ಬೆಂಗಳೂರು:ನಿವೃತ್ತ ಜಂಟಿ ಮುಖ್ಯ ಚುನಾವಣಾಧಿಕಾರಿ ನೊಣವಿನಕೆರೆ ಕ್ಷೇತ್ರಪಾಲ್ ಅವರು ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ತಿಪಟೂರು ತಾಲೂಕಿನ ನೊಣವಿನಕೆರೆಯವರಾದ ಅವರು ಮೂಲತಃ ಸಚಿವಾಲಯ ಅಧಿಕಾರಿಯಾಗಿದ್ದರು. ಸರ್ಕಾರದಲ್ಲಿ ಸೇವಾ ನಿಯಮಗಳ ಬಗ್ಗೆ ನಿಖರವಾಗಿ ಮಾತನಾಡುತ್ತಿದ್ದ ಅವರು ಅನೇಕ ಸಮಸ್ಯೆಗಳಿಗೂ ಪರಿಹಾರ ಕಂಡು ಹಿಡಿದಿದ್ದರು. ಸೇವಾ ನಿಯಮಗಳಿಗೆ ಸಂಬಂಧಿಸಿದಂತೆ ನಾಲ್ಕು ಪುಸ್ತಕಗಳನ್ನು ಬರೆದಿದ್ದರು.
ಸಚಿವಾಲಯ ತರಬೇತಿ ಸಂಸ್ಥೆಯ ನಿರ್ದೇಶಕರಾಗಿದ್ದ ಅವರು, ಸಚಿವಾಲಯ ನೌಕರರ ಸಂಘದ ಪದಾಧಿಕಾರಿಯೂ ಆಗಿ ಕೆಲ ಸಮಯ ಸೇವೆ ಸಲ್ಲಿಸಿದ್ದರು. ಪ್ರಾಮಾಣಿಕ ಅಧಿಕಾರಿಯಾಗಿದ್ದರು. ರಾಜ್ಯದ ಜಂಟಿ ಮುಖ್ಯ ಚುನಾವಣಾಧಿಕಾರಿಯಾಗಿ ಅನೇಕ ಚುನಾವಣೆಗಳನ್ನು ನಡೆಸಿದ್ದರು. ಮೂರು ವರ್ಷದ ಹಿಂದೆ ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವಯೋಸಹಜ ಕಾರಣಗಳಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿಯವರ ಹತ್ತಿರದ ಸಂಬಂಧಿ ಕೋವಿಡ್‌ಗೆ ಬಲಿ; ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲೇ ಕೊನೆಯುಸಿರು..

ವಿಧಾನಸಭಾಧ್ಯಕ್ಷ-ಸಭಾಪತಿಗೂ ಕರೊನಾ ಸೋಂಕು: ಹೊರಟ್ಟಿ ಕಿಮ್ಸ್‌ಗೆ ದಾಖಲು, ಕಾಗೇರಿ ಮನೆಯಲ್ಲೇ ಕ್ವಾರಂಟೈನ್..

ಮನೆ ಮುಂದೆ ಕಸ ಗುಡಿಸಿಲ್ಲ, ರಂಗೋಲಿ ಬಿಡಿಸಿಲ್ಲ ಎಂದರೆ ಹುಷಾರು!; ಈ ಕಳ್ಳ ‘ಚಪಾತಿ-ಮೀನು’ಗಳಿಗೆ ಇದೇ ನಿಸೂರು..!!!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × three =
Remember me
