ಇತಿಹಾಸ ಮತ್ತು ಪವಾಡಗಳ ಕುರಿತ ‘ಭಗವಚ್ಚಿಕಿತ್ಸೆ’ ಗ್ರಂಥದ ಇಂಗ್ಲಿಷ್ ಅನುವಾದದ ಕೃತಿ ‘ದಿ ಮಿರಾಕಲ್ ಆಪ್ ಉತ್ನಾಳ ಮಹಾಲಕ್ಷ್ಮಿ’ ಯನ್ನು ಸಿಂಧಗಿ ಶ್ರೀಗಳು ಬಿಡುಗಡೆಗೊಳಿಸಿದರು.ಪ್ರೊ.ಸಜ್ಜನ್ ಅವರು ಬರೆದ ಕನ್ನಡ ಕೃತಿಯು ಈಗಾಗಲೇ30ಸಾವಿರ ಪ್ರತಿಗಳು ಮಾರಾಟಗೊಂಡಿದ್ದಿ.ಬಾಗಲಕೋಟೆ ಬಸವೇಶ್ವರ ವಿದ್ಯಾಸಂಸ್ಥೆಯ ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ.ಮಲ್ಲಿಕಾರ್ಜುನ ಸಜ್ಜನ್ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.
ವಾರ್ಷಿಕ ಜಾತ್ರೆಯ ಅಂಗವಾಗಿ ದಿನಪೂರ್ತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಮಹಾಲಕ್ಷ್ಮಿ ದೇವಿಗೆ ರುದ್ರಾಭಿಷೇಕ,ಚಂಡಿಹೋಮ,ಕುಂಕುಮಾರ್ಚನೆ ಮಹಾಮಂಗಳಾರತಿ ನಡೆಯಿತು.ನಂತರ ಸಾವಿರಾರು ಮುತ್ತೈದೆಯರಿಗೆ ಉಡಿ ತುಂಬಲಾಯಿತು.ಆ ನಂತರ ಎಲ್ಲ ಭಕ್ತರಿಗೆ ಮಹಾ ಪ್ರಸಾದ ವಿತರಿಸಲಾಯಿತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 9 =
Remember me
