ಬೆಂಗಳೂರು:ನಿವೃತ್ತ ಉಪ ತಹಸೀಲ್ದಾರ್​ವೊಬ್ಬರನ್ನ ರಾಜ್ಯ ರಾಜಧಾನಿಯಲ್ಲಿ ಹಾಡಹಗಲೇ ಕತ್ತುಸೀಳಿ ಕೊಂದ ದುಷ್ಕರ್ಮಿ ರಾಮನಗರದ ಬಿಡದಿ ಬಳಿ ಶವ ಸುಟ್ಟಿ ಹಾಕಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ವಿವಿ ಪುರಂ ಪೊಲೀಸ್​ ಠಾಣಾ ವ್ಯಾಪ್ತಿಯ ಪಾರ್ವತಿ ಪುರಂನ ರಾಜೇಶ್ವರಿ ಕೊಲೆಯಾದವರು. ನಿವೃತ್ತ ಉಪ ತಹಸೀಲ್ದಾರ್ ರಾಜೇಶ್ವರಿ ಪಾರ್ವತಿ ಪುರಂನಲ್ಲಿ 3 ಅಂತಸ್ತಿನ ಮನೆ ಹೊಂದಿದ್ದು, ಇದರಲ್ಲಿ ವಾಸವಿದ್ದ ಬಾಡಿಗೆದಾರನೇ ಕೊಲೆಗಾರ ಎಂಬ ಸತ್ಯ ಬಯಲಾಗಿದೆ.ಇದನ್ನೂ ಓದಿರಿತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

ಬೆಂಗಳೂರಿನ ರೆವಿನ್ಯೂ ಇಲಾಖೆಯಲ್ಲಿ ಉಪ ತಹಶಿಲ್ದಾರ್ ಆಗಿ ಕೆಲಸ ಮಾಡ್ತಿದ್ದ ರಾಜೇಶ್ವರಿ  ಒಂದು ವರ್ಷದ ಹಿಂದಷ್ಟೇ ನಿವೃತ್ತಿ ಹೊಂದಿದ್ದರು. ಬೆಂಗಳೂರಿನ ಕೊರಮಂಗಲದಲ್ಲಿ ಮಗನ ಜೊತೆ ವಾಸವಾಗಿದ್ದರು. ವಿವಿ ಪುರಂನ ಪಾರ್ವತಿ ಪುರಂನಲ್ಲಿ ರಾಜೇಶ್ವರಿ ಅವರಿಗೆ ಸೇರಿದ ಮೂರು ಅಂತಸ್ತಿನ ಮನೆಯಲ್ಲಿ 2 ಮತ್ತು 3ನೇ ಮಹಡಿಯಲ್ಲಿ ಅಲಿಂ ಪಾಷಾ, ಈತನ ಅಕ್ಕ, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಎರಡು ವರ್ಷದಿಂದ ಬಾಡಿಗೆಗೆ ವಾಸವಿದ್ದರು. ಆಲಿಂ ಪಾಷ ಆಟೋ ಡ್ರೈವರ್ ಆಗಿದ್ದ. 3ನೇ ಮಹಡಿಯಲ್ಲಿ ಆಲಿಂ ಪಾಷ ಮತ್ತು ಅಕ್ಕ ಇದ್ದರು. 2ನೇ ಮಹಡಿಯ ಮನೆಯಲ್ಲಿ ಚಿಕ್ಕಪ್ಪ ಸಾದಿಕ್ ಪಾಷ ಮತ್ತು ಪತ್ನಿ ಇದ್ದರು. 7 ತಿಂಗಳಿಂದ ಬಾಡಿಗೆ ಕಟ್ಟದೆ ಆಲಿಂ ಪಾಷ ಸತಾಯಿಸುತ್ತಿದ್ದ.
ಫೆ.3ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಾಡಿಗೆ ಹಣ ಸಂಗ್ರಹಿಸಲು ಮನೆ ಬಳಿಗೆ ನಿವೃತ್ತ ತಹಸೀಲ್ದಾರ್ ರಾಜೇಶ್ವರಿ ಹೋಗಿದ್ದರು. ಬಾಡಿಗೆದಾರ ಆಲಿಂ ಪಾಷ ಹಣ ಕೊಡದ್ದಾಗ ಪೊಲೀಸ್ ಕಂಪ್ಲೇಂಟ್ ಕೊಡುವುದಾಗಿ ಮನೆಯ ಮಾಲಕಿ ಎಚ್ಚರಿಸಿದ್ದರು. ಗಾಂಜಾ ಮತ್ತಿನಲ್ಲಿದ್ದ ಆಲಿಂ ಪಾಷ, ಕುಪಿತಗೊಂಡು ರಾಜೇಶ್ವರಿಯ ಕತ್ತು ಕೊಯ್ದು ಕೊಂದಿದ್ದಾನೆ.
ಕೂಡಲೇ ಚಿಕ್ಕಪ್ಪ ಹಾಗೂ ಸ್ನೇಹಿತನಿಗೆ ಕರೆ ಮಾಡಿ ಕರೆಸಿಕೊಂಡ ಆರೋಪಿ, ಮನೆ ಮಾಲಕಿಯ ಶವವನ್ನು ಆಟೋದಲ್ಲಿ ಹಾಕಿಕೊಂಡು ಹೋಗಿದ್ದಾರೆ. ಗಿರಿನಗರ ಬಿಡಿಎ ಪಾರ್ಕನಲ್ಲಿ ರಾಜೇಶ್ವರಿಯ ಮೊಬೈಲ್ ಅನ್ನು ಎಸೆದ ಆರೋಪಿಗಳು, ಆಟೋದಲ್ಲಿ ಶವ ತೆಗೆದುಕೊಂಡು ಬಿಡದಿಗೆ ಹೋಗಿದ್ದಾರೆ. ಅಲ್ಲೇ ರಾಜೇಶ್ವರಿಯ ಶವಕ್ಕೆ ಪೆಟ್ರೋಲ್​ ಸುರಿದು ಸುಟ್ಟುಹಾಕಿದ್ದಾರೆ.
ರಾಜೇಶ್ವರಿ ಕಾಣಿಸುತ್ತಿಲ್ಲ ಎಂದು ಕುಟುಂಬಸ್ಥರು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಬಾಡಿಗೆದಾರರನ್ನು ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಆರೋಪಿ ಆಲಿಂ ಪಾಷನನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

ಶೃಂಗೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಸಾಮೂಹಿಕ ಅತ್ಯಾಚಾರ!

ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

ಎಚ್​ಡಿಕೆ ಪರ ಯಡಿಯೂರಪ್ಪ ಬ್ಯಾಟಿಂಗ್​! ಸಿದ್ದರಾಮಯ್ಯಗೆ ಮಾತಿನಲ್ಲೇ ಚಾಟಿ ಬೀಸಿದ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
