ಬೆಂಗಳೂರು:ರಾಜ್ಯ ಸರ್ಕಾರ ಆದೇಶ ಹೊರಡಿಸಿ ಎರಡೂವರೆ ತಿಂಗಳು ಕಳೆದರೂ ಸಚಿವಾಲಯ ಸೇರಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಅಂದಾಜು 500ಕ್ಕೂ ಅಧಿಕ ನಿವೃತ್ತಿ ಅಧಿಕಾರಿಗಳು, ನೌಕರರು ಹುದ್ದೆ ಬಿಟ್ಟು ಕದಲುತ್ತಿಲ್ಲ. ತಮ್ಮ ಸರ್ಕಾರ ಹೊರಡಿಸಿರುವ ಆದೇಶವನ್ನು ಪಾಲಿಸಬೇಕಾದ ಕೆಲ ಸಚಿವರುಗಳೇ, ಬೇಕಾಬಿಟ್ಟಿ ನಿವೃತ್ತಿಯವರ ಸೇವೆ ಮುಂದುವರಿಸಲು ಟಿಪ್ಪಣಿ ಹೊರಡಿಸುತ್ತಿದ್ದಾರೆ. ಅಲ್ಲದೆ, ಸರ್ಕಾರಕ್ಕೆ ಹೆಚ್ಚು ಆದಾಯ ತರುವ ಇಲಾಖೆಗಳು ಹಾಗೂ ಸರ್ಕಾರದಿಂದ ಅತಿ ಹೆಚ್ಚು ಅನುದಾನ ಸಿಗುವ ಇಲಾಖೆಗಳಲ್ಲಿರುವ ವಿವಿಧ ವೃಂದದ ಲಾಭದಾಯಕ ಹುದ್ದೆಗಳಲ್ಲಿ ಹೆಚ್ಚು ನಿವೃತ್ತಿಯವರು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಸೇರಿ ಸರ್ಕಾರ ಹಲವು ಇಲಾಖೆಗಳಲ್ಲಿ ಹಾಗೂ ಸಚಿವಾಲಯದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿ, ನೌಕರರನ್ನು ಅನಗತ್ಯ ಹುದ್ದೆಗಳನ್ನು ಸೃಜಿಸಿ ಸಮಾಲೋಚಕರು, ವಿಶೇಷ ಸಂಪನ್ಮೂಲ ವ್ಯಕ್ತಿ, ಗ್ರೂಪ್​ “ಎ’, “ಬಿ’ವೃಂದದ ಲಾಭದಾಯಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಇವರಿಗೆ ವೇತನ, ವಾಹನ ಸೇರಿ ಇತರೆ ಸೌಲಭ್ಯ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ ನೂರಾರು ಕೋಟಿ ರೂ.ಹೊರೆಯಾಗುತ್ತಿದೆ. ಕಾರ್ಯಕ್ಷಮತೆ ಗುಣಮಟ್ಟ, ಉತ್ತರದಾಯಿತ್ವ ಕೊರತೆ ಇವರಲ್ಲಿ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆ, ಹೊರ ಗುತ್ತಿಗೆ ಆಧಾರದ ಮೇಲೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ನೌಕರರನ್ನು ಕೂಡಲೆ ಹುದ್ದೆಗಳಿಂದ ಬಿಡುಗಡೆಗೊಳಿಸಿ ಆ ಹುದ್ದೆಗಳಿಗೆ ಹಾಲಿ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳನ್ನು ನಿಯೋಜಿಸಬೇಕೆಂದು ಜ.23ರಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶ ಹೊರಬಂದ ಬಳಿಕ ಕೆಲವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿದರೆ, ಇನ್ನೂ ಹಲವು ನಿವೃತ್ತಿ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಪ್ರಭಾವ ಬಳಸಿ ಹುದ್ದೆಯಲ್ಲಿ ಕುಳಿತು ಕಾರ್ಯಭಾರ ನಡೆಸುತ್ತಿರುವುದು ಕಂಡುಬಂದಿದೆ.
ಆಡಳಿತಾತ್ಮಕ ಕೆಲಸ ಮೇಲೆಯೇ ಕಣ್ಣು:ಸರ್ಕಾರಿ ಹುದ್ದೆಯಿಂದ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ನೌಕರರನ್ನು ಪುನರ್​ ನೇಮಕ ಮಾಡಬಾರದು. ನಿವೃತ್ತರಾಗಿ ಮತ್ತೆ ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ನೌಕರರ, ಅಧಿಕಾರಿಗಳ ಸೇವೆ ಪರಿಶೀಲಿಸಿ ಮುಕ್ತಾಯಗೊಳಿಸಬೇಕು.ವೃಂದ ಮತ್ತು ನೇಮಕಾತಿ ನಿಯಮದಂತೆ ಹೊಸ ಸಿಬ್ಬಂದಿ ನೇಮಿಸಬೇಕೆಂದು ಸರ್ಕಾರ ಸ್ಪಷ್ಟವಾಗಿ ಸುತ್ತೋಲೆ ಹೊರಡಿಸಿದೆ. ಆದರೂ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ವರ್ಷದಿಂದ ವರ್ಷಕ್ಕೆ ನಿವೃತ್ತಿಯವರನ್ನು ನೇಮಿಸಿಕೊಳ್ಳಲಾಗುತ್ತಿದೆ. ಪ್ರತಿ ನಿತ್ಯ ಇಲಾಖೆಗಳಲ್ಲಿ ನಡೆಯುವ ಆಡಳಿತ್ಮಾಕ ಕೆಲಸಗಳಿಗೆ ಅನಗತ್ಯ ಮೂಗು ತೂರಿಸುತ್ತಿದ್ದಾರೆ. ಪ್ರತಿ ತಿಂಗಳು 40-50 ಸಾವಿರ ರೂ.ಪಿಂಚಣಿ ಪಡೆಯುತ್ತಿರುವ ನಿವೃತ್ತ ಅಧಿಕಾರಿಗಳು ಸರ್ಕಾರಿ ಹುದ್ದೆಯ ವ್ಯಾಮೋಹ ಬಿಡುತ್ತಿಲ್ಲ.
ರಾಜ್ಯದಲ್ಲಿ ಕೃಷಿ ಸಾಲ ಪ್ರಮಾಣ ಹೆಚ್ಚಳ: ಸಹಕಾರಿ ಬ್ಯಾಂಕ್​ಗಳಿಗೆ ಹೆಚ್ಚಿನ ರೈತರು ಮೊರೆ
ಕ್ರಮಕೈಗೊಳ್ಳುವ ಅಧಿಕಾರವೂ ಇಲ್ಲ:ಸರ್ಕಾರ ಅಧೀನದ ಸಂಸ್ಥೆಗಳ ಬೈಲಾ ಪ್ರಕಾರ ಹಾಗೂ ಕಾರ್ಮಿಕ ಕಾಯ್ದೆ ಅನ್ವಯ 60 ವರ್ಷ ತುಂಬಿದ ಬಳಿಕ ನಿವೃತ್ತ ಅಧಿಕಾರಿಗಳನ್ನು ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವಂತಿಲ್ಲ. ಸರ್ಕಾರದಿಂದ ಅನುಮತಿ ಪಡೆದು ಸಂಸ್ಥೆಯ ಆಡಳಿತ ಪರಿಷತ್ತು ಸಭೆಯಲ್ಲಿ ಮಂಡಿಸಿ ನೇಮಕಾತಿ ಮಾಡಿಕೊಳ್ಳಬೇಕು. ಆದರೆ, ಇದ್ಯಾವುದನ್ನೂ ಪಾಲಿಸದೆ ಕೆಲ ನಿವೃತ್ತ ಅಧಿಕಾರಿಗಳಿಗೆ ಟೆಂಡರ್​ ಸೇರಿ ಇತರ ಪ್ರಮುಖ ಕಡತ ವಿಲೇಗೆ ಜವಾಬ್ದಾರಿ ಹಂಚಲಾಗಿದೆ. ಕೆಲ ಸಂದರ್ಭದಲ್ಲಿ ಟೆಂಡರ್​ ಪ್ರಕ್ರಿಯೆಯಲ್ಲಿ ಡೀಲ್​ ಕುದುರಿಸಿ ಬಂದ ಕಮಿಷನ್​ ಹಣದಲ್ಲಿ ತಮಗೆ ಬೇಕಾದವರಿಗೂ ಹಂಚುಕೊಳ್ಳುತ್ತಿದ್ದಾರೆ. ಕೆಲ ನಿವೃತ್ತ ನೌಕರರಿಗೆ ಕಚೇರಿ ಅಧೀಕ್ಷಕರ ಹುದ್ದೆ ನೀಡಲಾಗಿದೆ. ಆಡಳಿತ ಕಾರ್ಯದಲ್ಲಿ ಏನಾದರೂ ತಪ್ಪು ಮಾಡಿದ್ದರೂ ಇವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವೂ ಸರ್ಕಾರಕ್ಕೆ ಇಲ್ಲ.
ಕೆಐಎಡಿಬಿಯಲ್ಲಿ 33 ನಿವೃತ್ತಿ ಅಧಿಕಾರಿಗಳು:ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ(ಕೆಐಎಡಿಬಿ) 33 ನಿವೃತ್ತಿ ಅಧಿಕಾರಿಗಳು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಆರ್ಥಿಕ ಸಲಹೆಗಾರರು, ಅಧೀಕ್ಷಕ ಅಭಿಯಂತರ, ತಾಂತ್ರಿಕ ಸಹಾಯಕ, ಹಿರಿಯ ಸಹಾಯಕ, ಸಹಾಯಕ ಕಾರ್ಯದರ್ಶಿ, ಅಧೀಕ್ಷಕರು, ರೆಕಾರ್ಡ್​ ಕೀಪರ್​, ಕಿರಿಯ, ಹಿರಿಯ ಸಹಾಯಕ, ಕಾನೂನು ಸಲಹೆಗಾರರು, ಅಟೆಂಡರ್​, ಸಹಾಯಕ ಅಭಿಯಂತರರು, ವ್ಯವಸ್ಥಾಪಕಿ, ತಹಶೀಲ್ದಾರ್​, ಶಿರಸ್ತೇದಾರ್​, ಭೂಮಾಪಕರು, ವ್ಯವಸ್ಥಾಪಕ ಹುದ್ದೆಗಳಲ್ಲಿ ಕುಳಿತು ಕಾರ್ಯಭಾರ ನಡೆಸುತ್ತಿದ್ದಾರೆ. ಲೋಕೋಪಯೋಗಿ, ಜಲಸಂಪನ್ಮೂಲ,ವೈದ್ಯಕಿಯಶಿಕ್ಷಣ ನಿರ್ದೇಶನಾಲಯ, ಆರೋಗ್ಯ, ವೈದ್ಯಕಿಯ ಕಾಲೇಜು, ಸರ್ಕಾರಿ ಆಸ್ಪತ್ರೆ, ಗ್ರಾಮೀಣಾಭಿಭಿವೃದ್ಧಿ ಮತ್ತು ಪಂಚಾಯತ್​ ರಾಜ್​, ಇಂಧನ,ಶಿಕ್ಷಣ, ನಿಗಮ ಮಂಡಳಿಗಳು ಸೇರಿ ಸರ್ಕಾರ ವಿವಿಧ ಇಲಾಖೆಗಳ ಹಲವು ಹುದ್ದೆಗಳಿಗೆ ಅಕ್ರಮವಾಗಿ ನಿವೃತ್ತ ನೌಕರರನ್ನು ನೇಮಿಸಿಕೊಳ್ಳಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
