ಹೊಸದುರ್ಗ:ಹೆಜ್ಜೇನು ದಾಳಿಯಿಂದಾಗಿ ನಿವೃತ್ತ ಯೋಧರೊಬ್ಬರು ಸಾವಿಗೀಡಾಗಿದ್ದಲ್ಲದೆ, ಇಬ್ಬರು ಗಾಯಗೊಂಡಿರುವ ಪ್ರಕರಣ ನಡೆದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.
ಜಿಲ್ಲೆಯ ಹೊಸದುರ್ಗದ ಕಡವಿಗೆರೆ ಎಂಬಲ್ಲಿ ಕೃಷಿ ಕೆಲಸದಲ್ಲಿದ್ದ ಜನರ ಮೇಲೆ ಹೆಜ್ಜೇನು ದಾಳಿ ಮಾಡಿತ್ತು. ಈ ಸಂದರ್ಭದಲ್ಲಿ ನಿವೃತ್ತ ಯೋಧ ಸುರೇಂದ್ರ ಸಿಂಗ್ (60) ಸಾವಿಗೀಡಾಗಿದ್ದಾರೆ.
ಹೆಜ್ಜೇನು ಕಡಿತದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸುರೇಂದ್ರ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೆಜ್ಜೇನು ದಾಳಿಗೆ ಸಿಲುಕಿದ್ದ ಇನ್ನಿಬ್ಬರು ಚೇತರಿಸಿಕೊಂಡಿದ್ದಾರೆ.
ಸುರೇಂದ್ರ ಸಿಂಗ್ ಸೇನೆಯಿಂದ ನಿವೃತ್ತಿಯಾದ ನಂತರ ಸ್ವಗ್ರಾಮ ಕಡವಿಗೆರೆಗೆ ಹಿಂದಿರುಗಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಧಾನಿಯಲ್ಲಿ ಸಿಗ್ತಿದೆ ಅರ್ಧಬೆಲೆಗೆ ಮದ್ಯ, ಕಳ್ಳಸಾಗಾಟ ಶುರು: 70ಕ್ಕೂ ಅಧಿಕ ಮಂದಿಯ ಬಂಧನ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + one =
Remember me
