ಬೆಂಗಳೂರು:ಕರೊನಾ ಕಾರಣದಿಂದಾಗಿ ಗುಂಪುಗೂಡಿ ಹೊಸ ವರ್ಷದ ಸಂಭ್ರಮ ಆಚರಿಸುವುದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಹೀಗಾಗಿ ಮನೆಯಲ್ಲೇ ಇದ್ದು 2021ನ್ನು ಸ್ವಾಗತಿಸುವುದು ಜನತೆಗೆ ಅನಿವಾರ್ಯವಾಗಲಿದೆ. ‘ಕರೊನಾ ಹಿನ್ನೆಲೆಯಲ್ಲಿ ಈ ವರ್ಷ ಶೋಕಾಚರಣೆ ಮಾಡಬೇಕೇ ಹೊರತು ಸಂಭ್ರಮಾಚರಣೆಯನ್ನಲ್ಲ. ಜನತೆ ಸಹಕರಿಸಬೇಕು’ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮತ್ತು ಕಂದಾಯ ಸಚಿವ ಆರ್.ಅಶೋಕ್ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
2020ರಲ್ಲಿ ಕರೊನಾಗೆ ನೂರಾರು ಜನ ಬಲಿಯಾಗಿದ್ದಾರೆ. ಈ ವರ್ಷ ಎಲ್ಲರಿಗೂ ಶೋಕಾಚರಣೆಯಂತಾಗಿದೆ. ಹಾಗಾಗಿ ಈ ಬಾರಿಯ ಹೊಸವರ್ಷ ಆಚರಿಸುವ ಅಗತ್ಯ ಏನಿದೆ ಎಂದು ಸುಧಾಕರ್ ಪ್ರಶ್ನಿಸಿದರು. ಕರೊನಾ ಎರಡನೇ ಅಲೆ ತಟ್ಟುವ ಆತಂಕ ಇರುವ ಹಿನ್ನೆಲೆಯಲ್ಲಿ ಎರಡು ತಿಂಗಳು ಸಾಮಾಜಿಕ ಕಾರ್ಯಕ್ರಮ, ಮದುವೆ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗುತ್ತದೆ ಎಂಬ ಸುಳಿವು ನೀಡಿದರು.
ಜ.1 ಹೊಸ ವರ್ಷವಲ್ಲ:ಹಿಂದುಸ್ಥಾನದಲ್ಲಿ ಜ.1 ಹೊಸ ವರ್ಷ ಅಲ್ಲ. ಹೊಸ ವರ್ಷಾಚರಣೆ ನೆಪದಲ್ಲಿ ಜನ ಸೇರುವಂತಿಲ್ಲ. ಪಾರ್ಟಿಗಳನ್ನು ನಿಮ್ಮ ನಿಮ್ಮ ಮನೆಗಳಲ್ಲಿ ಮಾಡಿಕೊಳ್ಳಿ. ಕರೊನಾ ನಿಯಮಗಳನ್ನು ಉಲ್ಲಂಘಿಸಿದರೆ ಶಿಕ್ಷೆ ನಿಶ್ಚಿತ ಎಂದು ಸಚಿವ ಅಶೋಕ್ ಎಚ್ಚರಿಸಿದರು.
200 ಜನ ಸೀಮಿತ:ಹೊಸ ವರ್ಷ ಆಚರಣೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ಧಾರ್ವಿುಕ ಕಾರ್ಯಕ್ರಮ, ಮದುವೆ ಕಾರ್ಯ ನಿರ್ಬಂಧ ಮುಂದು ವರಿದಿದೆ. ಡಿ. 20ರಿಂದ ಜ.2ರವರೆಗೆ ನಡೆಯಲಿರುವ ಸಭೆ, ಸಮಾರಂಭಕ್ಕೆ 200 ಜನರು ಸೀಮಿತ ಎಂದು ಸುಧಾಕರ್ ಹೇಳಿದರು.
ಉಲ್ಲಂಘಿಸಿದರೆ ಶಿಕ್ಷೆ:ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಹೊಸ ವರ್ಷಾಚರಣೆಗೆ ಸಂಪೂರ್ಣ ಬ್ರೇಕ್ ಹಾಕಲಾಗುತ್ತದೆ. ಈ ವಿಚಾರವನ್ನು ಈಗಾಗಲೇ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಎಲ್ಲೂ ಆಚರಣೆಗೆ ಅವಕಾಶವಿಲ್ಲ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − ten =
Remember me
