ಬೆಂಗಳೂರು:ಲಾಕ್​ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖರೀದಿ ಪ್ರಕ್ರಿಯೆ ಪುನಾರಂಭಿಸಲು ಸಹಕಾರ ಇಲಾಖೆ ಆದೇಶಿಸಿದೆ. ಸಾಮಾಜಿಕ ಅಂತರ ಕಾಪಾಡುವುದು ಸೇರಿ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವೆಂದು ಇಲಾಖೆ ಉಪ ಕಾರ್ಯದರ್ಶಿ ಆರ್.ನಾಗರಾಜ್ ಈ ಆದೇಶದಲ್ಲಿ ತಿಳಿಸಿದ್ದಾರೆ.
ಬೆಂಬಲ ಬೆಲೆಗೆ ತೊಗರಿ, ಕಡಲೆ ಕಾಳು, ಶೇಂಗಾ ಖರೀದಿಗೆ ಅನುಮತಿ ನೀಡಲಾಗಿದೆಯಾದರೂ ತಲಾ 10 ಕ್ವಿಂಟಾಲ್ ಖರೀದಿ ನಿರ್ಬಂಧ ಮುಂದು ವರಿಸಿರುವುದರಿಂದ ಯಾವುದೇ ಪ್ರಯೋಜನವಾಗದು ಎಂದು ರೈತರು ಅಪಸ್ವರ ಎತ್ತಿದ್ದಾರೆ.
ಮಂಡಳಿ ಕಾರ್ಯಪ್ರವೃತ್ತ: ಸಹಕಾರ ಇಲಾಖೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಕಾರ್ಯ ಪ್ರವೃತ್ತವಾಗಿದ್ದು, ಸೋಮವಾರ (ಏ.6) ದಿಂದ ಬೆಂಬಲ ಬೆಲೆಗೆ ತೊಗರಿ, ಕಡಲೆ ಕಾಳು ಖರೀದಿ ಕೇಂದ್ರ ಆರಂಭಿಸಲು ಸೂಚಿಸಿದ್ದು, ಪ್ರತಿದಿನ ಬೆಳಗ್ಗೆ ಹಾಗೂ ಮಧ್ಯಾಹ್ನ ತಲಾ 25 ರೈತರಿಂದ ಮಾತ್ರ ಖರೀದಿ ಸೇರಿ 9 ಷರತ್ತುಗಳನ್ನು ವಿಧಿಸಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಬೇಡಿಕೆ ಅಪಾರ, ಖರೀದಿ ಸ್ವಲ್ಪ: ಬೆಂಬಲ ಬೆಲೆಯಿಂದ ತೊಗರಿ (6,100) ಹಾಗೂ ಕಡಲೆಗೆ (4,100) ಮುಕ್ತ ಮಾರುಕಟ್ಟೆಗಿಂತ ಹೆಚ್ಚಿನ ಬೆಲೆ ಸಿಗುವ ಕಾರಣ ರೈತರ ಬೇಡಿಕೆ ಹೆಚ್ಚಿದ್ದು, ತಲಾ 10 ಕ್ವಿಂಟಾಲ್ ಎಂಬ ನಿರ್ಬಂಧದ ಪರಿಣಾಮ ಮಾರುಕಟ್ಟೆ ಬೆಲೆ ಮತ್ತೆ ಕುಸಿದಿದೆ. ಅಲ್ಲದೆ, ರೈತರಿಗಿಂತ ಖರೀದಿಸಿ ದಾಸ್ತಾನು ಇಟ್ಟುಕೊಂಡವರಿಗೆ ನಿರ್ಬಂಧ ವರವಾಗಿದೆ.
ತೊಗರಿ ಬೆಳೆಗಾರರ ಅಹವಾಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿ, ತಲಾ 20 ಕ್ವಿಂಟಾಲ್ ಖರೀದಿಗೆ ಭರವಸೆ ನೀಡಿದ್ದರು. ಆದರೆ, ರಾಷ್ಟ್ರೀಯ ಕೃಷಿ ಸಹಕಾರ ಒಕ್ಕೂಟ ( ನಾಫೆಡ್) ಈ ಪ್ರಸ್ತಾವನೆಯನ್ನು ತಳ್ಳಿಹಾಕಿದೆ.
ಷರತ್ತುಗಳು
ಖರೀದಿ ಕೇಂದ್ರಗಳಲ್ಲಿ ರೈತರಿಗಾಗಿ ನೀರು, ಸ್ಯಾನಿಟೈಸರ್ ವ್ಯವಸ್ಥೆ ಮಾಡಿ ಅವುಗಳ ಬಳಕೆ ತಿಳಿಸುವುದು, ಈ ಕೇಂದ್ರಗಳ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಕಡ್ಡಾಯ.
ರೈತರು, ಸಿಬ್ಬಂದಿ, ಹಮಾಲರಿಗೆ ಮಾಸ್ಕ್ ಕಡ್ಡಾಯ, ರೈತರ ಸಂಖ್ಯೆ ಹೆಚ್ಚಾಗಿ ಅಂತರ ಕಾಪಾಡಲು ವಿಫಲವಾದರೆ ಪೊಲೀಸರ ನೆರವು ಪಡೆಯುವುದು.
ಖರೀದಿ ಕೇಂದ್ರ ಮತ್ತು ಸುತ್ತಮುತ್ತಲಿನ ಯಾವುದೇ ಹಳ್ಳಿಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಕಂಡು ಬಂದರೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಖರೀದಿ ಕೇಂದ್ರ ಸ್ಥಗಿತಗೊಳಿಸುವುದು.
ತೊಗರಿ ಈಗಾಗಲೇ ನೋಂದಾಯಿತ ರೈತರಿಂದ ನಿಗದಿತ ಪ್ರಮಾಣದ ತೊಗರಿ ಮಾತ್ರ ಖರೀದಿಸಬೇಕು, ಹೆಚ್ಚಿಗೆ ಖರೀದಿಸುವಂತಿಲ್ಲ.
ಕಡಲೆ ಕಾಳು ಖರೀದಿಗೆ ಏ.12ರವರೆಗೆ ನೋಂದಣಿ, ಮುಂದಿನ ಆದೇಶ ತನಕ ಖರೀದಿ.
ಮೃತ್ಯುಂಜಯ ಕಪಗಲ್
ಮಹಾರಾಷ್ಟ್ರ ಸಿಎಂ ಮನೆ ಬಾಗಿಲಿಗೆ ಬಂತು ಕೋವಿಡ್​ 19, ಸಿಬ್ಬಂದಿ ಚಹಾ ಕುಡಿಯುವ ಅಂಗಡಿ ಮಾಲಿಕನಿಗೆ ಕರೊನಾ ಸೋಂಕು

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 × 4 =
Remember me
