ಬೆಂಗಳೂರು:ಕರೊನಾ ವೈದ್ಯ ಕ್ಷೇತ್ರಕ್ಕೆ ಸವಾಲೊಡ್ಡಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದವರೆಲ್ಲರನ್ನೂ ಜನ ಕರೊನಾ ವಾರಿಯರ್ಸ್ ಎಂದು ಕೊಂಡಾಡುತ್ತಿದ್ದಾರೆ. ಇನ್ನೊಂದೆಡೆ, ಸರ್ಕಾರಿ ವಲಯದ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ತಜ್ಞ ವೈದ್ಯರ ಬಹುದೊಡ್ಡ ಕೊರತೆ ಎದುರಾಗಿದೆ. ದೇಶ ಸಂಕಷ್ಟ ಪರಿಸ್ಥಿತಿಯಲ್ಲಿದೆ ಕೈಜೋಡಿಸಿ ಎಂಬ ಕರೆಗೆ ಬಹುತೇಕ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ನಿವೃತ್ತಿ ಹೊಂದಿದವರು, ನಿವೃತ್ತಿ ಹೊಂದಲಿರುವವರೂ ಸರ್ಕಾರಿ ಸೇವೆ ಸಹವಾಸವೇ ಸಾಕು ಎಂದು ಸಲಾಂ ಹೊಡೆದಂತಿದೆ.
ರಾಜ್ಯದಲ್ಲಿ 2,359 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 1,437 ಆಸ್ಪತ್ರೆಗಳಲ್ಲಿ ಕಾಯಂ ವೈದ್ಯರಿದ್ದಾರೆ. 236 ಆಯುಷ್ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ. ಸುಮಾರು 2 ಸಾವಿರ ವೈದ್ಯರ ಕೊರತೆ ಇದ್ದು, ಇನ್ನೆರಡು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದು ವಿಧಾನಮಂಡಲದಲ್ಲಿ ಆರೋಗ್ಯ ಸಚಿವರು ನೀಡಿದ ಭರವಸೆ ಇನ್ನೂ ಈಡೇರಿಲ್ಲ.
ಈ ಮೊದಲು ವೈದ್ಯರ ನೇಮಕಾತಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆಯುತ್ತಿತ್ತು. ಪ್ರಕ್ರಿಯೆ ವಿಳಂಬ ಕಾರಣಕ್ಕೆ ನೇರ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ. ಆದರೂ ವೈದ್ಯರನ್ನು ಆಕರ್ಷಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಕರೊನಾ ನಿಯಂತ್ರಣ ಹಿನ್ನೆಲೆಯಲ್ಲೇ ವೈದ್ಯರ ವಿಶೇಷ ನೇಮಕಾತಿಗೆ ಸರ್ಕಾರ ಮುಂದಾದರೂ ನಿರೀಕ್ಷಿತ ಫಲ ಕೊಟ್ಟಿಲ್ಲ. ಬರೀ ತಜ್ಞ ವೈದ್ಯ, ವೈದ್ಯರ ಹುದ್ದೆ ಮಾತ್ರವಲ್ಲ, ಫಾರ್ವಸಿಸ್ಟ್ ಗಳು, ಪ್ರಯೋಗಾಲಯ ತಜ್ಞರು, ಕಿರಿಯ ಆರೋಗ್ಯ ಸಹಾಯಕ/ಸಹಾಯಕಿಯರ ದೊಡ್ಡ ಪ್ರಮಾಣದ ಕೊರತೆಯನ್ನು ಸರ್ಕಾರಿ ಆಸ್ಪತ್ರೆಗಳು ಎದುರಿಸುತ್ತಿವೆ.
ಸರ್ಕಾರಕ್ಕೆ ತಲೆಬಿಸಿ:ಜಿಲ್ಲಾ ಮಟ್ಟದಲ್ಲಿ ಖಾಲಿ ಹುದ್ದೆ ಭರ್ತಿಗೆ ಅನೇಕ ಸಲ ಅರ್ಜಿ ಆಹ್ವಾನಿಸಿದರೂ, ಸರ್ಕಾರಿ ವೈದ್ಯರಾಗಲು ಯಾರೂ ಆಸಕ್ತಿ ತೋರುತ್ತಿಲ್ಲ. ವೇತನ ಹೆಚ್ಚಿಸಿದರೂ ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಕಡೆಗೆ ಅನೇಕ ವೈದ್ಯರು ಮುಖ ಮಾಡುತ್ತಿರುವುದು ಸರ್ಕಾರಕ್ಕೆ ತಲೆಬಿಸಿ ತಂದೊಡ್ಡಿದೆ. ಪ್ರತಿ ವರ್ಷ ಆರೋಗ್ಯ ಇಲಾಖೆಯಲ್ಲಿ 500-600 ವೈದ್ಯರು, ಸಾವಿರಾರು ಅರೆ ವೈದ್ಯಕೀಯ ಸಿಬ್ಬಂದಿ ನಿವೃತ್ತರಾಗುತ್ತಿದ್ದಾರೆ. ಆದರೆ, ಹೊಸ ನೇಮಕ ಮಾತ್ರ ಕ್ಷೀಣಿಸಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ಗುರುತರ ಪರಿಣಾಮ ಬೀರಲಿದೆ ಎಂದು ವೈದ್ಯಕೀಯ ವಲಯ ಆತಂಕ ವ್ಯಕ್ತಪಡಿಸಿದೆ.
ಸಂಬಳ ವಿಚಾರ ಸ್ಪಷ್ಟವಿಲ್ಲ:ಮಾರ್ಚ್ 31ಕ್ಕೆ 50-60 ವೈದ್ಯರು ನಿವೃತ್ತರಾಗಿದ್ದಾರೆ. ಗುರುವಾರ (ಏ.30) ಕೂಡ 50-60 ಮಂದಿ ನಿವೃತ್ತಿ ಹೊಂದಿದ್ದಾರೆ. ಸೇವೆ ಮುಂದುವರಿಸಿದರೆ, ಕನ್ಸಾಲಿಡೇಟ್ ವೇತನ ಕೊಡುವುದೋ? ಎಷ್ಟು? ಎಂಬ ಬಗ್ಗೆ ಸರ್ಕಾರ ನಿಖರ ಮಾಹಿತಿ ನೀಡಿಲ್ಲ. ಈ ಸಂಬಂಧಿತ ಪತ್ರ ಮಂಗಳವಾರ ಆರೋಗ್ಯ ಇಲಾಖೆಯಿಂದ ಸರ್ಕಾರಕ್ಕೆ ರವಾನೆಯಾಗಿದೆ. ಸಂಬಳ, ಭತ್ಯೆ ವಿಚಾರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದೆ ಇರುವುದೂ ವೈದ್ಯರು ಮರುಸೇರ್ಪಡೆಗೆ ಮನಸ್ಸು ಮಾಡದಿರಲು ಪ್ರಮುಖ ಕಾರಣ ಎನ್ನಲಾಗಿದೆ.
ಬೆಂಗಳೂರು ಯಾರಿಗೂ ಬೇಡ!:ಕೋವಿಡ್-19 ತುರ್ತು ಪರಿಸ್ಥಿತಿ ಹಿನ್ನೆಲೆ ವಯೋನಿವೃತ್ತಿ ಹೊಂದಿರುವ ಆರೋಗ್ಯ ಇಲಾಖೆಯ ವೈದ್ಯಕೀಯ, ಅರೆ ವೈದ್ಯಕೀಯ, ಅದಕ್ಕೆ ಪೂರಕವಾಗಿರುವ ಕ್ಲಿನಿಕಲ್ ಹಾಗೂ ನಾನ್ ಕ್ಲಿನಿಕಲ್ ಸಿಬ್ಬಂದಿ ಸೇವೆಯನ್ನು 3 ತಿಂಗಳ ಅವಧಿಗೆ ಅಂದರೆ ಜೂ.30ರವರೆಗೆ ವಿಸ್ತರಿಸಲಾಗಿದೆ. ಏಪ್ರಿಲ್ 2020ರಲ್ಲಿ ವಯೋನಿವೃತ್ತಿ ಹೊಂದುವವರ ಸೇವೆಯನ್ನೂ ವಿಸ್ತರಿಸಿ ಅಧಿಸೂಚನೆ ಹೊರಡಿಸಲಾಗಿದೆ. ಇದುವರೆಗೂ ಮೂರು ಮತ್ತೊಂದು ಸಂಖ್ಯೆಯ ವೈದ್ಯರು ಮಾತ್ರ ಸರ್ಕಾರಕ್ಕೆ ಸಮ್ಮತಿ ಪತ್ರ ಕೊಟ್ಟಿದ್ದಾರೆ. ವಿಪರ್ಯಾಸವೆಂದರೆ, ಬೆಂಗಳೂರಿನಲ್ಲಿ ಒಬ್ಬರೇ ಒಬ್ಬರು ಮುಂದೆ ಬಂದಿಲ್ಲ!
| ವಿಲಾಸ್​ ಮೇಲಗಿರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + twelve =
Remember me
