ಚಿಕ್ಕಬಳ್ಳಾಪುರ:ಬೀದಿ ಬೀದಿಯಲ್ಲಿ ಚಿಂದಿ ಆಯುತ್ತ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದ ನಿವೃತ್ತ ಸಬ್​ಇನ್​ಸ್ಪೆಕ್ಟರ್​ ಬಾಳಿಗೆ ಆಸರೆಯಾಗುವ ಮೂಲಕ ಪೊಲೀಸ್​ ಇಲಾಖೆ ಮಾನವೀಯತೆ ಮೆರೆದಿದೆ.
ಮಧುಸೂದನ್​ ರಾವ್​ ಸಂಕಷ್ಟದಲ್ಲಿದ್ದ ನಿವೃತ್ತ ಸಬ್​ ಇನ್​ಸ್ಪೆಕ್ಟರ್​. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಮಂಚೇನಹಳ್ಳಿ, ಚಿಂತಾಮಣಿ, ಕೋಲಾರ ಜಿಲ್ಲೆಯ ಗಲ್​ಪೇಟೆ, ರಾಯಲ್​ಪಾಡ್​, ಮಾಸ್ತಿ, ಮಾಲೂರು ಮತ್ತು ನಗರ ಠಾಣೆ ಸೇರಿ ವಿವಿಧೆಡೆ ಕಾರ್ಯ ನಿರ್ವಹಿಸಿದ್ದರು. ನಿವೃತ್ತಿ ಬಳಿಕ ವಿಶ್ರಾಂತಿಯ ಜೀವನ ನಡೆಸಬೇಕು ಎಂದುಕೊಳ್ಳುವಷ್ಟರಲ್ಲಿ ಮಡದಿಯ ಸಾವು ಅಘಾತಕ್ಕೀಡು ಮಾಡಿದೆ. ಕುಟುಂಬಸ್ಥರ ನಡುವೆ ಹೊಂದಾಣಿಕೆ ಕಷ್ಟವಾದಾಗ ಖಿನ್ನತೆಗೊಳಗಾಗಿ ಮನೆಯಿಂದ ಹೊರ ಬಂದ ಮಧುಸೂದನ್​ ರಾವ್​, ಹಲವು ವರ್ಷ ಎಲ್ಲೆಂದರಲ್ಲಿ ಸುತ್ತಾಡಿ ಭಿಕ್ಷೆ ಬೇಡುತ್ತಾ.. ಚಿಂದಿ ಆಯುತ್ತ ಹಸಿವು ನೀಗಿಸಿಕೊಳ್ಳುತ್ತಿದ್ದರು.
ಪೊಲೀಸ್​ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ರಸ್ತೆಯಲ್ಲಿ ಭಿಕ್ಷುಕನಂತೆ ಅಲೆಯುತ್ತಿರುವುದನ್ನು ಕಂಡ ಚಿಂತಾಮಣಿ ಪೊಲೀಸರು ಅವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಕುರುಚಲ ಗಡ್ಡ ಮತ್ತು ತಲೆಗೂದಲನ್ನು ತೆಗೆಸಿ, ಹೊಸ ಬಟ್ಟೆ ಕೊಡಿಸಿದ್ದಾರೆ. ಜತೆಗೆ ಅತನ ಹೊಸ ಬದುಕಿಗೆ ಆಸರೆಯಾಗಲು ಮುಂದಾಗಿದ್ದು, ಸಿಬ್ಬಂದಿಯ ಸೇವೆಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್​ ಕುಮಾರ್​ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಹ ಸಿಬ್ಬಂದಿಯ ನೆರವಿನಿಂದ ಕೊಂಚ ಸಮಾಧಾನವಾಗಿರುವ ಮಧುಸೂಧನ್​ ರಾವ್,​ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬಂದು ಹೊಸ ಜೀವನ ನಡೆಸುವುದಾಗಿ ಆತ್ಮವಿಶ್ವಾಸದಿಂದ ಹೇಳಿರುವುದು ಚಿಂತಾಮಣಿ ಪೊಲೀಸರ ಶ್ರಮ, ಸೇವೆಗೆ ಸಾರ್ಥಕತೆ ಸಿಕ್ಕಂತಾಗಿದೆ.
ಒಬ್ಬ ಮಗ, ಇಬ್ಬರು ಹೆಣ್ಣುಮಕ್ಕಳು ಇದ್ದರೂ ಮಡದಿ ಸಾವಿನ ಬಳಿಕ ಮಧುಸೂದನ್​ ರಾವ್​ ಒಬ್ಬಂಟಿಯಾದರು. ಹಲವು ವರ್ಷ ಕಾನೂನು ಸುವ್ಯವಸ್ಥೆಗಾಗಿ ಹಗಲಿರುಳು ಶ್ರಮಿಸದ್ದ ಅವರಿಗೆ ಇದೀಗ ಪೊಲೀಸ್​ ಇಲಾಖೆಯೇ ಆಸರೆಯಾಗಿದೆ.
ವಾಟ್ಸ್​ಆ್ಯಪ್​ ವಿಡಿಯೋ ಕರೆ ಮಾಡಿದ್ದ ಯುವತಿ ಬೆತ್ತಲಾಗಿ ನಿಂತಿದ್ದಳು! ಮುಂದೆ ಆಗಿದ್ದೆಲ್ಲವೂ ಅವಾಂತರ

ಆರ್​ ಆರ್​ ನಗರದಲ್ಲಿ ಜೆಡಿಎಸ್​ ಗೆಲ್ಲೋದಿಲ್ಲ ಎಂದ ಎಚ್​ಡಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + four =
Remember me
