ಚಂದ್ರಶೇಖರಪಾಟೀಲ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ‘ಪುಸ್ತಕ ಸಂತೆ’ಯನ್ನು ಪ್ರತಿ ಭಾನುವಾರ ಬೆಂಗಳೂರಿನ ಪರಿಷತ್ತಿನ ಅಂಗಳದಲ್ಲಿ ಏರ್ಪಡಿಸಿದರು. ಇದೊಂದು ವಿನೂತನ ಯೋಜನೆಯಾಗಿತ್ತು. ಬಿಡಿ ಪ್ರಕಾಶಕರಿಗೆ ತಾವು ಪ್ರಕಟಿಸಿದ ಪುಸ್ತಕ ಮಾರಲು ಮತ್ತು ಓದುಗರಿಗೆ ತಮಗೆ ಬೇಕಾದ ಪುಸ್ತಕ ಕೊಳ್ಳಲು ಅನುಕೂಲವಾದ ಒಂದು ವೇದಿಕೆಯಾಗಿ ಕನ್ನಡದಲ್ಲಿ ಪುಸ್ತಕ ಮಾರುವುದು ಹೇಗೆ ಮತ್ತು ಕೊಳ್ಳುವುದು ಹೇಗೆ ಎಂಬ ಸಮಸ್ಯೆಗೆ ಉತ್ತಮ ಪರಿಹಾರವಾಗಿತ್ತು.
ಹಂತಹಂತವಾಗಿ ರಾಜ್ಯದ ಪ್ರತಿ ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇರುವ ಕಾರ್ಯಾಲಯದ ಅಂಗಳದಲ್ಲಿ ಇಂತಹ ಪುಸ್ತಕ ಸಂತೆ ಏರ್ಪಡಿಸುವ ಯೋಜನೆ ಇತ್ತೇನೋ. ಆದರೆ ಅವರ ಅವಧಿ ಮುಗಿದ ನಂತರ ಬೆಂಗಳೂರಿನಲ್ಲೇ ಈ ಸಂತೆ ನಿಂತು ಹೋಯಿತು. ಈಗ ಪುಸ್ತಕ ಕೊಳ್ಳುವವರಿಲ್ಲ, ಓದುವ ಹವ್ಯಾಸವೇ ಕಡಿಮೆಯಾಗುತ್ತಿದೆ ಎನ್ನುವ ವಿಷಾದಮಾತು ಎಲ್ಲಡೆಯಲ್ಲೂ ಪ್ರತಿಧ್ವನಿಸಿ ಅದನ್ನು ಒಪ್ಪಿಕೊಳ್ಳುವ ಮನೋಸ್ಥಿತಿ ನಿರ್ವಣವಾಗಿದೆ.
ಪ್ರಕಟವಾದ ಪುಸ್ತಕಗಳನ್ನು ಪರಿಷತ್ ಕೊಂಡು ತನ್ನದೇ ಆದ ಮಾರಾಟ ವ್ಯವಸ್ಥೆ ಮಾಡಿದರೆ ಅದು ಲೇಖಕರಿಗೆ, ಪ್ರಕಾಶಕರಿಗೆ ಪ್ರೋತ್ಸಾಹಿಸುವ ಮಾರ್ಗವೂ ಕನ್ನಡಿಗರಿಗೆ ಓದುವ ಹವ್ಯಾಸ ಬೆಳೆಸುವಲ್ಲಿಯೂ ಸಹಕಾರಿ ಆಗುವುದು. ಇದಕ್ಕೆ ಬೇಕಾದ ಅರ್ಥಿಕ ಸೌಲಭ್ಯ ಇಲ್ಲದಿದ್ದರೆ ಕಡೆಯ ಪಕ್ಷ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕಾರ್ಯಾಲಯ ಇರುವ ನಗರಗಳಲ್ಲಿ ಪುಸ್ತಕ ಸಂತೆಗೆ ಅನುವು ಮಾಡಿಕೊಟ್ಟರೆ ಅನುಕೂಲ. ಪರಿಷತ್ತಿನ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸಿದರೆ ಕನ್ನಡ ಪುಸ್ತಕ ಓದುವಿಕೆಯ ಹವ್ಯಾಸ ಪಳವಳಿಕೆಯಾಗದೆ ಮತ್ತೆ ದಷ್ಟಪುಷ್ಟವಾಗಿ ಬೆಳದೀತು. ಹಿಂದಿನಂತೆ ಶಾಲೆಗಳಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ನೀಡುವ ಬಹುಮಾನಗಳನ್ನು ಪುಸ್ತಕರೂಪದಲ್ಲಿ ಕೊಡುವಂಥ ವಾತಾವರಣ ಸೃಷ್ಟಿಸುವತ್ತ ಪರಿಷತ್ ಗಮನ ಹರಿಸಲಿ.
| ಸತ್ಯಬೋಧ, ಬೆಂಗಳೂರು
ಕರೊನಾ ವೈರಸ್​ಗೆ ಆಯುರ್ವೇದದಲ್ಲಿದ್ಯಾ ಪರಿಹಾರ..?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
